(ನ್ಯೂಸ್ ಕಡಬ) newskadaba.com ಜ. 12. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಅಂಗರಾಜೆ ಜಾಕು ಎಂಬವರಿಗೆ ಮಾಸಾಶನ ಪರಿಶೀಲನೆ ಮಾಡಲಾಯಿತು.
ಮನೆಗೆ ಆಧಾರ ಸ್ತಂಭವಾಗಿದ್ದ ಮಗ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬಿದ್ದು ಮೃತಪಟ್ಟಿದ್ದು, ದೊಡ್ಡ ಮಗಳು ಹೃದ್ರೋಗ ಸಮಸ್ಯೆಯಿಂದ ಬಳಲುತಿದ್ದಾರೆ. ಇನ್ನೋರ್ವ ಮಗಳು ಬುದ್ಧಿಮಾಂದ್ಯೆಯಾಗಿದ್ದು, ಸೊಸೆ ಬೀಡಿ ಕಟ್ಟಿ ನಾಲ್ಕು ಜನರ ಜೀವನ ನಡೆಯುತ್ತಿದೆ. ಇವರಿಗೆ ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾರವರು ಮಾಸಾಶನ ಪರಿಶೀಲನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಕೆದಿಲ ‘A’ ಒಕ್ಕೂಟದ ಸೇವಾಪ್ರತಿನಿಧಿ ಶಾರದಾ, ‘B’ ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ್, ಶೀನಪ್ಪ ಹಾಗೂ ಗಿರೀಶ ಉಪಸ್ಥಿತರಿದ್ದರು.