ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಆನ್ಸಿಲ್ ಶಾಜಿ ಜೋನ್ ಗೆ ಡಿಸ್ಟಿಂಕ್ಷನ್

(ನ್ಯೂಸ್ ಕಡಬ) newskadaba.com ಜ. 11. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸಿದ ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಆನ್ಸಿಲ್ ಶಾಜಿ ಜೋನ್ 451 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಈತನಿಗೆ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿ ನೀಡಿರುತ್ತಾರೆ. ಈತ ಕಡಬ ಹಳೆಸ್ಟೇಷನ್ ಶಾಜಿ ಕೆ ಜೋನ್ ಹಾಗೂ ಸುಪ್ರೀತ ಶಾಜಿ ದಂಪತಿಗಳ ಪುತ್ರ.

error: Content is protected !!
Scroll to Top