Ashitha Soodlu

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29: ಕಳೆದ ದಿನ ಕೊರೋನಾ ಪಾಸಿಟಿವ್ ಬಂದಿದ್ದ ಸುಳ್ಯ ಶಾಸಕ ಎಸ್.ಅಂಗಾರ ಅವರ ಪತ್ನಿಗೂ ಇಂದು ಕೊರೋನಾ ದೃಢಪಟ್ಟಿದೆ. ಅಂಗಾರರಿಗೆ ಹಾಗೂ ಅವರ ಕಾರು ಚಾಲಕ ಮುರಳಿಯವರಿಗೆ ಪಾಸಿಟಿವ್ ಬಂದಿತ್ತು. ಅವರಿಬ್ಬರೂ ಕ್ವಾರಂಟೈನ್‍ನಲ್ಲಿದ್ದಾರೆ. ಇಂದು ಇವರಿಬ್ಬರ ಮನೆಯವರಿಗೆ ಕೊರೋನಾ ಆಂಟಿಜೆನ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಅಂಗಾರರ ಪತ್ನಿಗೆ, ಅವರ ಮನೆಯಲ್ಲಿರುವ ಇಬ್ಬರು ಬಂಧುಗಳಿಗೆ ಪಾಸಿಟಿವ್ ಪತೆಯಾಗಿದೆ.ಮುರಳಿಯವರ ಮನೆಯವರಿಗೆ ನೆಗೆಟಿವ್ ಬಂದಿದೆ.

ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ Read More »

ಕರಾವಳಿ, ಕರ್ನಾಟಕ

ಮುರಿದು ಬೀಳುವ ಸ್ಥಿತಿಯಲ್ಲಿ ಕಂದ್ರಪ್ಪಾಡಿ ಅಂಚೆ ಕಚೇರಿ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಚೇರಿಯ ಮೇಲ್ಚಾವಣಿಯು ತೀರಾ ಶಿಥಿಲಗೊಂಡಿದ್ದು, ಮುರಿದು ಬೀಳುವ ಹಂತಕ್ಕೆ ತಲುಪಿ, ಇದೀಗ ಇಲ್ಲಿನ ಸಿಬ್ಬಂದಿಗಳು ಭಯದಿಂದ ಕೆಲಸ ಕಾರ್ಯ ನಿರ್ವಹಿಸುವಂತಾಗಿದೆ.  ಇಲಾಖೆ ಇದನ್ನು ದುರಸ್ತಿ ಮಾಡುವ ಬದಲು ಸ್ಥಳಾಂತರ ನಡೆಸುವ ಹುನ್ನಾರ ನಡೆಸುತ್ತಿದ್ದು, ಇಲಾಖೆಯ ಆದೇಶದಂತೆ ರಾಜೀವ್ ಗಾಂಧಿ ಸೇವಾಕೇಂದ್ರ ಮಾವಿನಕಟ್ಟೆ ಸ್ಥಳಾಂತರಗೊಳ್ಳಲಿದೆ ಎಂದು ಮಾಹಿತಿಯಿದೆ. ಬೇರೆಡೆ ಸ್ಥಳಾಂತರಿಸಿದರೆ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ, ಮಾವಿನಕಟ್ಟೆಗೆ ಹೋಗಲು ವಾಹವದ ವ್ಯವಸ್ಥೆ ಸರಿಯಾಗಿಲ್ಲದೇ ಇರುವ

ಮುರಿದು ಬೀಳುವ ಸ್ಥಿತಿಯಲ್ಲಿ ಕಂದ್ರಪ್ಪಾಡಿ ಅಂಚೆ ಕಚೇರಿ Read More »

ಕರಾವಳಿ, ಕರ್ನಾಟಕ

ಕೊರಿಯರ್ ಮೂಲಕ ಗಾಂಜಾ ಮಾರಾಟ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29: ನಗರದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸರಬರಾಜು ಜೋರಾಗಿಯೇ ನಡೆಯುತ್ತಿದೆ. ಇದೀಗ ಕೊರಿಯರ್ ಮೂಲಕ ಗಾಂಜಾ ಹಂಚುತ್ತಿದ್ದ ಅರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಶಿವಾಜಿನಗರದ ಧೀರಜ್ ಕಪೂರ್ ಎಂಬಾತ ಆರೋಪಿ. ಈತ ಖಾಸಗಿ ಶಾಲೆಯಲ್ಲಿ ಓದುತ್ತಿರುವ 14 ವರ್ಷದ ಹುಡುಗನ ವಿಳಾಸಕ್ಕೆ ಪಾರ್ಸೆಲ್ ಮೂಲಕ ಗಾಂಜಾ ಕಳುಹಿಸಿದ್ದ. ಈ ಸಂಬಂಧ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆ ಮಾಹಿತಿಯನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.  

ಕೊರಿಯರ್ ಮೂಲಕ ಗಾಂಜಾ ಮಾರಾಟ ➤ ಆರೋಪಿ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ

(ನ್ಯೂಸ್ ಕಡಬ) newskadaba.com ತ್ರಿಪುರ, ಆ. 29: ತಾಳಿ ಕಟ್ಟಿದ ಗಂಡನನ್ನು ಪತ್ನಿಯೊಬ್ಬಳು ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ್ದಾಳೆ. ಕೌಟುಂಬಿಕ ಕಾರಣಗಳಿಂದ ತನ್ನ ಪತಿ ಸಂಜಿತ್ ರೆಂಗ್ ನನ್ನು ಪತ್ನಿ ಭಾರತಿ ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆ ಮಾಡಿದ ಬಳಿಕ ಮನೆಯ ಬೆಡ್ ರೂಮಿನಲ್ಲಿ ಪತಿಯ ಶವವನ್ನು ಸಮಾಧಿ ಮಾಡಿದ್ದಾಳೆ. ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿದ ಪತ್ನಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.    

ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ಟಿಪ್ಪರ್ ಢಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್ ಕಂಬ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 29. ಟಿಪ್ಪರ್ ಲಾರಿಯೊಂದು ಹಿಂತೆಗೆಯುವ ರಭಸದಲ್ಲಿ ವಿದ್ಯುತ್ ಕಂಬಕ್ಕೆ ಘಟನೆ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಭಂಡಾರಿಬೆಟ್ಟುವಿನಲ್ಲಿ ನಡೆದಿದೆ. ಬಿ.ಸಿ.ರೋಡ್ – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ವತ್ಸಿ ರೆಸಿಡೆನ್ಸಿಯ ಬಳಿ ಟಿಪ್ಪರ್ ಲಾರಿ ತಿರುಗಿಸಲೆಂದು  ಸಂಪರ್ಕ ರಸ್ತೆಗೆ ಇಳಿಸಿದ್ದು, ಮೇಲಕ್ಕೆ ಬರಲಾಗದೇ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬವು ಮುರಿದು ಬಿದ್ದಿದೆ. ಘಟನೆ ಸಂದರ್ಭ ಲಾರಿ ಚಾಲಕ ಕುಡಿತದ ಮತ್ತಿನಲ್ಲಿದ್ದ ಎಂದು ಸ್ದಳೀಯರು ತಿಳಿಸಿದ್ದಾರೆ. ಹೆದ್ದಾರಿಯ ಕಾಮಗಾರಿಯಿಂದ

ಬಂಟ್ವಾಳ: ಟಿಪ್ಪರ್ ಢಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್ ಕಂಬ Read More »

ಕರಾವಳಿ, ಕ್ರೈಮ್ ನ್ಯೂಸ್

ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29: ಪುತ್ತೂರಿನ ಗಾಯಕ ಜಗದೀಶ್ ಪುತ್ತೂರು ಅವರಿಗೆ ಓಮನ್ ತುಳುವೆರ್ ಸಂಘಟನೆಯ ವತಿಯಿಂದ ತುಳುನಾಡ ಗಾನ ಗಂಧರ್ವ ಬಿರುದು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಕೊಡಿಯಾಲ್‍ಬೈಲ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ನಿರ್ಮಾಪಕ ಕಿಶೋರ್.ಡಿ.ಶೆಟ್ಟಿ, ಸಂಗೀತ ನಿರ್ದೇಶಕ ಕಿಶೋರ್ ಹಾಗೂ ನಿರ್ಮಾಪಕ ಸಂದೇಶ್ ಬಂಗೇರ ಉಪಸ್ಥಿತರಿದ್ದರು.  

ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ

ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ ➤ ಓರ್ವ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com ಶ್ರೀನಗರ, ಆ. 29. ಪುಲ್ವಾಮಾದ ಝಾದೂರ ಎಂಬ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯು ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಮಾಹಿತಿ ತಿಳಿದ ಭದ್ರತಾ ಪಡೆಗಳು ಝಾದೂರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಉಗ್ರರ ಗುಂಡಿನ ದಾಳಿಗೆ ಓರ್ವ ಯೋಧ  ಹುತಾತ್ಮನಾಗಿದ್ದು, ಇದಕ್ಕೂ ಮುನ್ನ ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು

ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ ➤ ಓರ್ವ ಯೋಧ ಹುತಾತ್ಮ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ತುಳುನಾಡಿನ ಅತ್ಲೆಟಿಕ್ ಕೋಚ್ ಸೂತ್ರಬೆಟ್ಟು ಪುರುಷೋತ್ತಮ್ ರೈ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29.  ದೇಶದ ಪ್ರತಿಷ್ಠಿತ ಪ್ರಶಸ್ತಿಗಳ ಪೈಕಿ  ದ್ರೋಣಾಚಾರ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡದ ಪುತ್ತೂರಿನ ಸೂತ್ರಬೆಟ್ಟು ಮನೆತನದ ಪುರುಷೋತ್ತಮ್ ರೈ ಆಯ್ಕೆಯಾಗಿ  ಇಂದು ಪ್ರಶಸ್ತಿ ವಿತರಣೆಯ ಖುಷಿಯಲ್ಲಿರುವಾಗಲೇ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಶಸ್ತಿ ವಿತರಣೆಯ ಸಂತಸದಲ್ಲಿರುವಾಗಲೇ ವಿಧಿಯಾಟವೇ ಬೇರೆಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಪುರುಷೋತ್ತಮ್ ರೈ ತನ್ನ ಜೀವಮಾನದ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ಅದಕ್ಕೆ ಒಂದು ದಿನ ಇರುವಾಗಲೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.  ಕಳೆದ 35 ವರ್ಷಗಳ

ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ತುಳುನಾಡಿನ ಅತ್ಲೆಟಿಕ್ ಕೋಚ್ ಸೂತ್ರಬೆಟ್ಟು ಪುರುಷೋತ್ತಮ್ ರೈ ವಿಧಿವಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಎಸ್. ಅಂಗಾರರ ಆರೋಗ್ಯ ಸುದಾರಿಸಲು ಭಜನೆಯ ಮೂಲಕ ದೇವರಲ್ಲಿ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ಸುಳ್ಯದ ಶಾಸಕ ಎಸ್.ಅಂಗಾರರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಶೀಘ್ರವಾಗಿ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥನೆಯನ್ನು ಕಳೆದ ದಿನ ಯೇನೆಕಲ್ಲಿನಲ್ಲಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಭಜನೆ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷರು, ಸದಸ್ಯರು, ಊರಿನ ಕೆಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.    

ಎಸ್. ಅಂಗಾರರ ಆರೋಗ್ಯ ಸುದಾರಿಸಲು ಭಜನೆಯ ಮೂಲಕ ದೇವರಲ್ಲಿ ಪ್ರಾರ್ಥನೆ Read More »

ಕರಾವಳಿ, ಕರ್ನಾಟಕ

ಕಡಬ: ನಿಗೂಢವಾಗಿ ಕಾಣೆಯಾಗಿದ್ದ ಯುವಕ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ. 29. ಫೈನಾನ್ಸ್ ನಲ್ಲಿ ಹಣ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದ ಯುವಕನೋರ್ವ ಮನೆಗೆ ಬಾರದೆ ನಾಪತ್ತೆಯಾಗಿ ಪ್ರಕರಣ ದಾಖಲಾಗಿರುವ ಕೆಲವೇ ಗಂಟೆಗಳಲ್ಲಿ ಯುವಕ ಮನೆಗೆ ಮರಳಿದ್ದಾನೆ. ಚಾರ್ವಾಕ ನಿವಾಸಿ ಕೃಷ್ಣಪ್ಪ ಗೌಡ ಎಂಬವರ ಪುತ್ರ ಚಾಲಕ ವೃತ್ತಿ ಮಾಡುತಿದ್ದ ಲೋಕೇಶ್ (25) ಕಾಣೆಯಾಗಿದ್ದು ಇದೀಗ ಪತ್ತೆಯಾಗಿದ್ದಾನೆ. ಆ.26ರಂದು ಮನೆಯಿಂದ ಪುತ್ತೂರಿನ ಬಜಾಜ್ ಫೈನಾನ್ಸ್ ನಲ್ಲಿ ಸಾಲದ ಬಾಕಿ ಹಣ ಕಟ್ಟಲು ಹೋಗಿ ಸಂಜೆಯವರೆಗೂ ಮನೆಗೆ ಹಿಂತಿರುಗದೆ ಇದ್ದುದರಿಂದ ಕಡಬ

ಕಡಬ: ನಿಗೂಢವಾಗಿ ಕಾಣೆಯಾಗಿದ್ದ ಯುವಕ ಪತ್ತೆ Read More »

ಕರಾವಳಿ, ಕರ್ನಾಟಕ
Scroll to Top