ನ್ಯೂಸ್ ಕಡಬ

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19 ಜಲ್ಲಿ ಮಿಕ್ಸರ್ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ವೆಂಕಟರಮಣಪ್ಪ(45) ಹಾಗು ವೆಂಕಟಪ್ಪ(43) ಮೃತ ದುರ್ದೈವಿಗಳಾಗಿದ್ದು, ಇವರು ರಾಮಸಾಗರ ನಿವಾಸಿಗಳು ಎಂಬುವುದಾಗಿ ತಿಳಿದುಬಂದಿದೆ. ರೈಲ್ವೆ ಬ್ರಿಡ್ಜ್ ನಿಂದಾಗಿ ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ-7 ಸರ್ವಿಸ್ ರಸ್ತೆ ಇಲ್ಲದೆ ಇರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು Read More »

ಕರ್ನಾಟಕ

ಮಹಿಳೆಯರ ರಕ್ಷಣೆಗೆ ತಯಾರಾಗಿದೆ `ಎಲೆಕ್ಟ್ರೋ ಶೂ’…! ► ಇನ್ನು ಮುಂದೆ ಮಹಿಳೆಯರಿಗೆ ಕಿರುಕುಳ ನೀಡಿದರೆ ನೀವು ಅಂದರ್..!!!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಸೆ.18, ಮಹಿಳೆಯರ ರಕ್ಷಣೆಗೆಂದು 18 ವರ್ಷದ ಯುವಕನೊಬ್ಬ ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ. ಹೈದರಾಬಾದ್ ನ ಹಿಮಾಯತ್ ನಗರದ ಸಿದ್ದಾರ್ಥ್ ಮಂಡಲ ಎಂಬ ಯುವಕ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ್ದಾನೆ. ಈತ ಉದ್ಯಮಿ ಶ್ರೀರಾಮ್ ಮಂಡಲ ಹಾಗೂ ಶಶಿಕಲಾ ಮಂಡಲ ಅವರ ಪುತ್ರ. ಮಹಿಳೆಯರ ರಕ್ಷಣೆಗೆಂದು ತಯಾರಿಸಿದ ಈ ಶೂ ನ ವಿಶೇಷತೆ ಏನಂತಿರಾ..??? ಹೌದು ಈ ಶೂ ಅಥವಾ ಚಪ್ಪಲಿ ಧರಿಸಿದ್ದ ವೇಳೆ ಯಾರಾದ್ರೂ ನಿಮ್ಮ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದರೆ

ಮಹಿಳೆಯರ ರಕ್ಷಣೆಗೆ ತಯಾರಾಗಿದೆ `ಎಲೆಕ್ಟ್ರೋ ಶೂ’…! ► ಇನ್ನು ಮುಂದೆ ಮಹಿಳೆಯರಿಗೆ ಕಿರುಕುಳ ನೀಡಿದರೆ ನೀವು ಅಂದರ್..!!! Read More »

ರಾಷ್ಟ್ರೀಯ ನ್ಯೂಸ್

ಮಾಜಿ ಸಚಿವ ಖಮರುಲ್‌ ಇಸ್ಲಾಂ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.18, ಮಾಜಿ ಸಚಿವ ಖಮರುಲ್‌ ಇಸ್ಲಾಂ(69) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು. 1974ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು ಕಲುಬುರಗಿ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, 3 ಬಾರಿ ಮುಸ್ಲಿಂ ಲೀಗ್‌ನಿಂದ ಹಾಗೂ 3 ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು.  ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಅವರನ್ನು ಸಂಪುಟ ಪುನಾರಚನೆ ವೇಳೆ ಸಂಪುಟದಿಂದ ಕೈಬಿಡಲಾಗಿತ್ತು.

ಮಾಜಿ ಸಚಿವ ಖಮರುಲ್‌ ಇಸ್ಲಾಂ ವಿಧಿವಶ Read More »

ಕರ್ನಾಟಕ

ಮಂತ್ರಾಲಯದಲ್ಲಿ ಅಗ್ನಿ ಅವಘಡ ► 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!

(ನ್ಯೂಸ್ ಕಡಬ) newskadaba.com ರಾಯಚೂರು, ಸೆ.18,: ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಅಕಸ್ಮಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಅಂಗಡಿಗಳು ಸುಟ್ಟು ಸುಮಾರು 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಹಾನಿಯಾಗಿದೆ. ರಾಘವೇಂದ್ರ ಸ್ವಾಮಿ ಮಠದ ಬಳಿ ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ನಡೆದಿದ್ದು, 5 ಅಂಗಡಿಗಳು ಹೊತ್ತಿ ಉರಿದಿವೆ. ತುಂಗಭದ್ರಾ ನದಿ ತೀರದಲ್ಲಿರುವ ಪೂಜೆ ಸಾಮಗ್ರಿ, ಆಟಿಕೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಗುರು, ಭೀಮಣ್ಣ, ಜಗಂ ಮಹೇಶ್, ಆದಿ, ಬಂದೇಜಿ ರಾವ್ ಎಂಬವರಿಗೆ ಸೇರಿದ ಅಂಗಡಿಗಳು

ಮಂತ್ರಾಲಯದಲ್ಲಿ ಅಗ್ನಿ ಅವಘಡ ► 50 ಲಕ್ಷ ರೂ. ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮ! Read More »

ಕರ್ನಾಟಕ

ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.18,  ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಮುಂದಿನ ದಿನಗಳಲ್ಲಿ ಬೇಕಾದಷ್ಟು ಪೆಟ್ರೋಲ್ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಎಲ್ಲದಕ್ಕೂ ಪರ್ಯಾಯ ಹುಡುಕುವ ಕಾಲ ಬಂದಿದೆ. ಹೀಗಿರುವಾಗ ಉಚಿತವಾಗಿ ಸಿಗುವ ಸೂರ್ಯ ಶಕ್ತಿಯತ್ತ ಎಲ್ಲರೂ ಮುಖ ಮಾಡುತ್ತಿದ್ದು, ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ. ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆದೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ

ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!! Read More »

ಕರಾವಳಿ

ಶಾಕಿಂಗ್ ನ್ಯೂಸ್ ► ಮೊಬೈಲ್ ಅಂಗಡಿಯಲ್ಲೇ ರೆಡ್ ಮೀ ನೋಟ್ 4 ಬ್ಲಾಸ್ಟ್..!!

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.16, ರೆಡ್ ಮೀ ನೋಟ್ 4 ಮೊಬೈಲ್ ಫೋನೊಂದು ಬ್ಲಾಸ್ಟ್ ಆಗಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ರೆಡ್ ಮೀ ನೋಟ್ 4 ಬ್ಲಾಸ್ಟ್ ಆಗಿರುವ ದೃಶ್ಯವು ಮೊಬೈಲ್ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಡ್ಯದ ಗ್ರಾಹಕರೊಬ್ಬರು ಆನ್‍ಲೈನ್‍ನಲ್ಲಿ ರೆಡ್ ಮಿ ನೋಟ್ 4 ಸ್ಮಾರ್ಟ್ ಫೋನ್ ಬುಕ್ ಮಾಡಿದ್ದರು. ಮೊಬೈಲ್ ಆನ್ ಆಗುತ್ತಿಲ್ಲ ಎಂದು ಆರ್‍ಪಿ ರಸ್ತೆಯ ಮೊಬೈಲ್ ಅಂಗಡಿಗೆ ತಂದು ತೋರಿಸಿದ್ದಾರೆ. ಅಂಗಡಿಯವರು ಮೊಬೈಲ್ ಆನ್ ಮಾಡಲು ಯತ್ನಿಸಿದಾಗ ಹೊಗೆ ಕಾಣಿಸಿಕೊಂಡಿದೆ.

ಶಾಕಿಂಗ್ ನ್ಯೂಸ್ ► ಮೊಬೈಲ್ ಅಂಗಡಿಯಲ್ಲೇ ರೆಡ್ ಮೀ ನೋಟ್ 4 ಬ್ಲಾಸ್ಟ್..!! Read More »

ಕರ್ನಾಟಕ

ಸಿ.ಎಂ. ಸಿದ್ಧರಾಮಯ್ಯ ರವರ ಭ್ರಷ್ಟಾಚಾರ ಶೀಘ್ರದಲ್ಲಿ ಬಯಲು ‌‌► ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16, ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದವರ ಹಾಗು ಕಾಂಗ್ರೆಸ್ ಶಾಸಕರು ನಡೆಸಿದ ಭ್ರಷ್ಟಾಚಾರ ಕುರಿತಾದ  ದಾಖಲೆಗಳ ಬಿಡುಗಡೆಯ ಮುಹೂರ್ತವನ್ನು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 23ರಂದು ನಿಗದಿಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದ ಮಾತಿಗೆ ಇದೀಗ ಕಾಲ ಒದಗಿಬಂದಿದೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪದೇ ಪದೇ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ

ಸಿ.ಎಂ. ಸಿದ್ಧರಾಮಯ್ಯ ರವರ ಭ್ರಷ್ಟಾಚಾರ ಶೀಘ್ರದಲ್ಲಿ ಬಯಲು ‌‌► ಬಿ.ಎಸ್.ಯಡಿಯೂರಪ್ಪ Read More »

ಕರ್ನಾಟಕ

ಮಹರ್ಷಿ ಆನಂದ್ ಗುರೂಜಿ ಮನೆ ಬಾಗಿಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿ ► ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ.!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16, ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಗೋಡೆ ಹಾಗು ಬಾಗಿಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾದ ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು

ಮಹರ್ಷಿ ಆನಂದ್ ಗುರೂಜಿ ಮನೆ ಬಾಗಿಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿ ► ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ.!! Read More »

ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ► ಸನಾತನ ಸಂಸ್ಥೆಯ ಕೈವಾಡ ಇದೆಯೇ..???

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.15, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ನೀಡುತ್ತಾ ಬಂದಿದೆ. ಈ ಕೃತ್ಯದ ಹಿಂದೆ ಗೋವಾ ಮೂಲದ ಸನಾತನ ಸಂಸ್ಥೆ ಇರಬಹುದಾ ಎನ್ನುವ ಶಂಕೆಯನ್ನು ವಿಶೇಷ ತನಿಖಾ ತಂಡದ ಪೊಲೀಸರು ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆಗೆ ಬಳಸಲಾದ 7.65 ಎಂಎಂ ಪಿಸ್ತೂಲ್, ವಿಚಾರವಾದಿಗಳಾದ ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಅವರ ಹತ್ಯೆಗೂ 7.65 ಎಂಎಂ ಪಿಸ್ತೂಲನ್ನೆ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ಪಿಸ್ತೂಲ್ ಬಳಕೆಯ ಸಾಮ್ಯತೆ ಬಗ್ಗೆ ತಿಳಿಸಿದ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ► ಸನಾತನ ಸಂಸ್ಥೆಯ ಕೈವಾಡ ಇದೆಯೇ..??? Read More »

ಕರ್ನಾಟಕ

ಮರದ ರೆಂಬೆ ಮುರಿದು ಬಿದ್ದು ವ್ಯಕ್ತಿ ಮೃತ್ಯು ► ಬಸ್ ಕ್ಲೀನರ್ ಪಾಲಿಗೆ ಮರದ ರೆಂಬೆಯೇ ಯಮರಾಜ..!!

(ನ್ಯೂಸ್ ಕಡಬ) newskadaba.com ಮೈಸೂರು,ಸೆ.15, ಖಾಸಗಿ ಬಸ್ಸನ್ನು ಕ್ಲೀನ್ ಮಾಡುತ್ತಿದ್ದ ವೇಳೆ ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರದ ಎದುರು ಶುಕ್ರವಾರ ನಡೆದಿದೆ. ಮೃತ ವ್ಯಕ್ತಿಯು ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು 45 ವರ್ಷದ ಮಂಚಯ್ಯ ಎಂದು ಗುರುತಿಸಲಾಗಿದೆ. ಎಸ್.ಎಸ್.ಟಿ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಚಯ್ಯ ಎಂದಿನಂತೆ ಇಂದು ಬೆಳಗ್ಗೆ ವಾಹನವನ್ನು ಸ್ವಚ್ಛಗೊಳಿಸುತ್ತಾ ನಿಂತಿದ್ದರು. ಅದೇ ವೇಳೆ ಅಲ್ಲಿಯೇ ಇದ್ದ ಹಳೆಯ

ಮರದ ರೆಂಬೆ ಮುರಿದು ಬಿದ್ದು ವ್ಯಕ್ತಿ ಮೃತ್ಯು ► ಬಸ್ ಕ್ಲೀನರ್ ಪಾಲಿಗೆ ಮರದ ರೆಂಬೆಯೇ ಯಮರಾಜ..!! Read More »

ಕರ್ನಾಟಕ
Scroll to Top