ಎಲ್.ಪಿ.ಜಿ ಸಬ್ಸಿಡಿ ರದ್ದುಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಸೆ. 03. ದೇಶದ ಜನರ ಖಾತೆಯಲ್ಲಿ ಇನ್ನು ಮುಂದೆ ಅಡುಗೆ ಅನಿಲದ ಆವುದೇ ಸಬ್ಸಿಡಿಯು ಜಮೆ ಆಗುವುದಿಲ್ಲ. ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇಂದ್ರ ಸರಕಾರವು ಈ ಆದೇಶವನ್ನು ಹೊರಡಿಸಿದೆ.

ಜಾಗತಿಕ ಮಟ್ಟದಲ್ಲಿ ತೈಲದ ದರ ಕುಸಿತ ಹಾಗೂ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರದ ನಿಯಮಿತ ಏರಿಕೆಯಿಂದಾಗಿ ಎಲ್‌.ಪಿ.ಜಿ ದರವು ಮಾರುಕಟ್ಟೆ ದರಕ್ಕೆ ಸಮನಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರಕಾರ ಘೋಷಣೆ ಮಾಡಿದೆ. ಸೆ. 1 ರಂದು ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲದ ದರವು ಸಿಲಿಂಡರ್‌ಗೆ 594 ರೂ. ಆಗಿದೆ. ಹೀಗಾಗಿ ‌ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಯ ರೂಪದಲ್ಲಿ ಬರುವ ಸಬ್ಸಿಡಿಯನ್ನು ನೀಡುವ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ.

Scroll to Top