Ashitha Soodlu

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 05: ಕಳೆದ ಶುಕ್ರವಾರ ಕೊರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಬಂದಿದ್ದ ಸುಳ್ಯ ಶಾಸಕ ಎಸ್‌.ಅಂಗಾರರು ಇಂದು ಮತ್ತೆ ಕೊರೋನ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ. ಅವರು ಒಂದು ವಾರಗಳ ಕಾಲ ಕ್ವಾರಂಟೈನ್‌ ನಲ್ಲಿದ್ದರು. ಅವರ ಪತ್ನಿ ಮತ್ತು ಕಾರು ಚಾಲಕನನ್ನು ಕೂಡ ಪರೀಕ್ಷೆ ಮಾಡಲಾಗಿದ್ದು ಅವರ ವರದಿಯೂ ಕೂಡ ನೆಗೆಟಿವ್‌ ಬಂದಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್ Read More »

ಕರಾವಳಿ, ಕರ್ನಾಟಕ

ಅಕ್ರಮವಾಗಿ ಮರಳು ಸಾಗಾಟ 15 ಲೋಡ್‌ ಮರಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 05: ಕುಂಬಳೆ ಶಿರಿಯ ಪರಿಸರದಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ 15 ಲೋಡ್ ಮರಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಶಿರಿಯ ಸಮುದ್ರ ತೀರದಿಂದ ಮರಳನ್ನು ತಂದು ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಸಂಗ್ರಹಿಸಡಲಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ನಿಗಾ ಕಡಿಮೆಯಾಗುತ್ತಿದ್ದಂತೆ ಅಕ್ರಮ ಮರಳು ಜಾಲ ಸಕ್ರಿಯವಾಗಿತ್ತು. ಕಳೆದ ಒಂದು ತಿಂಗಳಿನಿಂದ ಮಂಜೇಶ್ವರ ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಐದಕ್ಕೂ ಅಧಿಕ ಸ್ಥಳಗಳಿಂದ ಅಕ್ರಮ ಮರಳು ದಾಸ್ತಾನು ಪತ್ತೆ ಹಚ್ಚಲಾಗಿತ್ತು. ಹಗಲು

ಅಕ್ರಮವಾಗಿ ಮರಳು ಸಾಗಾಟ 15 ಲೋಡ್‌ ಮರಳು ಪೊಲೀಸ್ ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗಾಂಜಾವನ್ನು ತುಳಸಿಗೆ ಹೋಲಿಸಿದ ನಟಿ ನಿವೇದಿತಾ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 05. ಗಾಂಜಾವನ್ನು ತುಳಸಿ ಗಿಡಕ್ಕೆ ಹೋಲಿಕೆ ಮಾಡಿದ್ದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಗಾಂಜಾ ತುಳಸಿಯಷ್ಟೇ ಪವಿತ್ರವಾದದ್ದು ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಮಲ್ಲೇಶ್ವರಂ ನಿವಾಸಿಯೋರ್ವರು ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ದಾಖಲಿಸಿದ್ದರು.

ಗಾಂಜಾವನ್ನು ತುಳಸಿಗೆ ಹೋಲಿಸಿದ ನಟಿ ನಿವೇದಿತಾ ವಿರುದ್ದ ಪ್ರಕರಣ ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಂಬಿಎ ವಿದ್ಯಾರ್ಥಿನಿ ಅನಿಷಾ ಆತ್ಮಹತ್ಯೆ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.05:  ಎಂಬಿಎ ವಿದ್ಯಾರ್ಥಿನಿ ಅನಿಷಾ (26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರಿಸಿಕೊಂಡಿದ್ದ ಆಕೆಯ ಪ್ರಿಯಕರ, ಆರೋಪಿ ಚೇತನ್ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.   ಆಗಸ್ಟ್.21 ರಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆರೋಪಿ ಚೇತನ್ ತಲೆಮರಿಸಿಕೊಂಡಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುವತಿ ಮನೆಯವರಯ ಯುವಕನ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ದೂರು ದಾಖಲಿಸಿದ್ದರು. ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಪತ್ತೆ ವಿಭಾಗದ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು

ಎಂಬಿಎ ವಿದ್ಯಾರ್ಥಿನಿ ಅನಿಷಾ ಆತ್ಮಹತ್ಯೆ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ

(ನ್ಯೂಸ್ ಕಡಬ) newskadaba.com ಪಂಜ, ಸೆ. 05: ಹಿಂದೂ ಜಾಗರಣ ವೇದಿಕೆ ಪಂಜ ವಲಯ, ಕೇನ್ಯ ಘಟಕ ಇದರ ಶ್ರೀ ಮಹಾವಿಷ್ಣು ಶಾಖೆಯು ಇಂದು ಸುಬ್ರಹ್ಮಣ್ಯ ಕೆ.ಬಿ.ಕಣ್ಕಲ್‌ ಇವರ ಮನೆಯಲ್ಲಿ ರಚನೆಯಾಯಿತು.     ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ರಾಜೀವ್‌ ಗೌಡ ಕಣ್ಕಲ್‌, ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ,ಉಪಾಧ್ಯಕ್ಷರಾಗಿ ವಿನ್ಯಾಸ್‌ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್‌. ಆನೆಮನೆ ಕಾರ್ಯದರ್ಶಿಗಳಾಗಿ ಪ್ರವೀಣ್‌ ಗೆಜ್ಜೆ, ಸುರೇಶ್‌ ನೆಲ್ಯಡ್ಕ, ಸಂಪರ್ಕ ಪ್ರಮುಖ ವಾಸುದೇವ ಆನೆಮನೆ, ಹಿಂದೂ ಯುವವಾಹಿನಿ ಪ್ರಮುಖರಾಗಿ ಪದ್ಮನಾಭ ಕೆರೆಕ್ಕೋಡಿ

ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ Read More »

ಕರಾವಳಿ, ಕರ್ನಾಟಕ

ಮಂಗಳೂರು : ಬಾಂಬರ್ ಆದಿತ್ಯರಾವ್ ನ ಮಂಪರು ಪರೀಕ್ಷೆ ಮುಕ್ತಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.05:  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯರಾವ್ ಮಂಪರು ಪರೀಕ್ಷೆ ಕಳೆದ ದಿನ ಮುಕ್ತಾಯಗೊಂಡಿದೆ. ಬೆಂಗಳೂರಿನ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಎರಡು ದಿನಗಳ ಆದಿತ್ಯ ರಾವ್ ಅವರ ಮಂಪರು ಪರೀಕ್ಷೆಯನ್ನು ನಡೆಸಲಾಗಿತ್ತು.   ಮಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣಕ್ಕೆ ಆರೋಪಿ ಆದಿತ್ಯ ರಾವ್ ಬಾಂಬ್ ಇಟ್ಟು, ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು ತನಿಖೆ ನಡೆಸಿದ್ದರು. ಆದರೆ ತನಿಖೆ ಸಂದರ್ಭ ಪೊಲೀಸರ ಕೆಲವೊಂದು

ಮಂಗಳೂರು : ಬಾಂಬರ್ ಆದಿತ್ಯರಾವ್ ನ ಮಂಪರು ಪರೀಕ್ಷೆ ಮುಕ್ತಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಾಲ್ಯ ವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಕ್ರಮ ➤ ಜಿಲ್ಲಾಧಿಕಾರಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 04. ಮಕ್ಕಳು ನಿಗದಿತ ಪ್ರಾಯ ತಲುಪುವ ಮೊದಲು ಅವರಿಗೆ ವಿವಾಹ ನಡೆಸಿದರೆ, ಅದರಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ   ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದರೆ,  ಮಕ್ಕಳ ಪಾಲಕರು, ಮದುವೆ ಹಾಲ್ ಅಥವಾ ಕಲ್ಯಾಣ ಮಂಟಪಗಳ

ಬಾಲ್ಯ ವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಕ್ರಮ ➤ ಜಿಲ್ಲಾಧಿಕಾರಿ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಧರ್ಮಸ್ಥಳದಿಂದ ಶಿಕ್ಷಣ ಕ್ಷೇತ್ರಕ್ಕೆ 17 ಕೋಟಿ ರೂ. ಸಹಕಾರ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಸೆ.05:  ವಿದ್ಯಾಕ್ಷೇತ್ರಕ್ಕೆ ಧರ್ಮಸ್ಥಳದಿಂದ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ.ಈ ಬಾರಿ ವಿದ್ಯಾಸಂಸ್ಥೆಗಳಿಗೆ ಕೊಡುವ ಸಹಕಾರದಲ್ಲಿ ವಿಶೇಷವಾಗಿ ಬೆಂಚು-ಡೆಸ್ಕ್ ಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಮರದ ಬಳಕೆ ಇಲ್ಲದೆ ಸಿಮೆಂಟ್ ಮತ್ತು ತೆಂಗಿನ ಮರದ ಕಾಂಡದಿಂದ ತಯಾರಿಸಲಾದ ಪರಿಸರ ಸ್ನೇಹಿ ಬೆಂಚು-ಡೆಸ್ಕ್ ಗಳನ್ನು 1990 ನೇ ಇಸವಿಯಿಂದ ಇದುವರೆಗೆ ಕರ್ನಾಟಕ ರಾಜ್ಯದ 9645 ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಫಾರಸಿನೊಂದಿಗೆ 17 ಕೋಟಿ ರೂ. ಮೌಲ್ಯದ ಬೆಂಚು-ಡೆಸ್ಕ್ ಗಳನ್ನು ನೀಡಲಾಗಿದೆ.   ಈ ವರ್ಷದ

ಧರ್ಮಸ್ಥಳದಿಂದ ಶಿಕ್ಷಣ ಕ್ಷೇತ್ರಕ್ಕೆ 17 ಕೋಟಿ ರೂ. ಸಹಕಾರ Read More »

ಕರಾವಳಿ, ಕರ್ನಾಟಕ

ಮೂಡುಬಿದಿರೆ: ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್‌ ಪದವಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಸೆ. 05: ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಹಿಂದಿ ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್.‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.     “ಮಧು ಕಾಂಕರಿಯಾ ಕೆ ಕಥಾ ಸಾಹಿತ್ಯ ಮೆ ಮಾನವೀಯ ಸಂವೇದನಾ” ಎನ್ನುವ ವಿಷಯದ ಬಗ್ಗೆ ಡಾ.ಪ್ರಭಾ.ವಿ.ಭಟ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು. ಅವರು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ಸಂತೋಷ್‌ ಕುಮಾರ್‌ ಅವರ ಪತ್ನಿ ಹಾಗೂ ಸುಳ್ಯ ಕೇರ್ಪಳದ

ಮೂಡುಬಿದಿರೆ: ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್‌ ಪದವಿ Read More »

ಕರಾವಳಿ, ಕರ್ನಾಟಕ

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಮರಳಿ ಮನೆಗೆ

(ನ್ಯೂಸ್ ಕಡಬ) newskadaba.com  ಕೊಪ್ಪಳ, ಸೆ.05. ತಂದೆಯು ಆಟ ಕಡಿಮೆ ಮಾಡಿ, ಪಾಠದ ಕಡೆಗೆ ಗಮನ ಕೊಡು ಎಂದಿದಕ್ಕೆ ಮನೆಯನ್ನೇ  ಬಿಟ್ಟು ಹೋಗಿದ್ದ ಮಗನ ಕುರಿತು ಹೆತ್ತವರು ಪೊಲೀಸ್ ಸ್ಟೇಷನ್ನಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಎರಡು ವರ್ಷಗಳ ನಂತರ ನಾಪತ್ತೆಯಾಗಿದ್ದ ಮಗನನ್ನು ಪೊಲೀಸರು ಮತ್ತೆ ಹೆತ್ತವರ ಬಳಿ ತಲುಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.   ಮಹಮ್ಮದ್ ಫಯಾಜ್ ಎಂಬ ಹುಡುಗ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ. ಈತ ಪ್ರತಿಭಾವಂತನಾಗಿದ್ದು, ಮಗನ ಮೇಲೆ ಅಪಾರ ಭರವಸೆ ಹೊಂದಿದ್ದ

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಮರಳಿ ಮನೆಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top