Ashitha Soodlu

ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಗ್ರಾ.ಪಂ.ಸದಸ್ಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.10: ಅಸ್ವಸ್ಥನಾಗಿ ಪ್ರಯಾಣಿಕರ ತಂಗುದಾಣದಲ್ಲಿ ನರಳಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ  ಮಾಜಿ ಗ್ರಾ.ಪಂ.ಸದಸ್ಯ  ಪ್ರಶಾಂತ್ ಮಾನವೀಯತೆ ಮೆರೆದಿದ್ದಾರೆ.   ಕೊರೋನಾ ಭೀತಿಯಿಂದಾಗಿ ಯುವಕನೋರ್ವ ಅಸ್ವಸ್ಥತೆಯಿಂದ ನರಳಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿದ್ದು, ಮಾಹಿತಿ ಪಡೆದ ಸ್ಥಳೀಯ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಪ್ರಶಾಂತ್‌ ಶಿವಾಜಿನಗರ ರವರು 108 ಆರೋಗ್ಯ ಕವಚವನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಕೊರೋನಾ ಭೀತಿಯ ಹಿನ್ನಲೆಯಲ್ಲಿ ವೈರಸ್‌ ನಿರೋಧಕ ಕಿಟ್‌ ಕಲ್ಪಿಸಿ ಆತನನ್ನು ಪುತ್ತೂರಿನ ಸರಕಾರಿ ಆಸ್ಪತ್ತೆಗೆ […]

ಉಪ್ಪಿನಂಗಡಿ : ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಗ್ರಾ.ಪಂ.ಸದಸ್ಯ Read More »

ಕರಾವಳಿ

ಕೇರಳ: ದೇವಾಲಯದ 10 ಅರ್ಚಕರಿಗೆ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ತಿರುವನಂತಪುರ, ಅ.09: ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರು, ಸಹಾಯಕ ಅರ್ಚಕರು ಮತ್ತು ಕಾವಲುಗಾರರು, ಒಟ್ಟಾಗಿ 10 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅ. 15ರ ತನಕ ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.     ದೇವಾಲಯದ ಇಬ್ಬರು ಮುಖ್ಯ ಅರ್ಚಕರು ಸೇರಿದಂತೆ 8 ಸಹಾಯಕ ಅರ್ಚಕರಿಗೆ ಹಾಗೂ ಇಬ್ಬರು ಕಾವಲುಗಾರರಿಗೆ ಕೊರೊನಾ ತಗುಲಿದ್ದು, ಈ ಬಗ್ಗೆ ಪದ್ಮನಾಭ ಸ್ವಾಮಿ ದೇವಾಲಯದ ಕಾರ್ಯಕಾರಿ ಅಧಿಕಾರಿ ರಥೀಶನ್ ಐಎಎಸ್

ಕೇರಳ: ದೇವಾಲಯದ 10 ಅರ್ಚಕರಿಗೆ ಕೋವಿಡ್ ದೃಢ Read More »

ಕರ್ನಾಟಕ

ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸಂಜೆ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಕೊಲ್ಲಮೊಗ್ರದ ಅಶ್ವತ್ಥ ಮರದ ಬಳಿ ಇರುವ ಸೇತುವೆ ಮೇಲೆ ನೀರು ಬಂದಿದ್ದು, ಮರವೊಂದು ಬುಡಸಮೇತ ಹಳ್ಳಕ್ಕೆ ಬಿದ್ದಿದೆ.     ಇದರಂದಾಗಿ ನೀರು ಹರಿಯಲು ಸಾಧ್ಯವಾಗದ ಕಾರಣ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು. ಶಶಿಕುಮಾರ್‌ ಬೊಳ್ಳಾಜೆ, ಮಹಾಲಿಂಗ ಪಾಟಾಳಿ, ಶಂಕರ ಪಾಟಾಳಿ, ರಘುನಾಥ ಪಾಟಾಳಿ ಮತ್ತಿತರರ ಮನೆಗಳಿಗೆ ನೀರು ನುಗ್ಗಿ ಹಾನಿಗಳಾಗಿವೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಮನೆಗಳಿಗೆ ನುಗ್ಗಿದ ನೀರು Read More »

ಕರಾವಳಿ

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ

(ನ್ಯೂಸ್ ಕಡಬ) newskadaba.com ಸಂಪಾಜೆ, ಅ.09: ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯು ಕಳೆದ ದಿನ ರಾತ್ರಿ ಸುರಿದ ಭಾರಿ ಮಳೆಗೆ ಚರಂಡಿ ಕುಸಿದಿದ್ದು, ಇದೀಗ ಅಪಾಯಕಾರಿ ಉಂಟುಮಾಡಿದೆ.     ದಿನಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಅಪಾಯ ತಪ್ಪಿದ್ದಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕಾಗಿ ಸಂಪಾಜೆ ಎಸ್.ಡಿ.ಪಿ.ಐ ಪ್ರಮುಖರಾದ ಮಹಮ್ಮದ್‌ ಕುಂಞೆ ಮತ್ತು ಆಶ್ರಫ್‌ ರವರು ಈ ಮೂಲಕ ತಿಳಿಸಿದ್ದಾರೆ.

ಸಂಪಾಜೆ: ರಾಜ್ಯ ಹೆದ್ದಾರಿಯ ಚರಂಡಿ ಕುಸಿತ Read More »

ಕರಾವಳಿ

ಮಂಡ್ಯ: ಅನ್ನಭಾಗ್ಯ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ.!

(ನ್ಯೂಸ್ ಕಡಬ) newskadaba.com ಮಂಡ್ಯ, ಅ.09: ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ನೀಡಲಾದ ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಸೊಸೈಟಿಯಲ್ಲಿ ವಿತರಿಸಲಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣವಾಗಿದೆ ಎಂದು ಹೇಳಲಾಗುತ್ತಿದೆ.     ಗುರುದೇವರಹಳ್ಳಿ ಕಾಲೋನಿ ನಿವಾಸಿ ಪುಟ್ಟೇಗೌಡ, ಸತ್ಯಮ್ಮ, ಮಧು ಮೊದಲಾದವರಿಗೆ ಅಕ್ಕಿ ವಿತರಿಸಿದ್ದು, ಗ್ರಾಮಸ್ಥರು ಆಹಾರ ಇಲಾಖೆ ಅಧಿಕಾರಿಗಳಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಪರಿಶೀಲನೆ ನಡೆಸಿ ಅಕ್ಕಿಯ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ ಎನ್ನಲಾಗಿದೆ.  

ಮಂಡ್ಯ: ಅನ್ನಭಾಗ್ಯ ರೇಶನ್ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಕ್ಕಿ ಪತ್ತೆ.! Read More »

ಕರ್ನಾಟಕ

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಲೂರು ಕೆಮ್ರಾಜೆ, ಅ.09: ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ ರಾಮಚಂದ್ರ ಮಣಿಯಾಣಿಯವರ ಮನೆಗೆ ಕಳೆದ ರಾತ್ರಿ ಸುರಿದ ಸಿಡಿಲು ಮಿಂಚು ಸಹಿತ ಭಾರಿ ಮಳೆಗೆ ಹಿಂಬದಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯುಂಟಾಗಿದೆ.         ಪರಿಣಾಮವಾಗಿ ಶೌಚಾಲಯ ಹಾಗೂ ತೆಂಗಿನ ಮರ ಮತ್ತು ಮನೆಯ ವಿದ್ಯುತ್‌ ಉಪಕರಣಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.    

ನೆಲ್ಲೂರು ಕೆಮ್ರಾಜೆ: ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಗೆ ಹಾನಿ Read More »

ಕರಾವಳಿ

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ

(ನ್ಯೂಸ್ ಕಡಬ) newskadaba.com ಬಡ್ಡಡ್ಕ, ಅ.09: ಬಡ್ಡಡ್ಕ ಶಾಲೆಯ ತಿರುವಿನಲ್ಲಿ ಪಾಣತ್ತೂರು ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಮಿನಿ ಟಾಟಾ ಏಸ್‌ ಗೂಡ್ಸ್‌ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಇಂದು ನಡೆದಿದೆ.   ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆ ಮತ್ತು ಮಗು ಸಂಚರಿಸುತ್ತಿದ್ದು, ಅಲ್ಪ ಸ್ವಲ್ಪ ಗಾಯಗೊಂಡಿರುತ್ತದೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಗಾಯಗೊಂಡವರನ್ನು ಸುಳ್ಯ ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.  

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸುರಿದ ಸಿಡಿಲು ಮಿಂಚು ಭಾರಿ ಮಳೆಗೆ ಕೊಲ್ಲಮೊಗ್ರ ಗ್ರಾಮದ ಕಡಂಬಳ ಸೇತುವೆ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಭಾರಿ ಮಳೆ ಬಂದ ಕಾರಣ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಯ ಮಣ್ಣೆಲ್ಲಾ ಕೊರೆದು ಹೋಗಿದೆ. ಇಲ್ಲಿನ ಕಂಬಳ, ಪೆರ್ನಾಜೆ, ಕೊಂಬೆಟ್ಟುವಿನ ಸುಮಾರು 22 ಮನೆಯವರು ಇದರಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ಈ ಸೇತುವಿನಲ್ಲಿ ಕೇವಲ ದಿಚಕ್ರ ವಾಹನಗಳಷ್ಟೆ ಓಡಾಡಲು ಸಾಧ್ಯವಿರುವುದಾಗಿ ಈ ಭಾಗದ ಜನರು ತಿಳಿಸಿದ್ದಾರೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ Read More »

ಕರಾವಳಿ

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು

(ನ್ಯೂಸ್ ಕಡಬ) newskadaba.com ಬನ್ನೂರು, ಅ.09: ನೆಕ್ಕಿಲ ನಿವಾಸಿ ಯುವಕರೊಬ್ಬರು ಬನ್ನೂರು ಶಾಲಾ ಬಳಿ ಸ್ಕೂಟರ್‌ವೊಂದು ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತರನ್ನು ಬನ್ನೂರು ನೆಕ್ಕಿಲ ನಿವಾಸಿ ಬೂಂದ್‌ ಕುಡಿಯುವ ನೀರಿನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಶಾಂತ್(28‌ ವ.) ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಟಿವಿಎಸ್‌ ಸ್ಕೂಟರ್‌ ನಲ್ಲಿ ಮನೆ ಕಡೆ ಬರುತ್ತಿದ್ದ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿರಬಹುದು ಎಂದು ಹೇಳಲಾಗುತ್ತದೆ. ಅದೇ ದಾರಿಯಾಗಿ ತಡ ರಾತ್ರಿ ವ್ಯಕ್ತಿಯೊಬ್ಬರು

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.08: ಮನೆಯಲ್ಲಿ ದುಡಿಯುವರು ಒಬ್ಬರೇ ಆಗಿದ್ದು, ಅವರಿಗೂ ಕೊರೊನಾ ಬಂದಿದ್ದರೆ, ಆ ಕುಟುಂಬಕ್ಕೆ ಸರ್ಕಾರದಿಂದಲೇ ಉಚಿತವಾಗಿ ಆಹಾರಧಾನ್ಯ ವಿತರಿಸಲುವ ಯೋಜನೆಯನ್ನು ರೂಪಿಸಲಾಗಿದೆ. ಒಂದು ವೇಳೆ ಮನೆಯಲ್ಲಿ ಏಕೈಕ ದುಡಿಮೆದಾರರಿಗೆ ಕೊರೊನಾ ಬಂದರೇ ಆ ಕುಟುಂಬದ ಮುಂದಿನ ಗತಿ ಏನು ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.     ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಖ್ಯಮಂತ್ರಿಗಳ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ. ಸೋಂಕು ಹರಡದಂತೆ ತಡೆಗೆ ಹಾಗು ಬಡ ಕುಟುಂಬದಲ್ಲಿ ಆತ್ಮಸ್ಥರ್ಯ ಮೂಡಿಸುವಲ್ಲಿ ಈ ಕ್ರಮ ಅಗತ್ಯವಾಗಿದೆ

ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ Read More »

ಕರಾವಳಿ, ಕರ್ನಾಟಕ
Scroll to Top