ನ್ಯೂಸ್ ಕಡಬ

ಬೆಳ್ತಂಗಡಿ: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಸಾಬೀತು ►ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಸಾಬೀತಾದ ಗಮನಾರ್ಹ ಪ್ರಕರಣ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.5. ನಾಲ್ಕು ವರ್ಷಗಳ ಹಿಂದೆ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ಪತ್ನಿ ಹಾಗು ಆಕೆಯ ಪ್ರಿಯಕರನೇ ದೋಷಿಗಳು ಎಂದು ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶಾಲೆ ಮನೆಯ ಅಣ್ಣಯ್ಯ ಗೌಡ ಎಂಬಾತನ್ನು 2014 ಎಪ್ರಿಲ್‌ 19ರಂದು ರಾತ್ರಿ ವೇಳೆಯಲ್ಲಿ ಕೊಲೆ ಮಾಡಲಾಗಿತ್ತು. ಆರೋಪಿಗಳನ್ನು ಅಣ್ಣಯ್ಯ ಗೌಡ ಅವರ ಪತ್ನಿ ಅಮಿತಾ ಯಾನೆ ದೇವಕಿ (42) […]

ಬೆಳ್ತಂಗಡಿ: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಸಾಬೀತು ►ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಸಾಬೀತಾದ ಗಮನಾರ್ಹ ಪ್ರಕರಣ Read More »

ಕರಾವಳಿ

ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ: ಮಂಗಳೂರಿನ ಹಲವೆಡೆ ಪಾರ್ಕಿಂಗ್ ನಿರ್ಬಂಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.5. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರದಂದು ಮಂಗಳೂರಿಗೆ ಆಗಮಿಸಲಿರುವ ಕಾರಣ ನಾಳೆ ಬೆಳಗ್ಗೆ 8 ರಿಂದ ರಾತ್ರಿ 9 ರ ತನಕ ನಗರದ ಹಲವು ಪ್ರದೇಶಗಳಲ್ಲಿ ಪಾರ್ಕಿಂಗ್ ನಿರ್ಬಂಧವನ್ನು ಹೇರಲಾಗಿದೆ. ನಾಳೆ ಸಂಜೆ 5.30ಕ್ಕೆ ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ನೆಹರು ಮೈದಾನದ 500ಮೀ. ಸುತ್ತಲಿನ ಪ್ರದೇಶದಲ್ಲಿ ಅನಗತ್ಯ ಪಾರ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ಕರ್ದಿ ಸರ್ಕೂಟ್ ಹೌಸ್ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಪಾರ್ಕಿಂಗ್ ಅನ್ನು

ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ: ಮಂಗಳೂರಿನ ಹಲವೆಡೆ ಪಾರ್ಕಿಂಗ್ ನಿರ್ಬಂಧ Read More »

ಕರಾವಳಿ

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಹಣ್ಣು ಎಳನೀರು ಕಾಳುಮೆಣಸಿನ ಪುಡಿ ಐಸ್ ಕ್ಯೂಬ್ ಮಾಡುವ ವಿಧಾನ:  ಕಲ್ಲಂಗಡಿ ಹಣ್ಣಿನ ಬೀಜ ತೆಗೆದು, ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿಟ್ಟುಕೊಳ್ಳಿ. ಇದಕ್ಕೆ ಎಳನೀರಿನ ನೀರನ್ನು ಬೆರೆಸಿ ನಂತರ ಸ್ವಲ್ಪ ಕಾಳು ಮೆಣಸಿನ ಪುಡಿ ಬೆರೆಸಿ. ಈ ರಸಕ್ಕೆ ಕಲ್ಲಂಗಡಿ ಹಣ್ಣಿನ ಚಿಕ್ಕ ಚಿಕ್ಕ ಚೂರುಗಳನ್ನು ಹಾಗು ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ. ಸುಡು ಬೇಸಿಗೆಯಲ್ಲಿ ಈ ಜ್ಯೂಸ್ ಕುಡುದರೆ ಸಿಗುವ ಮಜವೇ ಬೇರೆ…!

ಈ ಬೇಸಿಗೆಯಲ್ಲಿ ಸವಿಯಿರಿ ಸ್ಪೆಷಲ್ ಕಲ್ಲಂಗಡಿ- ಎಳನೀರು ಜ್ಯೂಸ್ Read More »

ಅಡುಗೆ

ಮದುವೆಗೆ ಮುನ್ನ ಹಾಲ್ ನಲ್ಲೇ ವರನ ಬಂಧನ!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.4. ತನ್ನ ಮೊದಲನೆ ಮದುವೆಯನ್ನು ಮುಚ್ಚಿಟ್ಟ ಕಾರಣಕ್ಕಾಗಿ ವರನ್ನು ಮದುವೆಗೆ ಮುನ್ನ ಮದುವೆ ಹಾಲ್ ನಲ್ಲೇ ಪೋಲೀಸರು ಬಂಧಿಸಿರುವ ಘಟನೆಯು ಮುಲ್ಕಿಯಲ್ಲಿ ನಡೆದಿದೆ. ಮೊದಲನೇ ಪತ್ನಿಯು ನೀಡಿದ ದೂರಿನ ಮೇರೆಗೆ ಉಡುಪಿ ಪೋಲಿಸರು ವರನ್ನು ಬಂಧಿಸಿದ್ದಾರೆ. ಈತ ಎರಡು ವರ್ಷಗಳ ಹಿಂದೆ ಮೊದಲನೆಯ ಮದುವೆ ಆಗಿದ್ದು, ಕಳೆದ ಬಾರಿ ಆತನ ಪತ್ನಿ ವಿಚಾರಿಸಿದಾಗ ಆತ ತಾನು ವಿದೇಶದಲ್ಲಿ ಇರುವುದಾಗಿ ಆಕೆಯ ಬಳಿ ಸುಳ್ಳು ಹೇಳಿದ್ದ. ನಂತರ ಆತನ ಪತ್ನಿಗೆ ಎರಡನೆಯ ಮದುವೆ ವಿಚಾರವು ತಿಳಿದಿದ್ದು,

ಮದುವೆಗೆ ಮುನ್ನ ಹಾಲ್ ನಲ್ಲೇ ವರನ ಬಂಧನ! Read More »

ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ: ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ

(ನ್ಯೂಸ್ ಕಡಬ) newskadaba.com ಕಡಬ, ಮೇ.4. ಮಂಗಳೂರು ವಿಕಾಸ್ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ವಂದಿತ ಎಸ್.ವಿ., ಇವರು 2017-18ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ(ಎಸ್ಇಬಿಎ)ದಲ್ಲಿ 579 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಈಕೆ ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ ಜಾಲು ನಿವಾಸಿ, ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಎಸ್.ಎಚ್ ಹಾಗೂ ಶ್ರೀಮತಿ ಜಲಜಾಕ್ಷಿ ದಂಪತಿ ಪುತ್ರಿ.  

ದ್ವಿತೀಯ ಪಿಯುಸಿ ಫಲಿತಾಂಶ: ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ Read More »

ಕರಾವಳಿ

ಡಿಕೆಶಿ ಸುಳ್ಯಕ್ಕೆ ಬಂದು ನನ್ನ ಬಗ್ಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ: ಶಾಸಕ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.4.  ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಬುಧವಾರ ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನಾನು ಕ್ಷೇತ್ರದ ಶಾಸಕರ ಮುಖವನ್ನೇ ನೋಡಿಲ್ಲ ಎನ್ನುವ ಮೂಲಕ ದುರಾಂಕರದಿಂದ ನನ್ನನ್ನು ಅವಮಾನ ಮಾಡಿದ್ದಾರೆ, ಇದು ಅವರು ಕ್ಷೇತ್ರ ಜನತೆಗೆ ಮಾಡಿದ ಅವಮಾನ ಎಂದು ಸುಳ್ಯ ಶಾಸಕ ಎಸ್ ಅಂಗಾರ ಅಕ್ರೋಶ ವ್ಯಕ್ತಪಡಿಸಿದರು. ಅವರು ಗುರುವಾರ ಸಾಯಂಕಾಲ ಆಲಂಕಾರಿನ ಬಿಜೆಪಿ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಇಪ್ಪತೈದು ವರ್ಷಗಳಿಂದ ಕ್ಷೇತ್ರ ಶಾಸಕನಾಗಿ ಇಲ್ಲಿನ ಜನರ ವಿಶ್ವಾಸವನ್ನು ಗಳಿಸಿರುವ

ಡಿಕೆಶಿ ಸುಳ್ಯಕ್ಕೆ ಬಂದು ನನ್ನ ಬಗ್ಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ: ಶಾಸಕ ಅಂಗಾರ Read More »

ಕರಾವಳಿ

ರೈಲಿನಲ್ಲಿ ಟೀ, ಕಾಫಿ ಕುಡಿಯುವ ಮುನ್ನ ಎಚ್ಚರ!

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ರೈಲಿನ ಶೌಚಾಲಯದ ನೀರನ್ನು ರೈಲು ಪ್ರಯಾಣಿಕರಿಗೆ ಒದಗಿಸುವ ಕಾಫಿ, ಟೀ ಗೆ ಬಳಸಿರುವ ವಿಷಯವು ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಟೀ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಸೌಥ್ ಸೆಂಟ್ರಲ್ ರೈಲ್ವೆಯ ಪಿಆರ್ ಒ  ಪ್ರಕಟನೆ ಹೊರಡಿಸಿದ್ದಾರೆ. ಟೀ ವ್ಯಾಪಾರಿಯೊಬ್ಬ ರೈಲಿನ ಶೌಚಾಲಯದ ನೀರನ್ನು ತುಂಬಿಕೊಂಡು ಬಂದು ಇನ್ನೊಬ್ಬ ವ್ಯಕ್ತಿಗೆ ಕಾಫಿ, ಟೀ ಬಳಕೆಗೋಸ್ಕರ ನೀಡುತ್ತಿರುವ ದೃಶ್ಯಗಳನ್ನು ರೈಲು ಯಾತ್ರಿಯೊಬ್ಬ ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಿದ್ದ. ಈ ಘಟನೆಯು

ರೈಲಿನಲ್ಲಿ ಟೀ, ಕಾಫಿ ಕುಡಿಯುವ ಮುನ್ನ ಎಚ್ಚರ! Read More »

ರಾಷ್ಟ್ರೀಯ ನ್ಯೂಸ್

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ!

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದೇ ಇರುವುದರಿಂದ ಕಾಲ್ ಮಾಡಲು ಸಾಧ್ಯವಿಲ್ಲ ಎಂದು ನೀವು ಯೋಚನೆ ಮಾಡಬೇಕಾಗಿಲ್ಲ. ನೆಟ್‍ವರ್ಕ್ ಇಲ್ಲದೇ ಇರುವ ಜಾಗದಿಂದ ನೀವು ಇತರ ಯಾವುದೇ ಮೊಬೈಲ್‍ಗೆ ಅಥವಾ ಲ್ಯಾಂಡ್‍ಲೈನ್ ಗೆ ಕರೆ ಮಾಡಬಹುದು. ಇದು ಹೇಗೆ ಸಾಧ್ಯ ಎಂದು ನೀವು ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ. ಇಂಟರ್ ನೆಟ್ ಟೆಲಿಫೋನಿ ಎಂಬ ಆ್ಯಪ್ ಬಳಸಿ ನೀವು ನೆಟ್‍ವರ್ಕ್ ಸಿಗ್ನಲ್ ಇಲ್ಲದಿರುವ

ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಗ್ನಲ್ ಇಲ್ಲದಿದ್ದರೂ ಕಾಲ್ ಮಾಡಲು ಸಾಧ್ಯ! Read More »

ತಂತ್ರಜ್ಞಾನ

ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.2. 2018ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಶೇ.96.22 ಫಲಿತಾಂಶ ಪಡೆದುಕೊಂಡಿದೆ. ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 159 ವಿದ್ಯಾರ್ಥಿಗಳು ಹಾಜರಾಗಿದ್ದು ಆ ಪೈಕಿ ಒಟ್ಟು 153 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಹಾಜರಾಗಿದ್ದು, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗು ವಾಣಿಜ್ಯ ವಿಭಾಗದಲ್ಲಿ ಒಟ್ಟು 103 ಪರೀಕ್ಷೆ ಬರೆದಿದ್ದು ಈ ಪೈಕಿ 101 ಮಂದಿ ಪಾಸಾಗಿದ್ದಾರೆ. 13

ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ Read More »

ಕರಾವಳಿ

ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.3. ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ತರಗತಿಗಳು ಇಂದಿನಿಂದ ಪ್ರಾರಂಭಗೊಳಿಸುವಂತೆ ಪ.ಪೂ. ಶಿಕ್ಷಣ ಇಲಾಖೆಯು ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಹಾಗು ಪೋಷಕರ ಬೇಸರಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯು ಮುಕ್ತಾಯಗೊಂಡು ಜೂನ್ ಮೊದಲ ವಾರದಂದು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷ ಪ.ಪೂ. ಶಿಕ್ಷಣ ಇಲಾಖೆಯು ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿರುವುದರಿಂದಾಗಿ, ದ್ವಿತೀಯ ಪಿಯುಸಿ

ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ Read More »

ಕರ್ನಾಟಕ
Scroll to Top