ನ್ಯೂಸ್ ಕಡಬ

ಮಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಹುಡುಗಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.9.ತನ್ನ ತಂದೆಯಿಂದ ಲೈಂಗಿಕ ಕಿರಿಕುಳಕ್ಕೆ ಒಳಗಾಗಿ ಗರ್ಭಿಣಿಯಾದ ಬಾಲಕಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯನ್ನು ಪಡೆಯುವುದರ ಮೂಲಕ ಪಾಸಾಗಿದ್ದಾಳೆ. 16 ವರ್ಷದ ಬಾಲಕಿಯಾಗಿದ್ದ ವೇಳೆ ಸ್ವತಃ ತನ್ನ ತಂದೆಯು ದುಷ್ಕೃತ್ಯವೆಸಗಿದ್ದರೂ, ಗಟ್ಟಿ ಮನಸ್ಸು ಮಾಡಿ ಪರೀಕ್ಷೆಗೆ ಹಾಜರಾಗಿದ್ದಳು. ಇದೀಗ ಆಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 360 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಪರೀಕ್ಷೆ ಬರೆಯುವ ವೇಳೆಯಲ್ಲಿ ಬಾಲಕಿಯು 8 ತಿಂಗಳ ಗರ್ಭಿಣಿಯಾಗಿದ್ದಳು ಹಾಗೂ ಜಿಲ್ಲಾಡಳಿತವು ಈಕೆಗೆ ಬೆಂಬಲ ನೀಡಿ ಪರೀಕ್ಷೆ […]

ಮಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಹುಡುಗಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆ Read More »

ಕರಾವಳಿ

ಮದುವೆ ಮಂಟಪದಿಂದಲೇ ಪರೀಕ್ಷೆಗೆ ಹಾಜರಾದ ವಧು!

(ನ್ಯೂಸ್ ಕಡಬ) newskadaba.com ಮಂಡ್ಯ, ಮೇ.9. ಪರೀಕ್ಷೆ ಬರೆಯಲೆಂದು ವಧುವು ಮದುವೆ ಮಂಟಪದಿಂದಲೇ ಬಂದು ಪರೀಕ್ಷೆ ಬರೆದಿರುವ ಘಟನೆಯು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಇಂದು ನಡೆದಿದೆ. ತನ್ನ ದ್ವಿತೀಯ ವರ್ಷದ ಪರೀಕ್ಷೆ ಬರೆಯಲೆಂದು ಕಾವ್ಯಾ ಅವರು ಮದುವೆ ಮಂಟಪದಿಂದ ಬಂದಿದ್ದಾರೆ. ಅವರು ಕಲ್ಪತರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ. ಇಂದು ಕಾವ್ಯಾರಿಗೆ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಇತ್ತು, ತನ್ನ ಮದುವೆಯ ಸಂಭ್ರಮದ ನಡುವೆಯೂ ಬಂದು ಪರೀಕ್ಷೆ ಬರೆದಿರುವುದು ಕುತೂಹಲಕಾರಿ ಸಂಗತಿಯೇ ಸರಿ. ಮದುವೆಯ ಕೆಲವು ಶಾಸ್ತ್ರಗಳನ್ನು

ಮದುವೆ ಮಂಟಪದಿಂದಲೇ ಪರೀಕ್ಷೆಗೆ ಹಾಜರಾದ ವಧು! Read More »

ಕರ್ನಾಟಕ

ಧರ್ಮಸ್ಥಳ: ಹದಗೆಟ್ಟಿರುವ ರಾಜಕೀಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ದಂಪತಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಮೇ.9. ಹದಗೆಟ್ಟಿರುವ ರಾಜಕೀಯಕ್ಕೆ ಮನನೊಂದು ದಂಪತಿಯು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಸ್ತುತ ರಾಜಕರಣವು ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ರಾಜಕೀಯದಲ್ಲಿ ಜನರು ಆಮಿಷಕ್ಕೆ ಒಳಗಾಗಿ ಯಾವುದೇ ನೀಚ ಕೃತ್ಯಕ್ಕೂ ಹೇಸುವುದಿಲ್ಲ, ಇದರಿಂದ ಮನನೊಂದು ತಾವು ಆತ್ಮಹತ್ಯೆ ಮಾಡುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ, ಹಾಗು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಬರೆದಿದ್ದಾರೆ ಅದಕ್ಕಾಗಿ ನಾವು ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡುತ್ತಿರುವುದಾಗಿ

ಧರ್ಮಸ್ಥಳ: ಹದಗೆಟ್ಟಿರುವ ರಾಜಕೀಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ದಂಪತಿ Read More »

ಕರಾವಳಿ

ಕಳಂಕಿತರಿಂದ ತುಂಬಿದ ಬಿಜೆಪಿಗೆ ಹೀನಾಯ ಸೋಲು: ಮಾಜಿ ಸಚಿವ ಗಂಗಾಧರ ಗೌಡ

(ನ್ಯೂಸ್ ಕಡಬ) newskadaba.com ಕಡಬ, ಮೇ.8. ಜಾತ್ಯಾತೀತ ನೆಲೆಗಟ್ಟಿನಲ್ಲಿ ದೇಶದ ಎಲ್ಲಾ ಪ್ರಜೆಗಳನ್ನು ಸಮಾನತೆಯಿಂದ ನೋಡುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಳಂಕಿತರಿಂದ ತುಂಬಿರುವ ಬಿಜೆಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬೆಳ್ತಂಗಡಿಯ ಗಂಗಾಧರ ಗೌಡ ಅವರು ಭವಿಷ್ಯ ನುಡಿದರು. ಅವರು ಮಂಗಳವಾರ ಕಡಬದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಎಲ್ಲರಿಗೂ ನೆರಳು ಕೊಡುವ ಪಕ್ಷ. ಆದರೆ ಬಿಜೆಪಿ

ಕಳಂಕಿತರಿಂದ ತುಂಬಿದ ಬಿಜೆಪಿಗೆ ಹೀನಾಯ ಸೋಲು: ಮಾಜಿ ಸಚಿವ ಗಂಗಾಧರ ಗೌಡ Read More »

ಕರಾವಳಿ

ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ► ಸಿಬಿಐ ತನಿಖೆಗೆ ನಿರಾಕರಿಸಿದ ಸುರ್ಪಿಂಕೋರ್ಟ್

(ನ್ಯೂಸ್ ಕಡಬ) newskadaba.com ದೆಹಲಿ,ಮೇ.8. ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಪಂಜಾಬ್ ನ ಪಠಾನ್ ಕೋಟ್ ಗೆ ವರ್ಗಾಯಿಸುವಂತೆ ಸೋಮವಾರದಂದು ಸುರ್ಪಿಂಕೋರ್ಟ್ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸುವ ಸಂಗತಿಗಳು ಅಧಿಕಗೊಂಡಿದೆ ಎಂದು ಕತುವಾದಿಂದ ಪ್ರಕರಣವನ್ನು ವರ್ಗಾವಣೆ ಮಾಡಬೇಕೆಂದು ಆಸಿಫಾಳ ಕುಟುಂಬವು ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ದಿನನಿತ್ಯದ ಕ್ಯಾಮರಾ ವಿಚಾರಣೆಗೆ ಆದೇಶಿಸಿದೆ ಮತ್ತು ಪ್ರಕರಣದ ಪ್ರಗತಿಗೆ ಈ ಮೇಲ್ವಿಚಾರಣೆ ಸಹಕರಿಸಲಿದೆ ಎಂದು ತಿಳಿಸಿದೆ. ನ್ಯಾಯಾಲಯವು

ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ► ಸಿಬಿಐ ತನಿಖೆಗೆ ನಿರಾಕರಿಸಿದ ಸುರ್ಪಿಂಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಎಸ್.ಎಸ್.ಎಲ್.ಸಿ. ಪರೀಕ್ಷೆ: ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿಗಳ ಸಾಧನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.8. ಸೇವಾಭಾರತಿ(ರಿ) ಮಂಗಳೂರು ನಡೆಸುತ್ತಿರುವ ಕೊಕ್ಕಡ ಮತ್ತು ಎಂಡೋ ಪಾಲನ ಕೇಂದ್ರದ ಎರಡು ವಿದ್ಯಾರ್ಥಿಗಳು ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಕರ್ನಾಟಕದಲ್ಲೇ ಪ್ರಪ್ರಥಮವಾಗಿ ಎಂಡೋಪೀಡಿತ ವಿದ್ಯಾರ್ಥಿಗಳು ಪಾಲನಾಕೇಂದ್ರದ ಮೂಲಕ ತರಬೇತಿ ಪಡೆದು ಕೊಕ್ಕಡ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಡಿ.ಡಿ.ಪಿ.ಪಿ ಸಹಕಾರದಿಂದ, ಬರಹಗಾರರ ಸಹಕಾರದಿಂದ ಪರೀಕ್ಷೆ ಬರೆದಿರುತ್ತಾರೆ. ಕು|| ತುಳಸಿ ಎನ್. ಕೊಕ್ಕಡದ ಶ್ರೀ ನಾರಾಯಣ ನಾಕ್, ಶ್ರೀಮತಿ ಯಶೋದ ರವರ ಪುತ್ರಿ. ಹಿಂದಿ ಮತ್ತು ಇಂಗ್ಲಿಷ್ ನಿಂದ ವಿನಾಯಿತಿ ಪಡೆದು ಉಳಿದ

ಎಸ್.ಎಸ್.ಎಲ್.ಸಿ. ಪರೀಕ್ಷೆ: ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿಗಳ ಸಾಧನೆ Read More »

ಕರಾವಳಿ

ಮಾರ್ ಇವಾನಿಯೋಸ್ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕುಂತೂರು, ಮೇ.8. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ನಿಷ್ಠೆಯಿಂದ ಕರ್ತವ್ಯವನ್ನು ಪಾಲಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯ ಎಂಬುದಾಗಿ ಶ್ರೀ ದುರ್ಗಾಂಬ ಫ್ರೌಢ ಶಾಲೆ ಆಲಂಕಾರು ಇಲ್ಲಿನ ಮುಖ್ಯೊಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರು ನುಡಿದರು. ಅವರು ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ 2017-18ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಗುರಿಯನ್ನು ತಲುಪಲು ಛಲ ಮುಖ್ಯವಾದದ್ದು ಮತ್ತು ಗುರಿಯನ್ನು ತಲುಪಲು ಗುರುವಿನ ಮಾರ್ಗದರ್ಶನದಂತೆ ಮುನ್ನಡೆಯಲು ತಾಳ್ಮೆ, ಹೊಂದಾಣಿಕೆ,

ಮಾರ್ ಇವಾನಿಯೋಸ್ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ Read More »

ಕರಾವಳಿ

ಮೇ 8 – ವಿಶ್ವ ರೆಡ್ ಕ್ರಾಸ್ ದಿನ

(ನ್ಯೂಸ್ ಕಡಬ) newskadaba.com ಮೇ.8.  ಜಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ [Through Humanity to Peace ] ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8.  1859 ರ ಜೂನ್ 24 ರಂದು ‘ಸಲ್ಫರಿನೋ’ ಕದನದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಶ್ರೀ

ಮೇ 8 – ವಿಶ್ವ ರೆಡ್ ಕ್ರಾಸ್ ದಿನ Read More »

ಆರೋಗ್ಯ ಮಾಹಿತಿ

ಸುಳ್ಯದಲ್ಲಿ ಶಾಸಕ ಅಂಗಾರ ಗೆದ್ದು ಸಚಿವರಾಗಲಿದ್ದಾರೆ : ಪುಲಸ್ತ್ಯಾ ರೈ

(ನ್ಯೂಸ್ ಕಡಬ) newskadaba.com  ಕಡಬ, ಮೇ.7. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಸುಳ್ಯದ ಬಂಗಾರ ಎಸ್.ಅಂಗಾರ ಅತ್ಯಧಿಕ ಮತಗಳೊಂದಿಗೆ ವಿಜಯಿಯಾಗಿ ರಾಜ್ಯದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಉಪಾಧ್ಯಕ್ಷೆ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ರಾಜ್ಯ ಕಾರ್ಯದರ್ಶಿ ಪುಲಸ್ತ್ಯಾ ರೈ ವಿಶ್ವಾಸ ವ್ಯಕ್ತಪಡಿಸಿದರು. ಅವರು ಸೋಮವಾರ ಕಡಬ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸತತ 5 ಬಾರಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಅಜಾತ ಶತ್ರು ಶಾಸಕ ಎಸ್.ಅಂಗಾರ

ಸುಳ್ಯದಲ್ಲಿ ಶಾಸಕ ಅಂಗಾರ ಗೆದ್ದು ಸಚಿವರಾಗಲಿದ್ದಾರೆ : ಪುಲಸ್ತ್ಯಾ ರೈ Read More »

ಕರಾವಳಿ

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 79% ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಮೇ.7. ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 10ನೇಯಲ್ಲಿ 79% ಫಲಿತಾಂಶ ಬಂದಿರುತ್ತದೆ. ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 30 ಜನ ಉತ್ತಿರ್ಣರಾಗಿರುತ್ತಾರೆ. ದೀಪಕ್ ಕೆ 575(92) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಭರತ್ ಕೆ 571(91%) ದ್ವಿತೀಯ ಹಾಗೂ ಮಯೂರ್ ಎಂ 562(89.9%) ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಉನ್ನತ ಶ್ರೇಣಿ 2 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿ 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ 3 ಹಾಗೂ ತೃತೀಯ ಶ್ರೇಣಿ 4 ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ 79% ಫಲಿತಾಂಶ Read More »

ಕರಾವಳಿ
Scroll to Top