NewsKadaba Team

ಉಪ್ಪಿನಂಗಡಿ: ಗಂಭೀರ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿರುವ ಹಸು ➤ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 04. ಹಸುವೊಂದು ಗಾಯಗೊಂಡು ನೋವಿನಿಂದ ನರಳುತ್ತಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಹಸುವಿನ ಕೊಂಬು ತುಂಡಾಗಿದ್ದು, ನಡೆಯಲೂ ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಹೋಟೆಲ್ ಒಂದರ ಮುಂಬಾಗದಲ್ಲಿ ಬಿದ್ದಿದೆ. ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು‌ ಶಂಕಿಸಲಾಗಿದೆ.

ಉಪ್ಪಿನಂಗಡಿ: ಗಂಭೀರ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿರುವ ಹಸು ➤ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರುವ ಸಾಧ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪರ್ಪುಂಜ: ಬೈಕ್ ಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 04. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಪರ್ಪುಂಜದಲ್ಲಿ ನಡೆದಿದೆ. ಪರಸ್ಪರ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ ಗಳು ನಡುವೆ ಢಿಕ್ಕಿ ಸಂಭವಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಪರ್ಪುಂಜ: ಬೈಕ್ ಗಳ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುತ್ತಿಗಾರು: ಕಂದಕಕ್ಕೆ ಉರುಳಿದ ಕಾರು ➤ ಕಡಬ ಸಿಎ ಬ್ಯಾಂಕ್ ಸಿಬ್ಬಂದಿ‌ ಸೇರಿದಂತೆ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜ.04. ಮಾರುತಿ ಆಲ್ಟೋ ಕಾರೊಂದು ರಸ್ತೆ ಬದಿಯ ರಬ್ಬರ್ ತೋಟಕ್ಕೆ ಜಾರಿ ಬಿದ್ದು ಮೂರು ಮಂದಿಗೆ ಗಾಯಗೊಂಡ ಘಟನೆ ಗುತ್ತಿಗಾರು ಪಂಜ ರಸ್ತೆಯ ಬಳ್ಳಕದಲ್ಲಿ ನಡೆದಿದೆ. ಕಡಬ ಪಣೆಮಜಲು ನಿವಾಸಿಗಳಾದ ಗಣೇಶ್, ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಅನುಷಾ ಹಾಗೂ ಅವರ ತಾಯಿಗೆ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುತ್ತಿಗಾರು: ಕಂದಕಕ್ಕೆ ಉರುಳಿದ ಕಾರು ➤ ಕಡಬ ಸಿಎ ಬ್ಯಾಂಕ್ ಸಿಬ್ಬಂದಿ‌ ಸೇರಿದಂತೆ ಮೂವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿರತೆಯ ಬೆನ್ನಲ್ಲೇ ಕಾಡುಕೋಣಗಳ ಹಾವಳಿ…! ➤ ಪುತ್ತೂರಿನಲ್ಲಿ ಗದ್ದೆಗೆ ದಾಳಿ ಮಾಡಿ ಅಪಾರ ಪೈರು ನಾಶಮಾಡಿದ ಕಾಡುಕೋಣ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 04. ಒಂದು ಕಡೆಯಲ್ಲಿ ಚಿರತೆ ಭಯ ಹುಟ್ಟಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಕಾಡುಕೋಣಗಳು ಕೃಷಿಯನ್ನು ನಾಶ ಮಾಡುತ್ತಿವೆ. ಸುಮಾರು 10 ಕ್ಕೂ ಅಧಿಕ ಕಾಡುಕೋಣಗಳ ಹಿಂಡೊಂದು ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಬಪ್ಪಪುಂಡೇಲು ಹೊನ್ನಪ್ಪ ನಾಯ್ಕ ಎಂಬವರ ಗದ್ದೆಗೆ ದಾಳಿ ಮಾಡಿದ ಕೋಣಗಳು ಭತ್ತದ ಪೈರನ್ನು ನಾಶಮಾಡಿದೆ. ಇನ್ನೇನು ಪೈರು ತೆನೆ ಬಿಡುವ ಹಂತದಲ್ಲಿತ್ತು. ಎರಡು ದಿನಗಳಿಂದ ರಾತ್ರಿ ವೇಳೆ ಕಾಡುಕೋಣಗಳು ದಾಳಿ ಮಾಡಿ ಮುಕ್ಕಾಲು ಭಾಗ ಪೈರನ್ನು ಪೈರನ್ನು ತಿಂದು

ಚಿರತೆಯ ಬೆನ್ನಲ್ಲೇ ಕಾಡುಕೋಣಗಳ ಹಾವಳಿ…! ➤ ಪುತ್ತೂರಿನಲ್ಲಿ ಗದ್ದೆಗೆ ದಾಳಿ ಮಾಡಿ ಅಪಾರ ಪೈರು ನಾಶಮಾಡಿದ ಕಾಡುಕೋಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟೋಲ್ ಸಿಬ್ಬಂದಿ ಮೇಲೆ ಹಲ್ಲೆಗೈದ ಕಿಡಿಗೇಡಿಗಳು ಹಲ್ಲೆ ➤ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 04. ಕಾರು ಚಾಲಕನಲ್ಲಿ ಟೋಲ್ ಕೇಳಿದ್ದಕ್ಕೆ ಕಾರಿನಲ್ಲಿದ್ದ ಏಳೆಂಟು ಮಂದಿ ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಸಿಬ್ಬಂದಿಯ ಕೈ ಮೂಲೆ ಮುರಿದ ಘಟನೆ ಸುರತ್ಕಲ್ ನ ಟೋಲ್ ಗೇಟ್ ನಲ್ಲಿ ರವಿವಾರ ರಾತ್ರಿ ನಡೆದಿದೆ. ಭಾನುವಾರದಂದು ರಾತ್ರಿ ವೇಳೆ  ಟೋಲ್ ಗೇಟ್ ಗೆ ಬಿಳಿ ಬಣ್ಣದ ಕೆ.ಎ.47 ರಿಜಿಸ್ಟ್ರೇಷನ್ ನಂಬರಿನ ಸ್ವಿಫ್ಟ್ ಕಾರೊಂದು ಬಂದಿದ್ದ ವೇಳೆ ಟೋಲ್ ಸಿಬ್ಬಂದಿಯು ಕಾರಿನ ಚಾಲಕನಲ್ಲಿ ಟೋಲ್ ಕೇಳಿದ್ದಾನೆ, ಅಷ್ಟಕ್ಕೆ ಸಿಟ್ಟುಗೊಂಡ ಕಾರಿನಲ್ಲಿದ್ದ

ಟೋಲ್ ಸಿಬ್ಬಂದಿ ಮೇಲೆ ಹಲ್ಲೆಗೈದ ಕಿಡಿಗೇಡಿಗಳು ಹಲ್ಲೆ ➤ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೃಷಿ ಕಾನೂನು ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ ➤ ಮತ್ತೆ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 04.  ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ  ದೆಹಲಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆಯಲ್ಲಿ ಹಲವರು ಮೃತಪಟ್ಟಿದ್ದು, ಭಾನುವಾರದಂದು ಮಧ್ಯರಾತ್ರಿ ಮತ್ತೆ ಮೂರು ರೈತರು ಮೃತಪಟ್ಟಿರುವ ಘಟನೆ ನಡೆದಿವೆ. ಓರ್ವ ರೈತ ಹೃದಯಸ್ತಂಭನದಿಂದ ಮೃತಪಟ್ಟರೆ, ಮತ್ತೋರ್ವರರು  ಜ್ವರದಿಂದ ಬಳಲಿ ಮೃತಪಟ್ಟಿದ್ದು, ಮತ್ತೋರ್ವ ರೈತನ ಸಾವಿಗೆ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿದುಬರಬೇಕಿದೆ. ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಲಿಧ್ರಾ ಗ್ರಾಮದ ಶಮ್ಶೀರ್ ಸಿಂಗ್ (45) ಪಂಜಾಬ್ ನ ಬಥಿಂದಾ ಜಿಲ್ಲೆಯ ಚೌಕೆ ಗ್ರಾಮದ

ಕೃಷಿ ಕಾನೂನು ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ ➤ ಮತ್ತೆ ಮೂವರು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಚಿರತೆ ಪ್ರತ್ಯಕ್ಷ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 04. ಬಡಾವಣೆಯೊಂದರ ಕಾಂಪೌಂಡ್ ಗೋಡೆಯ ಮೇಲೆ ಚಿರತೆ ಮತ್ತು ಎರಡು ಚಿರತೆ ಮರಿಗಳು ಓಡಾಡಿರುವುದು ಪಡೀಲ್ ನಿಂದ ವರದಿಯಾಗಿದೆ. ಇಲ್ಲಿನ ಬಡಾವಣೆಯ ಚಂದ್ರಶೇಖರ್ ಭಟ್ ಎಂಬವರ ಅಂಗಳದಲ್ಲಿರುವ ಕಾಂಪೌಂಡ್ ಗೋಡೆಯ ಮೇಲೆ ಈ ಚಿರತೆಗಳು ಇರುವುದನ್ನು ಅವರ ಪತ್ನಿ ನೋಡಿರುವುದಾಗಿ ತಿಳಿದು ಬಂದಿದೆ.

ಪುತ್ತೂರು: ಚಿರತೆ ಪ್ರತ್ಯಕ್ಷ..! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದ ಯುವತಿ

(ನ್ಯೂಸ್ ಕಡಬ) newskadaba.com ಚೆನ್ನೈ, ಜ.04. ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ತಮಿಲಕುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಯುವತಿಯು ಶೋಲಾವರಂನಲ್ಲಿನ ಚಿಕ್ಕಮ್ಮನ ಮನೆಗೆ ತೆರಳಿದ್ದ ವೇಳೆ ಅಲ್ಲಿದ್ದ ಅಜಿತ್ ಎಂಬಾತನು ಆಕೆಯ ಅತ್ಯಾಚರಾಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈತನ ಕೃತ್ಯಕ್ಕೆ ಆಕೆ ವಿರೋಧಿಸಿದಾಗ ಚಾಕು ತೋರಿಸಿ ಬೆದರಿಕೆ ಹಾಕಿದ್ದು, ಈ ಸಂದರ್ಭ ಆತನಿಂದ ಚಾಕುವನ್ನು ಕಸಿದು ಆತನ ಕುತ್ತಿಗೆಗೆ ಇರಿದಿದ್ದಾಳೆ. ಪರಿಣಾಮ ಅಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದ ಯುವತಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಬಸ್ ಹಾಗೂ ಓಮ್ನಿ ನಡುವೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 04. ಓಮ್ನಿ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಧರ್ಮಸ್ಥಳ ಸಮೀಪದ ಕನ್ಯಾನದಲ್ಲಿ ನಡೆದಿದೆ. ಬೇಕರಿ ಲೈನ್ ಸೇಲ್ ಮಾಡುವ ಓಮ್ನಿ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಪರಿಣಾಮ ಚಾಲಕನಿಗೆ ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ: ಬಸ್ ಹಾಗೂ ಓಮ್ನಿ ನಡುವೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ‌ ಹಚ್ಚಿದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 04. ಎಸ್ಡಿಪಿಐ ಕಛೇರಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಇಂದು ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ರಾತ್ತಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪೈಂಟ್ ಡಬ್ಬ ಪತ್ತೆಯಾಗಿದ್ದು, ಪೈಂಟ್ ಸುರಿದು ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಎಸ್ಡಿಪಿಐ ಮುಖಂಡರು ಆಗ್ರಹಿಸಿದ್ದಾರೆ.

ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ‌ ಹಚ್ಚಿದ ದುಷ್ಕರ್ಮಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top