Ashitha Soodlu

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಪ್ರಕರಣ ➤ ಬಾಂಬರ್ ಆದಿತ್ಯ ರಾವ್ ಗೆ ಇಂದು ಮಂಪರು ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.03:  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಆದಿತ್ಯ ರಾವ್ ಮಂಪರು ಪರೀಕ್ಷೆ ಇಂದು ನಡೆಯಲಿದೆ.  ಬೆಂಗಳೂರಿನಲ್ಲಿ ಆದಿತ್ಯ ರಾವ್ ಮಂಪರು ಪರೀಕ್ಷೆ ನಡೆಯಲಿರುವುದರಿಂದ ಬುಧವಾರ ಆತನನ್ನು ಮಂಗಳೂರಿನಿಂದ ಕರೆದುಕೊಂಡು ಹೋಗಲಾಗಿದೆ. ಬೆಂಗಳೂರಿನ ಮಡಿವಾಳದ ಫೋರೆನ್ಸಿಕ್​​ ಸೈನ್ಸ್ ಪ್ರಯೋಗಾಲಯದಲ್ಲಿ ಆತನ ಮಂಪರು ಪರೀಕ್ಷೆ ನಡೆಯಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಈತ ಆತಂಕ ಸೃಷ್ಟಿಸಿದ್ದ. ಬಳಿಕ ಪತ್ತೆಯಾದ ಬಾಂಬ್​​ಅನ್ನು ಬಾಂಬ್ ನಿಷ್ಕ್ರಿಯ ದಳ ಖಾಲಿ […]

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಪ್ರಕರಣ ➤ ಬಾಂಬರ್ ಆದಿತ್ಯ ರಾವ್ ಗೆ ಇಂದು ಮಂಪರು ಪರೀಕ್ಷೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಲ್.ಪಿ.ಜಿ ಸಬ್ಸಿಡಿ ರದ್ದುಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಸೆ. 03. ದೇಶದ ಜನರ ಖಾತೆಯಲ್ಲಿ ಇನ್ನು ಮುಂದೆ ಅಡುಗೆ ಅನಿಲದ ಆವುದೇ ಸಬ್ಸಿಡಿಯು ಜಮೆ ಆಗುವುದಿಲ್ಲ. ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇಂದ್ರ ಸರಕಾರವು ಈ ಆದೇಶವನ್ನು ಹೊರಡಿಸಿದೆ. ಜಾಗತಿಕ ಮಟ್ಟದಲ್ಲಿ ತೈಲದ ದರ ಕುಸಿತ ಹಾಗೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರದ ನಿಯಮಿತ ಏರಿಕೆಯಿಂದಾಗಿ ಎಲ್‌.ಪಿ.ಜಿ ದರವು ಮಾರುಕಟ್ಟೆ ದರಕ್ಕೆ ಸಮನಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರಕಾರ ಘೋಷಣೆ ಮಾಡಿದೆ. ಸೆ. 1

ಎಲ್.ಪಿ.ಜಿ ಸಬ್ಸಿಡಿ ರದ್ದುಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರಕಾರ Read More »

ಕರ್ನಾಟಕ

ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಪುತ್ತೂರು. ಸೆ.03:   ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣವಾಗಿದ್ದು ಇಂದು ( ಸೆ.03) ಕಾರ್ತಿಕ್ ರವರ ತಂದೆ ರಮೇಶ್ ಸುವರ್ಣ ಹಾಗೂ ತಾಯಿ ಹೇಮಾವತಿ ಯವರು ಲೋಕಾರ್ಪಣೆ ಮಾಡಿದರು.   ಈ ಸಂದರ್ಭದಲ್ಲಿ ಹಿಂ.ಜಾ.ವೇ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ , ತಾ. ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ

ದಿ. ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಾರ್ವಜನಿಕ ಬಸ್ ತಂಗುದಾಣ ಲೋಕಾರ್ಪಣೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು: ಅಕ್ರಮ ವಜ್ರ ಸಾಗಾಟ ➤ಕಡಬದ ವ್ಯಕ್ತಿಯ ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 03: ವಜ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕಡಬ ತಾಲೂಕಿನ ವ್ಯಕ್ತಿಯ ಸಹಿತ ಮೂವರನ್ನು ಬೆಂಗಳೂರು ಸಿಟಿ ಬಳಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.   ಆರೋಪಿಗಳನ್ನು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರವಿ ಕುಮಾರ್(54ವ), ಕಡಬ ತಾಲೂಕಿನ ಬೆಳಂದೂರು ಗ್ರಾಮದ ಸುಧೀರ್(28ವ) ಹಾಗೂ ಬೆಳ್ತಂಗಡಿ ತಾಲೂಕಿನ ಅರಂಬೋಡಿ ಗ್ರಾಮದ ಪ್ರವೀಣ್‌ ಕುಮಾರ್ (51ವ.) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 9 ವಜ್ರದ ಹರಳುಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ

ಬೆಂಗಳೂರು: ಅಕ್ರಮ ವಜ್ರ ಸಾಗಾಟ ➤ಕಡಬದ ವ್ಯಕ್ತಿಯ ಸಹಿತ ಮೂವರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ➤ ಓರ್ವನ ವಿರುದ್ದ ದೂರು

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 03. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಓರ್ವ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆ ಮಾತುಕತೆಗಾಗಿ ಮೇ 20ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರವೆಸಗಿದ್ದಾನೆ. ಜೂನ್ 12 ರಂದು ಮಂಗಳೂರಿನ ವಸತಿಗೃಹಕ್ಕೆ ಕರೆಸಿ, ಅತ್ಯಾಚಾರವೆಸಗಿ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ➤ ಓರ್ವನ ವಿರುದ್ದ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ‘ಪೋಲಿ’ಸ್ ನಿಂದ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.03:  ರಕ್ಷಣೆ ಕೊಡಬೇಕಾದ ಪೊಲೀಸಪ್ಪ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ  ಪೊಲೀಸ್ ಹುದ್ದೆಗೆ ಕಳಂಕ ತಂದಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮೇ 20ರಂದು ಮದುವೆ ಮಾತುಕತೆಗಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ.

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ‘ಪೋಲಿ’ಸ್ ನಿಂದ ಅತ್ಯಾಚಾರ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಮುಬಾರಕ್ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ  ಕಾರ್ಯಕ್ರಮವು  ಕುದ್ಲೂರು ಮಸೀದಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದ್ಲೂರು ಮುಬಾರಕ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮರ್ವೇಲ್ ವಹಿಸಿದರು. ಕುದ್ಲೂರು ಮಸೀದಿಯ ಖತೀಬರಾದ ಅಶ್ರಫ್ ರಹ್ಮಾನಿ ವೀರಮಂಗಿಲ ಕಾರ್ಯಕ್ರಮವನ್ನು ದುಆ ಆಶೀರ್ವಚನ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SKSSF  ಕುದ್ಲೂರು ಶಾಖೆ ಅಧ್ಯಕ್ಷರಾದ ಅಶ್ರಫ್ ಕೋರೆಪದವು ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್

ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ Read More »

ಕರಾವಳಿ, ಕರ್ನಾಟಕ

ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ

(ನ್ಯೂಸ್ ಕಡಬ) newskadaba.com ಶಿವಮೊಗ್ಗ. ಸೆ.03:  ಕೋವಿಡ್ ಸೋಂಕಿಗೆ ಭದ್ರಾವತಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಮೂರುದಿನಗಳ ಹಿಂದಷ್ಟೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಅಪ್ಪಾಜಿ ಗೌಡರಿಗೆ ಇಂದು ಉಸಿರಾಟದ ತೊಂದರೆ ಅತಿಹೆಚ್ಚು ಕಾಣಿಸಿಕೊಂಡಿದೆ.     ಕೋವಿಡ್-19 ನಿಂದಾಗಿ ಉಸಿರಾಟ ತೊಂದರೆ ಹೆಚ್ಚಾದ ಪರಿಣಾಮ ಅಪ್ಪಾಜಿಯವರನ್ನ ಇಂದು ಸಂಜೆ 7 ಕ್ಕೆ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆಟ್ರೋದಲ್ಲಿಯೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿಯವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಸುಮಾರು 10-30

ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ Read More »

ಕರ್ನಾಟಕ

ನರೇಂದ್ರ ಮೋದಿ ವೈಯಕ್ತಿಕ ಟ್ಟಿಟ್ಟರ್ ಖಾತೆ ಹ್ಯಾಕ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 03 : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್‌ ಆಗಿರುವ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವುದನ್ನು ಇಂದು (ಗುರುವಾರ) ಟ್ವಿಟರ್‌ ಖಚಿತ ಪಡಿಸಿದೆ. ಪರಿಹಾರ ನಿಧಿಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಮಾಡುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ವೆಬ್‌ಸೈಟ್‌ ಖಾತೆಯಿಂದ ಮನವಿ ಪ್ರಕಟಗೊಂಡಿದೆ.   ಮೋದಿ ಅವರ ವೆಬ್‌ಸೈಟ್‌ ಖಾತೆಯ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು

ನರೇಂದ್ರ ಮೋದಿ ವೈಯಕ್ತಿಕ ಟ್ಟಿಟ್ಟರ್ ಖಾತೆ ಹ್ಯಾಕ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೆ.7ರಿಂದ ಪ್ರವಾಸಿಗರಿಗೆ ಮುಕ್ತವಾದ ನಂದಿಗಿರಿಧಾಮ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಸೆ. 03. ಸೆಪ್ಟೆಂಬರ್‌ 7ರಿಂದ ನಂದಿಗಿರಿಧಾಮವು ಪ್ರವಾಸಿಗರಿಗೆ ಪ್ರವೇಶಕ್ಕೆ ಮುಕ್ತವಾಗಲಿದೆ. ಸೆಪ್ಟೆಂಬರ್‌ 7ರಿಂದ ಪ್ರತಿದಿನ ಬೆಳಗ್ಗೆ 8ರಿಂದ 5 ರವರೆಗೆ ಮಾತ್ರ ಪ್ರವಾಸಿಗರಿಗೆ ನಂದಿಗಿರಿಧಾಮದ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗಿದೆ. ಕೊರೋನಾ ಹಿನ್ನೆಲೆಯಿಂದ ವಿಶ್ವವಿಖ್ಯಾತಿಯಾದ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅನ್‌‌ಲಾಕ್‌ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ನಂದಿಗಿರಿಧಾಮದ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧವನ್ನು ತೆರವುಮಾಡಲಾಗಿದೆ.

ಸೆ.7ರಿಂದ ಪ್ರವಾಸಿಗರಿಗೆ ಮುಕ್ತವಾದ ನಂದಿಗಿರಿಧಾಮ Read More »

ಕರಾವಳಿ
Scroll to Top