ಶತಮಾನೋತ್ಸವ ಸಂಭ್ರಮದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ – ನಾಳೆ (ಎ.17) ನೂತನ ಪ್ರವೇಶ ದ್ವಾರದ ಉದ್ಘಾಟನೆ, ಕೃತಜ್ಞತಾ ಬಲಿಪೂಜೆ
ಕಡಬ: ಮಂಗಳೂರು ಧರ್ಮಪ್ರಾಂತದ ಆಧೀನದಲ್ಲಿರುವ ಕಡಬದ ಸೈಂಟ್ ಜೋಕಿಮ್ ಚರ್ಚ್ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿದ್ದು, ಎ. 17 ರಂದು ವಿವಿಧ ಧರ್ಮಪ್ರಾಂತಗಳ ಧರ್ಮಾಧ್ಯಕ್ಷರ ಉಪಸ್ಥಿತಿಯಲ್ಲಿ ಚರ್ಚ್‌ನ ನೂತನ ಪ್ರವೇಶ ದ್ವಾರದ ಉದ್ಘಾಟನೆ, ಶತಮಾನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮ ಹಾಗೂ ಕೃತಜ್ಞತಾ ಬಲಿಪೂಜೆ ನೆರವೇರಲಿದೆ. ಬೆಳಗ್ಗೆ ಘಂಟೆ 9.30ಕ್ಕೆ ಧರ್ಮಾಧ್ಯಕ್ಷರಿಗೆ ಸ್ವಾಗತ, 9.40ಕ್ಕೆ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ಆಶೀರ್ವಚನ, 10 ಘಂಟೆಗೆ ಕೃತಜ್ಞತಾ ಬಲಿಪೂಜೆ ನೆರವೇರಲಿದೆ. ಪೂರ್ವಾಹ್ನ 11.30 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮ […]








