‘ರಾಜ್ಯದಲ್ಲಿ ನಡೆದ ನಕ್ಸಲ್ ಶರಣಾಗತಿ ಸಂಶಯ ಮೂಡಿಸುತ್ತಿದೆ’- ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಜ.11ಎರಡು ದಿನಗಳ ಹಿಂದೆ 6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರಕಾರ ನಡೆದು ಕೊಂಡ ರೀತಿ ಸಂಶಯ ಮೂಡಿಸುತ್ತಿದೆ. ಈ ಹಿಂದೆ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದ್ದಾರೆ.

Nk Cake House

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್‌ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತೆ. ಆದರೆ ಇಲ್ಲಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಕಿಡಿಕಾರಿದರು. ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ. ಇವರು ನಾಗರಿಕ ಸಮಾಜದ ಮೇಲೆ ಇವರು ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ಆದರೆ ಮೊನ್ನೆ ನಡೆದ ನಕ್ಸಲರ ಶರಣಾಗತಿಯ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ. ಅಷ್ಟು ಮಾತ್ರವಲ್ಲದೆ ಶರಣಾಗತಿಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯ ಕೊರತೆ ಇದ್ದ ಹಾಗೆ ಉಲ್ಟಾ-ಪುಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read  ಕಡಬ: ತಲೆಮರೆಸಿಕೊಂಡಿದ್ದ ಆರೋಪಿ ಮೈಸೂರಿನಲ್ಲಿ ಪತ್ತೆ..! ➤ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ ಕಡಬ ಪೊಲೀಸರು

error: Content is protected !!
Scroll to Top