Ashitha Soodlu

ಪುತ್ತೂರು: ರಸ್ತೆಯಲ್ಲಿರುವ ಅಪಾಯಕಾರಿ ಮರಗಳ ತೆರವು

(ನ್ಯೂಸ್ ಕಡಬ) newskadaba.com ಪುತ್ತೂರು, ನ. 06: ಪಾಂಗಾಳಾಯಿ ಮಂಡ್ಯತ್ತಾಯ ದೈವಸ್ಥಾನದ ರಸ್ತೆ ಬದಿಯಲ್ಲಿ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತ ಮರಗಳು ಸಾರ್ವಜನಿಕರಿಗೆ ನಡೆದುಕೊಂಡು ಹೋಗುವುದಕ್ಕೆ ಅಪಾಯವಾಗುತ್ತಿತ್ತು.       ಇದನ್ನು ಮನಗಂಡು ವಾರ್ಡ್‍ನ ನಗರ ಸಭಾ ಸದಸ್ಯೆ ವಿದ್ಯಾ ಗೌರಿ ಯವರು ನಗರಸಭಾ ಉಪಾಧ್ಯಕ್ಷರಾಗಿ ಹುದ್ದೆ ಅಲಂಕರಿಸಿದ ಕೆಲವೇ ದಿನಗಳಲ್ಲಿ ಈ ರಸ್ತೆ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಿದ್ದಾರೆ.  

ಪುತ್ತೂರು: ರಸ್ತೆಯಲ್ಲಿರುವ ಅಪಾಯಕಾರಿ ಮರಗಳ ತೆರವು Read More »

ಕರಾವಳಿ

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ನಿಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 06: ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ನಿಧನ ಹೊಂದಿದರು.ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಇವರು, ಇಂದು ಮುಂಜಾನೆ ವಿಧಿವಶರಾಗಿದ್ದಾರೆ.     ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ದಿನ (ಗುರುವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.  ಮೃತರು ತಾಯಿ, ಪತ್ನಿ ಸಹಿತ

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ನಿಧನ Read More »

ಕರಾವಳಿ

ಸುಳ್ಯದಲ್ಲಿ ಗಾಂಜಾ ಸಾಗಾಟ ➤ ಆರೋಪಿಗಳು ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಸುಳ್ಯ ನ. 06: ಸುಳ್ಯದಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಠಾಣಾ ಉಪನಿರೀಕ್ಷಕರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ ರಿಜಿಸ್ಟರ್ ನಂಬರ್ ಹೊಂದಿದ್ದ ಕಾರಿನಲ್ಲಿ ಅಕ್ರಮವಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರಿಸಿ ಸುಳ್ಯ ಠಾಣಾ ಉಪನಿರೀಕ್ಷಕರಾದ ಹರೀಶ್ ಎಮ್ ಆರ್ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಸುಳ್ಯ ಜ್ಯೋತಿ ಸರ್ಕಲ್ ಬಳಿ 8ಕೆ,ಜಿ ಗಾಂಜಾ ಸಹಿತ ಆರೋಪಿಗಳಾದ ಎಂ ಎ ಅಬ್ಬಾಸ್(63) ಅಬ್ದುಲ್ (50)

ಸುಳ್ಯದಲ್ಲಿ ಗಾಂಜಾ ಸಾಗಾಟ ➤ ಆರೋಪಿಗಳು ಖಾಕಿ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ  : ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ

(ನ್ಯೂಸ್ ಕಡಬ) newskadaba.com ಕಡಬ ನ. 06: ಕಳೆದ ದಿನ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಸುಂಕದ ಕಟ್ಟೆ, ನೆಟ್ಟಣ ಬಳಿ ವಿದ್ಯುತ್ ಲೈನ್ ಗಳಿಗೆ ಮರಗಳು ಬಿದ್ದು ವಾಹನಗಳು ಓಡಾಡಲು ಪರಾದಡುವಂತಾಗಿತ್ತು.   ತಕ್ಷಣವೇ ಕಾರ್ಯಪ್ರವರ್ತರಾದ ಮೆಸ್ಕಾಂ ಸಿಬ್ಬಂದಿಗಳು, ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಯೇನೆಕಲ್ಲು ಆಸುಪಾಸಿನಲ್ಲಿ ನೂರಾರು ಅಡಿಕೆ ಮರಗಳು ಗಾಳಿಯ ಅಬ್ಬರಕ್ಕೆ ಧರೆಗುರುಳಿದೆ. ತಾ.ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆರವರ ತೋಟದಲ್ಲಿ 20ಕ್ಕೂ ಅಧಿಕ

ಕಡಬ  : ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ Read More »

ಕರಾವಳಿ

ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 05: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ.   ಕಳೆದ ತಿಂಗಳು ವಕೀಲರದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗತ್ತೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು.ಈಗ ಈ

ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ Read More »

ಕರಾವಳಿ

ನಟಿ ಪೂನಂ ಪಾಂಡೆ ಗೋವಾ ಪೊಲೀಸ ವಶಕ್ಕೆ

(ನ್ಯೂಸ್ ಕಡಬ) newskadaba.com ಗೋವಾ ನ. 05: ಕರಾವಳಿ ರಾಜ್ಯ ಗೋವಾದ ಸರ್ಕಾರಿ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದ ಚಾಪೋಲಿ ಡ್ಯಾಂ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದನ್ನು ಪೊಲೀಸರು ಗುರುತಿಸಿದ್ದರು.   ಸರ್ಕಾರದ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯೊಂದಿಗೆ ನಟಿ ಪೂನಂ ವಿರುದ್ಧವೂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಗೋವಾ ಸಂಸ್ಕೃತಿ, ಚಾಪೋಲಿ ಡ್ಯಾಂ ಪವಿತ್ರತೆಗೆ ಧಕ್ಕೆ ತರುವಂತೆ ವರ್ತಿಸಿದ ಕಾರಣ ಪ್ರಕರಣ ದಾಖಲಿಸಿದ್ದೇವೆ ಎಂದು

ನಟಿ ಪೂನಂ ಪಾಂಡೆ ಗೋವಾ ಪೊಲೀಸ ವಶಕ್ಕೆ Read More »

ಕರಾವಳಿ

ಉಪ್ಪಿನಂಗಡಿ: ರಸ್ತೆ ದುಸ್ಥಿತಿಯ ವಿರುದ್ದ ಎಸ್ಡಿಪಿಐ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 05. ಉಪ್ಪಿನಂಗಡಿ- ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ಹಾಗೂ ಹೆದ್ದಾರಿಯ ದುರಸ್ತಿಯನ್ನು ಆಗ್ರಹಿಸಿ ಎಸ್ ಡಿ ಪಿ ಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟುಹೋಗಿದ್ದು, ಸಂಚಾರ ಅಸಾಧ್ಯವಾಗಿದೆ. ಈ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡವರು ಮರಗಳನ್ನು ಕಡಿದು, ಗುಡ್ಡಗಳನ್ನು ಜರಿಸುವ ಕೆಲಸವನ್ನು ಮಾತ್ರ ಮಾಡಿದ್ದಾರೆ. ಹೆದ್ದಾರಿಯ ಬಳಿ ಅಲ್ಲಲ್ಲಿ ಅಗೆದಿದ್ದು, ಇದರಿಂದಲೂ ಸಾರ್ವಜನಿಕರು  ತೀವ್ರ

ಉಪ್ಪಿನಂಗಡಿ: ರಸ್ತೆ ದುಸ್ಥಿತಿಯ ವಿರುದ್ದ ಎಸ್ಡಿಪಿಐ ವತಿಯಿಂದ ಪ್ರತಿಭಟನೆ Read More »

ಕರಾವಳಿ

ಬೀದಿಬದಿ ವ್ಯಾಪಾರಿಗಳ ಆರ್ಥಿಕ ಪುನ:ಶ್ಚೇತನಕ್ಕೆ ತುರ್ತು ಸಾಲ ಒದಗಿಸಿ ➤ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ಕೋವಿಡ್-19 ಲಾಕ್‍  ಡೌನ್‍ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ನಗರ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ತುರ್ತು ಕಿರು ಸಾಲವನ್ನು ಒದಗಿಸುವ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ ತಿಳಿಸಿದರು. ಅವರು ತಮ್ಮ ಕಛೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋರೊನಾ ಸೋಂಕು ನಿಯಂತ್ರಣಕ್ಕೆ ರಾಷ್ಟ್ರದಾದ್ಯಂತ

ಬೀದಿಬದಿ ವ್ಯಾಪಾರಿಗಳ ಆರ್ಥಿಕ ಪುನ:ಶ್ಚೇತನಕ್ಕೆ ತುರ್ತು ಸಾಲ ಒದಗಿಸಿ ➤ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ Read More »

ಕರಾವಳಿ, ಕರ್ನಾಟಕ

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ “ಕಾಲೇಜ್ ಆಫ್‍ ಮ್ಯಾನೇಜ್‍ ಮೆಂಟ್ ಅಂಡ್ ಕಾಮರ್ಸ್” ನ 2020-21 ನೇ ಸಾಲಿನ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟಗೊಂಡಿರುತ್ತದೆ. ಬಿ.ಕಾಂ. (ಆನರ್ಸ್) ಕೋರ್ಸಿನ ಶ್ರೀ ಅಬ್ದುಲ್ ರಹಿಮಾನ್ ಪ್ರಥಮ, ಶ್ರೀ ಬ್ರಾಂಡಾನ್ ಡೇನಿಯೆಲ್ ಡಿಕೋಸ್ಟಾ ದ್ವಿತೀಯ ಹಾಗೂ ಶ್ರೀ ಮಹಮ್ಮದ್ ಫಜ್ರ್ನಾನ್ ತೃತೀಯ ಹಾಗೂ ಬಿ. ಕಾಂ. (ಎಸಿಸಿಎ) ವಿಭಾಗದಲ್ಲಿ ಕು. ಕ್ರಿತಿಕಾ, ಬಿ. ಕಾಂ. ಸಿ.ಎ. ವಿಭಾಗದಲ್ಲಿ ಕು.

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಬಿ. ಕಾಂ. ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ Read More »

ಕರಾವಳಿ, ಕರ್ನಾಟಕ

ಕೊನೆಯ ಕ್ಷಣದಲ್ಲಿ ಅತಿವೃಷ್ಟಿ/ಪ್ರವಾಹ ಪೀಡಿತ ಪಟ್ಟಿಯಲ್ಲಿ ಸುಳ್ಯ ತಾಲೂಕು ಘೋಷಣೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 05: ತಿಂಗಳ ಹಿಂದೆ ಸರಕಾರದಿಂದ ಬಿಡುಗಡೆಗೊಂಡಿದ್ದ ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕು ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯವನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳನ್ನು ಆ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ ಸುಳ್ಯ ತಾಲೂಕನ್ನು ಸೇರ್ಪಡೆಗೊಳಿಸಿ ಸರಕಾರದಿಂದ ಆದೇಶ ಮಾಡಲಾಗಿದೆ.     ಸುಳ್ಯ ತಾಲೂಕಿನಲ್ಲಿ ಈ ಬಾರಿ ವಿಪರೀತ ಮಳೆಯಾಗಿದ್ದು, ಕೃಷಿ ಸೇರಿದಂತೆ, ಮನೆಗಳಿಗೂ ಹಾನಿಯಾಗಿತ್ತು. ಅತಿವೃಷ್ಟಿ ಪಟ್ಟಿಯಲ್ಲಿ ಸುಳ್ಯ ಸೇರದಿದ್ದುದರಿಂದ ತಾಲೂಕಿನಲ್ಲಿ ಆದ ನಷ್ಟಗಳಿಗೂ ಪರಿಹಾರ ಸಿಗದೆ ಸ್ಥಿತಿ

ಕೊನೆಯ ಕ್ಷಣದಲ್ಲಿ ಅತಿವೃಷ್ಟಿ/ಪ್ರವಾಹ ಪೀಡಿತ ಪಟ್ಟಿಯಲ್ಲಿ ಸುಳ್ಯ ತಾಲೂಕು ಘೋಷಣೆ Read More »

ಕರಾವಳಿ
Scroll to Top