ನ್ಯೂಸ್ ಕಡಬ

ಆಲಂಕಾರು: ಭಾರಿ ಗಾಳಿ ಮಳೆ ► ಮನೆಗೆ ಮರ ಬಿದ್ದು ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಆಲಂಕಾರು, ಎ.21. ಸಿಡಿಲು ಮಳೆಯೊಂದಿಗೆ ಬೀಸಿದ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಆಲಂಕಾರು ಗ್ರಾಮದ ಕೇಪುಳು ಅಣ್ಣಿ ಪುಜಾರಿಯವರ ಮನೆಯ ಮೇಲೆ ಬೃಹತ್ ಗಾತ್ರದ ಮರ ತುಂಡಾಗಿ ಬಿದ್ದ ಪರಿಣಾಮ 600ಕ್ಕೂ ಅಧಿಕ ಹಂಚು, ಮಾಡಿನ ಪಕ್ಕಾಸು, ನೀರಿನ ಟ್ಯಾಂಕ್ ಸಂಪುರ್ಣ ನಾಶವಾಗಿದೆ. ಮರ ಬಿದ್ದ ಪರಿಣಾಮ ಮನೆಯ ಗೋಡೆಯು ಸಹ ಬಿರುಕು ಬಿಟ್ಟಿದೆ. ಘಟನಾ ಸ್ಥಳಕ್ಕೆ ಆಲಂಕಾರು ಗ್ರಾಮಕರಣಿಕ ರಮೇಶ್, ಸಹಾಯಕ ವಿಶ್ವನಾಥ ಗ್ರಾಮ ಪಂಚಾಯತ್ ಸದಸ್ಯ […]

ಆಲಂಕಾರು: ಭಾರಿ ಗಾಳಿ ಮಳೆ ► ಮನೆಗೆ ಮರ ಬಿದ್ದು ಅಪಾರ ಹಾನಿ Read More »

ಕರಾವಳಿ

ಮಾರ್ ಇವಾನಿಯೋಸ್ ಬಿ.ಎಡ್ ಕಾಲೇಜಿಗೆ ಶೇ. 100 ಫಲಿತಾಂಶ

(ನ್ಯೂಸ್ ಕಡಬ) newskadaba.com ಕುಂತೂರು, ಎ.21.  ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2017 ನೇ ಸಾಲಿನ ಬಿ.ಎಡ್ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಾರ್ ಇವಾನಿಯೋಸ್ ಬಿ.ಎಡ್. ಕಾಲೇಜಿನ ಒಟ್ಟು 20 ವಿದ್ಯಾರ್ಥಿಗಳು ಹಾಜರಾಗಿದ್ದು 18 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 02 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಚತುರ್ಥ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 24 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮಾರ್ ಇವಾನಿಯೋಸ್ ಬಿ.ಎಡ್ ಕಾಲೇಜಿಗೆ ಶೇ. 100 ಫಲಿತಾಂಶ Read More »

ಕರಾವಳಿ

ಐಪಿಎಲ್ ಹುಚ್ಚಿಗೆ ರಾಜ್ಯದಲ್ಲಿ ಮೊದಲ ಬಲಿ ► ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರ…!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ಐಪಿಎಲ್ ನಿಂದಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಸಮೀಪದ ಹೊಟೇಲ್ ಪ್ರಶಾಂತ್ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಆಗ್ರಹಾರದ ನಿವಾಸಿ ಯೋಗೀಶ್ (30) ಎಂದು ಗುರುತಿಸಲಾಗಿದೆ. ಐಪಿಎಲ್ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರುಪಾಯಿ ಕಳೆದುಕೊಂಡಿರುವುದರಿಂದ ಈತ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇಂದು ಮಧ್ಯಾಹ್ನದ ವೇಳೆಯಲ್ಲಿ ಹೆಚ್.ಎಸ್.ಆರ್ ಲೇಔಟ್ ಸಮೀಪದ ಹೊಟೇಲ್ ಪ್ರಶಾಂತ್ ಗೆ ತೆರಲಿ ಅಲ್ಲಿ ಒಂದು ರೂಮು ಬಾಡಿಗೆಗೆ ಪಡೆದುಕೊಂಡಿರುತ್ತಾನೆ. ನಂತರ 12.30ರ ವೇಳೆಗೆ

ಐಪಿಎಲ್ ಹುಚ್ಚಿಗೆ ರಾಜ್ಯದಲ್ಲಿ ಮೊದಲ ಬಲಿ ► ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರ…!! Read More »

ಕರ್ನಾಟಕ

ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ

(ನ್ಯೂಸ್ ಕಡಬ) newskadaba.com ಎ.20. ಬೇಕಾಗುವ ಸಾಮಾಗ್ರಿಗಳು : ಕ್ಯಾರೆಟ್( 2) ಬಾದಾಮಿ( 1 ಕಪ್, ನೆನೆಸಿದ್ದು) ಏಲಕ್ಕಿ( ಸ್ವಲ್ಪ) ಹಾಲು( 1 ಕಪ್, ಕುದಿಸಿ ಗಟ್ಟಿಗೊಳಿಸಿದ್ದು) ಹಾಲು( 1 ಕಪ್) ಸಕ್ಕರೆ( ರುಚಿಗೆ ತಕ್ಕಷ್ಟು) ಏಲಕ್ಕಿ(ಸ್ವಲ್ಪ) ಮಾಡುವ ವಿಧಾನ : ಕ್ಯಾರೆಟ್ , ಬಾದಾಮಿಗೆ ಸಕ್ಕರೆ ಹಾಗು ಹಾಲು ಬೆರೆಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ಗಟ್ಟಿಯಾಗುವ ತನಕ ಕಾಯಿಸಿಕೊಳ್ಳಿ. ನಂತರ ಗಟ್ಟಿಗೊಳಿಸಿದ ಹಾಲು ಹಾಗು ಏಲಕ್ಕಿ ಸೇರಿಸಿ ಚೆನ್ನಾಗಿ

ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ Read More »

ಅಡುಗೆ

ಆತೂರು, ಕುದುಲೂರುನಲ್ಲಿ ಡಾ| ರಘು ಮನೆ ಮನೆ ಭೇಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.20. ಮೇ 12ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಸುಳ್ಯ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ| ರಘುರವರು ಎ. 20ರಂದು ಬೆಳಿಗ್ಗೆ ಕೊೖಲ ಗ್ರಾಮದ ಕುದುಲೂರು ಹಾಗೂ ರಾಮಕುಂಜ ಗ್ರಾಮದ ಗೋಳಿತ್ತಡಿ, ಗಾಂಧಿಪೇಟೆ ಪರಿಸರದಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು. ಡಾ| ರಘುರವರು ಬೆಳಿಗ್ಗೆ ಗೋಳಿತ್ತಡಿಯಲ್ಲಿ ದಿವಂಗತ ಗೋವಿಂದ ಮಾಸ್ಟರ್ ಅವರ ಮನೆಗೆ ಭೇಟಿ ಅವರ ಪುತ್ರ ಶಿವಪ್ರಸಾದ್ ಮತ್ತು ಮನೆಯವರೊಂದಿಗೆ ಮತ ಯಾಚಿಸಿದರು. ಬಳಿಕ ಅಲ್ಲಿಂದ ಕುದುಲೂರು ಪರಿಸರದಲ್ಲಿ

ಆತೂರು, ಕುದುಲೂರುನಲ್ಲಿ ಡಾ| ರಘು ಮನೆ ಮನೆ ಭೇಟಿ Read More »

ಕರಾವಳಿ

ಪುತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಬಾವ್ಯ ಅಭ್ಯರ್ಥಿಯಾಗಿ ಹಾಜಿ ಸೈಯ್ಯದ್ ಮೀರಾ ಸಾಹೇಬ್ ?

(ನ್ಯೂಸ್ ಕಡಬ) newskadaba.com ಕಡಬ, ಎ.20. ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಾಗಿ ಮಾಜಿ ಜಿ.ಪರಿಷತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಿ ಸೈಯದ್ ಮೀರಾ ಸಾಹೇಬ್ರವರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಬಂಟ್ವಾಳ ಕ್ಷೇತ್ರಕ್ಕೆ ಕೂಡ ಇವರ ಹೆಸರು ಕೇಳಿಬರುತ್ತಿದೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿರುವ ಎಂ.ಬಿ ಸದಾಶಿವ ಹಾಗೂ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿರುವ ಐ.ಸಿ ಕೈಲಾಸ್ರವರ ಹೆಸರುಗಳು ಈಗಾಗಲೇ ಅಂತಿಮ ಪಟ್ಟಿಯಲ್ಲಿ ಪ್ರಚರಿಸುತ್ತಿದ್ದು ಈಗಾಗಲೇ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಂತದಲ್ಲಿದ್ದು ಪ್ರಭಾವಿ

ಪುತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಬಾವ್ಯ ಅಭ್ಯರ್ಥಿಯಾಗಿ ಹಾಜಿ ಸೈಯ್ಯದ್ ಮೀರಾ ಸಾಹೇಬ್ ? Read More »

ಕರಾವಳಿ

ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ (ಕೆಎಸ್ಎಂಸಿಎ) ಅಧ್ಯಕ್ಷರಾಗಿ ಒ.ಜೆ.ಮೈಕಲ್

(ನ್ಯೂಸ್ ಕಡಬ) newskadaba.com ಕಡಬ, ಎ.20.  ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ನ 2018-20ನೇ ಸಾಲಿನ ಪುತ್ತೂರು-ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿ ಒ.ಜೆ.ಮೈಕಲ್ರವರು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಇವರು ಪೆರಾಬೆ ಗ್ರಾ.ಪಂ.ನ ಮಾಜಿ ಸದಸ್ಯರಾಗಿ ಹಾಗೂ ಕಡಬ ತಾಲೂಕು ಹೋರಾಟ ಸಮಿತಿಯ ಕಾರ್ಯದರ್ಶಿಯಾಗಿ, ಪದವು ಸಂತ ಕ್ಷೇವಿಯರ್ ಚರ್ಚ್ನ ಕಾರ್ಯದರ್ಶಿಯಾಗಿ, ಸಂತ ಕ್ಷೇವಿಯರ್ ಕ್ರೆಡಿಟ್ ಯೂನಿಯನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಂತೂರು ಪದವು ಒಟ್ಟಪ್ಲಾಕಲ್ ಒ.ಎಂ ಜೋಸೆಫ್ ಮತ್ತು ಮರಿಯಮ್ಮ ದಂಪತಿ ಪುತ್ರನಾಗಿ (4/5/1956) ಜನಿಸಿದ್ದು ಕಡಬ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ

ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ (ಕೆಎಸ್ಎಂಸಿಎ) ಅಧ್ಯಕ್ಷರಾಗಿ ಒ.ಜೆ.ಮೈಕಲ್ Read More »

ಕರಾವಳಿ

ಆಲಂಕಾರು: ಸಿಡಿಲು ಬಡಿದು ಬಾಲಕಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಎ.20. ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಬಾಲಕಿಯೋರ್ವಳು ಗಾಯಗೊಂಡ ಘಟನೆ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ. ಗಾಯಾಳು‌ ಬಾಲಕಿಯನ್ನು ಆಲಂಕಾರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೇಶವ ಎಂಬವರ ಪುತ್ರಿ, ಆಲಂಕಾರು ಶ್ರೀ ಭಾರತಿ ವಿದ್ಯಾಕೇಂದ್ರದ 2ನೇ ತರಗತಿಯ ವಿದ್ಯಾರ್ಥಿನಿ ಭವ್ಯ(8) ಎಂದು ಗುರುತಿಸಲಾಗಿದೆ. ಈಕೆ ತನ್ನ ಹೆತ್ತವರೊಂದಿಗೆ ಮನೆಯಲ್ಲಿದ್ದ ವೇಳೆ ಸಿಡಿಲಿನ ಆಘಾತಕ್ಕೊಳಗಾಗಿದ್ದು, ತಕ್ಷಣವೇ ಆಲಂಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ

ಆಲಂಕಾರು: ಸಿಡಿಲು ಬಡಿದು ಬಾಲಕಿಗೆ ಗಾಯ Read More »

ಕರಾವಳಿ

 ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ

(ನ್ಯೂಸ್ ಕಡಬ) newskadaba.com  ಕರ್ನಾಟಕ, ಎ.20. ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು ಏಪ್ರಿಲ್ 20 ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸುತ್ತಿದೆ. ಈ ಅವಧಿಯಲ್ಲಿ ಅಗ್ನಿನಿವಾರಣೆ ಮತ್ತು ಅಗ್ನಿಶಮನದ ಬಗ್ಗೆ ತಿಳುವಳಿಕೆ ಹಾಗೂ ಅಣುಕು ಪ್ರದರ್ಶನಗಳನ್ನು ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕಾ ಕೇಂದ್ರಗಳು, ವಿದ್ಯಾಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆ ಇತ್ಯಾದಿ ಕಡೆಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

 ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ Read More »

ಕರ್ನಾಟಕ

ಸಿಇಟಿ ಪರೀಕ್ಷೆ: ಎರಡನೇ ದಿನದ ಹಾಜರಾತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.20.  ಸಿಇಟಿ ಪರೀಕ್ಷೆಯು ಆರಂಭಗೊಂಡಿದ್ದು, ಏಪ್ರಿಲ್ 19 ರಂದು  ಬೆಳಿಗ್ಗೆ ನಡೆದ ಭೌತಶಾಸ್ತ್ರ ವಿಷಯ ಪರೀಕ್ಷೆಗೆ 14131 ವಿದ್ಯಾರ್ಥಿಗಳು ಹಾಜರಾಗಿದ್ದು, 288 ಮಂದಿ ಗೈರು ಹಾಜರಾಗಿದ್ದಾರೆ. ಮಧ್ಯಾಹ್ನ ನಡೆದ ರಸಾಯನಶಾಸ್ತ್ರ ಪರೀಕ್ಷೆಗೆ 14129 ಮಂದಿ ಹಾಜರಾಗಿದ್ದು, 290 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಸಿಇಟಿ ಪರೀಕ್ಷೆ: ಎರಡನೇ ದಿನದ ಹಾಜರಾತಿ Read More »

ಕರಾವಳಿ
Scroll to Top