ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ‘ವಾತ್ಸಲ್ಯ ಕಿಟ್’ ವಿತರಣೆ

(ನ್ಯೂಸ್ ಕಡಬ) newskadaba.com ಜ. 10. ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ
ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ನಡೆಯುವ ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಸದಸ್ಯರಾದ ಪೆರ್ನೆ ವಲಯದ ಕೆದಿಲದ ಕಮಲ ಎಂಬವರಿಗೆ ಮಂಜೂರಾದ ವಾತ್ಸಲ್ಯ ಕಿಟ್ ನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾರವರು ವಿತರಿಸಿದರು.

ಈ ಸಂದರ್ಭದಲ್ಲಿ ಕೆದಿಲ ‘A’ ಒಕ್ಕೂಟದ ಸೇವಾಪ್ರತಿನಿಧಿ ಶಾರದಾ, ‘B’ ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ ಮತ್ತು ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ್, ಶೀನಪ್ಪ ಹಾಗೂ ಗಿರೀಶ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top