ನಟಿ ಪೂನಂ ಪಾಂಡೆ ಗೋವಾ ಪೊಲೀಸ ವಶಕ್ಕೆ



(ನ್ಯೂಸ್ ಕಡಬ) newskadaba.com ಗೋವಾ . 05: ಕರಾವಳಿ ರಾಜ್ಯ ಗೋವಾದ ಸರ್ಕಾರಿ ಪ್ರದೇಶದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದ ಚಾಪೋಲಿ ಡ್ಯಾಂ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದನ್ನು ಪೊಲೀಸರು ಗುರುತಿಸಿದ್ದರು.







 

ಸರ್ಕಾರದ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯೊಂದಿಗೆ ನಟಿ ಪೂನಂ ವಿರುದ್ಧವೂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಗೋವಾ ಸಂಸ್ಕೃತಿ, ಚಾಪೋಲಿ ಡ್ಯಾಂ ಪವಿತ್ರತೆಗೆ ಧಕ್ಕೆ ತರುವಂತೆ ವರ್ತಿಸಿದ ಕಾರಣ ಪ್ರಕರಣ ದಾಖಲಿಸಿದ್ದೇವೆ ಎಂದು ಗೋವಾ ಫಾರ್ವಡ್ ಪಾರ್ಟಿ ಮಹಿಳಾ ವಿಭಾಗ ಮಾಹಿತಿ ನೀಡಿತ್ತು.ಸದ್ಯ ಪತಿಯ ಜೊತೆ ಗೋವಾ ಪ್ರವಾಸದಲ್ಲಿದ್ದು, ಇದೇ ವೇಳೆ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.






 

error: Content is protected !!
Scroll to Top