ಮಗುವನ್ನು ದತ್ತು ಪಡೆದ ನೌಕರರಿಗೂ ಪಿತೃತ್ವ, ಮಾತೃತ್ವ ರಜೆ ಮಂಜೂರು; ಸರ್ಕಾರ ಆದೇಶ

(ನ್ಯೂಸ್ ಕಡಬ) newskadaba.com .11:ಮಗು ದತ್ತು ಪಡೆದುಕೊಂಡ ಸರ್ಕಾರಿ ನೌಕರರಿಗೆ ಪಿತೃತ್ವ ಮತ್ತು ಮಾತೃತ್ವ ರಜೆ ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮಗು ದತ್ತು ಪಡೆದ ತಾಯಿಗೆ ಒಂದು ವರ್ಷ ವೇತನ ಸಹಿತ ರಜೆ ನೀಡಲಾಗುತ್ತದೆ.

Nk Cake House

ಸರ್ಕಾರದ ಅಧಿಸೂಚನೆ (1)ರಲ್ಲಿ ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ 60 ದಿವಸಗಳ ರಜೆ ನೀಡಲು ಅನುಮತಿಸಲಾಗಿದೆ. ರಜೆ 60 ದಿವಸಗಳು ಮೀರದಂತೆ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ, ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ, ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಅಂತಹ ಮಹಿಳಾ ಸರ್ಕಾರಿ ನೌಕರಳು ದತ್ತಕದ ಸಮಯದಲ್ಲಿ ಬೇರೆ ಎರಡು ಮಕ್ಕಳನ್ನು ಹೊಂದಿರತಕ್ಕದ್ದಲ್ಲ ಎಂಬ ಷರತ್ತು ವಿಧಿಸಲಾಗಿದೆ. ಸರ್ಕಾರದ ಅಧಿಸೂಚನೆ (2) ರಲ್ಲಿ, ಪುರುಷ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಇದೇ ಮಾದರಿಯ ಸೌಲಭ್ಯವನ್ನು ದತ್ತಕ ಪಡೆಯುವ ರಾಜ್ಯ ಸರ್ಕಾರಿ ನೌಕರರಿಗೂ ಸಹ ಮಾತೃತ್ವ ಮತ್ತು ಪಿತೃತ್ವ ರಜೆಯ ಮಾದರಿಯಲ್ಲಿ ರಜೆಯನ್ನು ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತಿದೆ.

Also Read  ವಳಕಡಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ➤ಹೈನುಗಾರಿಕೆಯಿಂದ ಮಹಿಳೆಯರೂ ಅರ್ಥಿಕವಾಗಿ ಸಬಲೀಕರಣ-ರವಿರಾಜ್ ಹೆಗ್ಡೆ

ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ವ್ಯಾಪ್ತಿಯ ಅರ್ಹ ನೌಕರರ ಪ್ರಕರಣಗಳಲ್ಲಿ ಮಗುವನ್ನು ದತ್ತು ಪಡೆಯುವಂತಹ ಸರ್ಕಾರಿ ನೌಕರರಿಗೆ ಎರಡು ಜೀವಂತ ಮಕ್ಕಳನ್ನು ಹೊಂದಿರತಕ್ಕದ್ದಲ್ಲವೆಂಬ ಷರತ್ತಿಗೆ ಒಳಪಟ್ಟು ಮಗುವಿಗೆ ಒಂದು ವರ್ಷ ತುಂಬುವ ಅವಧಿಗೆ ಮೀರದಂತೆ ಮಹಿಳಾ ನೌಕರರಿಗೆ ಹೆರಿಗೆ ರಜೆ ಮಾದರಿಯಲ್ಲಿ 180 ದಿನಗಳು ಮತ್ತು ಪುರುಷ ನೌಕರರಿಗೆ ಪಿತೃತ್ವ ರಜೆ ಮಾದರಿಯಲ್ಲಿ 15 ದಿನಗಳ ರಜೆಯ ಮಂಜೂರಾತಿ ಅವಕಾಶವನ್ನು ಕಲ್ಪಿಸಿದೆ. ಈ ಅಂಶಗಳನ್ನು ಅವಲೋಕಿಸಿ ರಾಜ್ಯ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

Also Read  ಪ್ರತಿ ಕಂಬಳಕ್ಕೂ 5 ಲ.ರೂ. ನೀಡಲು ರಾಜ್ಯ ಸರ್ಕಾರ ಆದೇಶ

error: Content is protected !!
Scroll to Top