ನ್ಯೂಸ್ ಕಡಬ

ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ: 2.80ಲಕ್ಷ ರೂ.ನಿವ್ವಳ ಲಾಭ ► ಪ್ರತಿ ಲೀ.75ಪೈಸೆ ಬೋನಸ್ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, ಕುಟ್ರುಪ್ಪಾಡಿ ಹಾ.ಉ.ಸ.ಸಂಘದ 2016-17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಕುಟ್ರುಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ಅಧ್ಯಕ್ಷ ಕಿರಣ್ ಗೋಗಟೆಯವರು ಮಾತನಾಡಿ 2016-17ನೇ ಸಾಲಿನಲ್ಲಿ ಸಂಘವು 2.80 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಒಟ್ಟು 52,72,690ರೂ. ಹಾಲು ಖರೀದಿ ಮಾಡಿದ್ದು ಸ್ಥಳೀಯವಾಗಿ 2,02,649ರೂ. ಸ್ಥಳೀಯ ಹಾಲು ಮಾರಾಟ ಮಾಡಲಾಗಿದೆ. ಒಕ್ಕೂಟದಿಂದ ಹಾಲು ಮಾರಾಟದಿಂದ 57,86,623ರೂ. ಸಂಘಕ್ಕೆ ಬಂದಿರುತ್ತದೆ. ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ […]

ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ: 2.80ಲಕ್ಷ ರೂ.ನಿವ್ವಳ ಲಾಭ ► ಪ್ರತಿ ಲೀ.75ಪೈಸೆ ಬೋನಸ್ ಘೋಷಣೆ Read More »

ಕರಾವಳಿ

ಶಾಂತಿಮೊಗರು: ನೀರುಪಾಲಾದ ಸಹೋದರರು ► ಓರ್ವನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಕುಮಾರಧಾರಾ ನದಿಯಲ್ಲಿ ಮಂಗಳವಾರ ಸಂಜೆ ನೀರುಪಾಲಾದ ಯುವಕರಿಬ್ಬರ ಪೈಕಿ ಓರ್ವನ ಶವ ಬುಧವಾರ ಪತ್ತೆಯಾಗಿದೆ.  ಇನ್ನೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಿದೆ. ಕುಟ್ರುಪ್ಪಾಡಿ ಗ್ರಾಮದ ಅಲರ್ಮೆ ದಿ. ಚೆನ್ನಪ್ಪ ಪೂಜಾರಿಯವರ ಪುತ್ರರಾದ ಹರಿಪ್ರಸಾದ್(30) ಹಾಗೂ ಸತ್ಯಪ್ರಸಾದ್(25) ನೀರುಪಾಲಾದವರು. ಜೊತೆಗಿದ್ದ ಅವರ ಚಿಕ್ಕಪ್ಪನ ಮಗ ರೋಹಿತ್ ಬದುಕುಳಿದಿದ್ದಾರೆ. ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಬಳಿ ಸ್ನಾನಕ್ಕೆಂದು ಮೂವರು ನದಿಗಿಳಿದಿದ್ದು ನೀರಿನ ಸೆಳತಕ್ಕೆ ಕೊಚ್ಚಿಹೋಗಿದ್ದಾರೆ. ಸ್ಥಳಿಯ ಈಜು ಪರಿಣತರು, ಅಗ್ನಿಶಾಮಕ

ಶಾಂತಿಮೊಗರು: ನೀರುಪಾಲಾದ ಸಹೋದರರು ► ಓರ್ವನ ಶವ ಪತ್ತೆ Read More »

ಕರಾವಳಿ

APL ಪಡಿತರ ಕಾರ್ಡನ್ನು BPL ಆಗಿ ಬದಲಾಯಿಸಲು ಹೋಗಿ ವಂಚಿತರಾದ ► ಎಂಡೋ ಸತ್ರಸ್ತ ಕುಟುಂಬಗಳು

(ನ್ಯೂಸ್ ಕಡಬ) newskadaba.com ಕಡಬ,ಸೆ.06, ಜಿಲ್ಲಾಧಿಕಾರಿಗಳ ಆದೇಶದಂತೆ ಎಂಡೋ ಸಂತ್ರಸ್ತರ ಕೆಲವು ಕುಟುಂಬಗಳು ತಮ್ಮ ಎ.ಪಿಎಲ್ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡಾಗಿ ಬದಲಾಯಿಸಲು ಹೋಗಿ ಅತ್ತ ಎಪಿಎಲ್ ಇಲ್ಲ ಇತ್ತ ಬಿಪಿಎಲ್ ಪಡಿತರ ಚೀಟಿ  ಕೂಡಾ ಇಲ್ಲದಂತ ಸಂಕಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೆಲವು ಎಂಡೋ ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ನಿವೇದನೆ ಮಾಡಿಕೊಂಡ ಬಳಿಕ ಅವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಮೂರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ

APL ಪಡಿತರ ಕಾರ್ಡನ್ನು BPL ಆಗಿ ಬದಲಾಯಿಸಲು ಹೋಗಿ ವಂಚಿತರಾದ ► ಎಂಡೋ ಸತ್ರಸ್ತ ಕುಟುಂಬಗಳು Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಓಣಂ ಆಚರಣೆ ► ಮೆರುಗು ನೀಡಿದ ಪೂಕಳಂ, ತಿರುವಾದಿರ ನೃತ್ಯ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಇಲ್ಲಿನ ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆ ಮತ್ತು ಪದವಿ ವಿದ್ಯಾಲಯ ಜಂಟಿ ಆಶ್ರಯದಲ್ಲಿ ಓಣಂ ಆಚರಣೆಯನ್ನು  ಸೋಮವಾರ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂತೂರು ಮಾರ್ ಇವಾನಿಯೋಸ್ ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಫಿಲಿಪ್ ನೆಲ್ಲಿವಿಲ ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಗಳನ್ನು ಎಲ್ಲರೂ ಒಟ್ಟು ಸೇರಿ ಆಚರಣೆ ಮಾಡುವುದರಿಂದ, ಸೌಹಾರ್ದತೆ ಹಾಗೂ ಐಕ್ಯತೆ ಮೂಡುತ್ತದೆ. ಪ್ರತಿಯೊಂದು ಹಬ್ಬ ಆಚರಣೆಗಳಲ್ಲೂ ಆದರದ್ದೇ ಆದ ವೈಶಿಷ್ಠತೆಗಳಿವೆ. ಕೇರಳದ ನಾಡ ಹಬ್ಬವಾದ

ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಓಣಂ ಆಚರಣೆ ► ಮೆರುಗು ನೀಡಿದ ಪೂಕಳಂ, ತಿರುವಾದಿರ ನೃತ್ಯ Read More »

ಕರಾವಳಿ

ಕಡಬ ಸರಸ್ವತೀ ವಿದ್ಯಾಲಯ ಶಿಕ್ಷಕರ ದಿನಾಚರಣೆ ►“ಸಾಧನಶ್ರೀ” ಪ್ರಶಸ್ತಿ ಪಡೆದ ಸಾಧಕರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಕಡಬ ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೂ ನೀಡಿ ಗೌರವಾರ್ಪಣೆ ಮಾಡಿ ಆಶೀರ್ವಾದ ಪಡೆಯುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ “ಸಾಧನಶ್ರೀ” ಪ್ರಶಸ್ತಿ ಪಡೆದ ಕದಂಬ ಜೆ.ಸಿ.ಐ ಕಡಬ ಪೂರ್ವಾಧ್ಯಕ್ಷ  ಹಾಗೂ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ  ಶಿವಪ್ರಸಾದ್ ಮೈಲೇರಿಯವರನ್ನು ಶಿಕ್ಷಕರ ವತಿಯಿಂದ ಶಾಲಾ ಮುಖ್ಯ ಶಿಕ್ಷಕ  ಮಾಧವ ಕೋಲ್ಪೆ  ಅವರು  ಗೌರವಿಸಿದರು. ಶಿವಪ್ರಸಾದ್ ಮೈಲೇರಿಯವರು ಅಭಿನಂದನೆಯನ್ನು ಸ್ವೀಕರಿಸಿ, ಕೃತಜ್ಞತೆಯನ್ನು ಸಲ್ಲಿಸಿದರು.  ಭಾರತೀ

ಕಡಬ ಸರಸ್ವತೀ ವಿದ್ಯಾಲಯ ಶಿಕ್ಷಕರ ದಿನಾಚರಣೆ ►“ಸಾಧನಶ್ರೀ” ಪ್ರಶಸ್ತಿ ಪಡೆದ ಸಾಧಕರಿಗೆ ಗೌರವಾರ್ಪಣೆ Read More »

ಕರಾವಳಿ

ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.06, ಮೂಡಬಿದಿರೆ ಘಟಕದ ಗೃಹರಕ್ಷಕರಿಂದ ವನಮಹೋತ್ಸವ ದಿನಾಚರಣೆಯನ್ನು ಮೂಡಬಿದಿರೆ ಘಟಕದ ವತಿಯಿಂದ ಆಚರಿಸಲಾಯಿತು. ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಣೆ ಹಾಗೂ ಪ್ರಾಕೃತಿಕ ವಿಕೋಪಗಳಲ್ಲಿ ನಡೆಯುವ ತೊಂದರೆಯ ಬಗ್ಗೆ ಚರ್ಚಿಸಿದರು. ಪ್ರತಿಯೊಬ್ಬ ಪ್ರಜೆಯು ಗಿಡ ಬೆಳೆಸಿದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮೂಡಬಿದಿರೆ ಘಟಕದ ಘಟಕಾಧಿಕಾರಿ ಶ್ರೀ ಪಾಂಡಿರಾಜ್ ಹಾಗೂ ಮೂಡಬಿದಿರೆ ಘಟಕದ

ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ Read More »

ಕರಾವಳಿ

ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ…???

(ನ್ಯೂಸ್ ಕಡಬ) newskadaba.com ಮುಂಬೈ,ಸೆ. 05, ತನ್ನ ಕೂದಲನ್ನು ತಾನೇ ತಿಂದಿದ್ದ ಮಹಿಳೆಯ ಹೊಟ್ಟೆಯಿಂದ ಸುಮಾರು 750 ಗ್ರಾಂ ಕೂದಲಿನ ಉಂಡೆಯನ್ನು ಮುಂಬೈ ಘಾಟ್ಕೋಪರ್ ದಲ್ಲಿನ ರಾಜವಾಡಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವಾರದ ಹಿಂದೆ, 20 ವರ್ಷದ ಮಹಿಳೆಯೋರ್ವಳು ತನಗೆ ಹಸಿವಿಲ್ಲ, ಏನೂ ತಿಂದ್ರೂ ವಾಂತಿಯಾಗುತ್ತೆ, ಹಾಗಾಗಿ ಕಳೆದ ಕೆಲ ತಿಂಗಳಿನಿಂದ ನಾನು ತುಂಬಾ ಸಣ್ಣ ಆಗ್ತಾ ಬರ್ತಿದ್ದೀನಿ ಅಂತಾ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರು 30 ಕೆಜಿ ತೂಕವಿದ್ದರು. ಅಂತೆಯೇ ವೈದ್ಯರು

ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ…??? Read More »

ಕರ್ನಾಟಕ

ಶಾಂತಿಮೊಗರು: ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು ► ಕಡಬ ಕುಟ್ರುಪ್ಪಾಡಿ ನಿವಾಸಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.05.  ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಯುವಕರಿಬ್ಬರು ಮುಳುಗಿ ನೀರುಪಾಲಾದ ಘಟನೆ ಮಂಗಳವಾರ ಅಪರಾಹ್ನ ಇಲ್ಲಿಗೆ ಸಮೀಪದ ಶಾಂತಿಮೊಗರು ದೇವಸ್ಥಾನ ಸಮೀಪ ನಡೆದಿದೆ. ಶಾಂತಿಮೊಗರು ದೇವಸ್ಥಾನಕ್ಕೆಂದು ಮೂವರು ಯುವಕರು ತೆರಳಿದ್ದು, ಅದರಲ್ಲಿ ಕಡಬ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಹರಿ, ಸತ್ಯ ಸ್ನಾನ ಮಾಡಲೆಂದು ನೀರಿಗಿಳಿದಿದ್ದಾರೆನ್ನಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ ಇವರಿಬ್ಬರು ನೀರುಪಾಲಾಗಿದ್ದು, ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ.

ಶಾಂತಿಮೊಗರು: ಸ್ನಾನಕ್ಕಿಳಿದ ಯುವಕರಿಬ್ಬರು ನೀರುಪಾಲು ► ಕಡಬ ಕುಟ್ರುಪ್ಪಾಡಿ ನಿವಾಸಿಗಳು Read More »

ಕರಾವಳಿ

ಮಂಗಳೂರು ಚಲೋ ಬೈಕ್ ರ್ಯಾಲಿ ► ಹೆಲ್ಮೆಟ್ ಧರಿಸದೆ ವಿವಾದಕ್ಕೆ ಗುರಿಯಾದ ಬಿಜೆಪಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.05, ಬಿಜೆಪಿ ಕಾರ್ಯಕರ್ತರು ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಸೋಮವಾರ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಹೆಲ್ಮೆಟ್ ಧರಿಸದೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಬೈಕ್’ನಲ್ಲಿ ಪ್ರಯಾಣಿಸುವ ಇಬ್ಬರೂ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿಗೊಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಕಾರ್ಯಕರ್ತರು ಹೆಲಮೆಟ್ ಧರಿಸದೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ರ್ಯಾಲಿ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇನ್ನು ಹಲವವಾರು

ಮಂಗಳೂರು ಚಲೋ ಬೈಕ್ ರ್ಯಾಲಿ ► ಹೆಲ್ಮೆಟ್ ಧರಿಸದೆ ವಿವಾದಕ್ಕೆ ಗುರಿಯಾದ ಬಿಜೆಪಿ Read More »

ಕರಾವಳಿ

ಆಯ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್ ► ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ ಸವಾರ

(ನ್ಯೂಸ್ ಕಡಬ) newskadaba.com ಗದಗ,ಸೆ.05, ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಆಯ ತಪ್ಪಿ ಬಿದ್ದ ಬೈಕ್ ಸವಾರನೋರ್ವ ಕೊಚ್ಚಿ ಹೋಗಿರುವ ಘಟನೆ ಗದಗ ತಾಲೂಕಿನ ಕುರ್ತಕೋಟಿ ಬಳಿ ನಡೆದಿದೆ. ಮಳೆ ನೀರಿನಿಂದ ಹುಲಕೋಟಿ ಹಾಗೂ ಕುರ್ತಕೋಟಿ ಮಧ್ಯೆ ಇರುವ ಎರಡು ಹಳ್ಳಗಳು ತುಂಬಿ ಹರಿಯುತ್ತಿತ್ತು. ಅಂತೂರ-ಬೆಂತೂರ ನಿಂದ ಕುರ್ತಕೋಟಿ ಮಾರ್ಗವಾಗಿ ಗದಗ ಕಡೆಗೆ ಇಬ್ಬರು ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಹಳ್ಳಕ್ಕೆ ಬಿದ್ದ ಪರಿಣಾಮ ಹಿಂಬದಿ ಸವಾರ ಹುಚ್ಚಪ್ಪ ಗುಡಿಮನಿ ಈಜಿ ಪಾರಾಗಿದ್ದಾರೆ. ಆದ್ರೆ ನೀರಿನ ರಭಸಕ್ಕೆ ವಾಹನದೊಂದಿಗೆ ಮತ್ತೋರ್ವ

ಆಯ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್ ► ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ ಸವಾರ Read More »

ಕರ್ನಾಟಕ
Scroll to Top