ಮಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಸ್ಕ್ಯಾನಿಂಗ್ ಗೆ ತನ್ನದೇ QR ಕೋಡ್ ಇಟ್ಟ ಸಿಬ್ಬಂದಿ- 58 ಲಕ್ಷ ವಂಚನೆ

(ನ್ಯೂಸ್ ಕಡಬ) newskadaba.com ಜ.10 ಮಂಗಳೂರು: ಬಂಕ್‌ನ ಸಿಬ್ಬಂದಿಯೇ ಸಂಸ್ಥೆಯ QR ಕೋಡ್ ಬದಲಿಗೆ ತನ್ನ ವೈಯಕ್ತಿಕ QR ಕೋಡ್ ಬಳಸಿ ಮಾಲೀಕನಿಗೆ 58ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬಂಗ್ರಕೂಳೂರಿನ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

ಬಂಗ್ರಕೂಳೂರಿನಲ್ಲಿರುವ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ 15 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಕೃತ್ಯಎಸಗಿದ್ದಾನೆ. ಈತನು ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದ. ಆರೋಪಿಯು 2023 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ QR Code ತೆಗೆದು ತನ್ನ ವೈಯಕ್ತಿಕ ಖಾತೆಯ QR Code ಹಾಕಿದ್ದನು.

Also Read  ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನ ಪಾಸಿಟಿವ್

Nk Cake House

ಗ್ರಾಹಕರು ಬಂಕ್‌ ಕ್ಯೂಆರ್ ಕೋಡ್ ಎಂದು ನಂಬಿ “Mohandas Kulur Retail Outlet” ಲಿಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಗೆ ಹಣ ಜಮೆ ಮಾಡುತ್ತಿದ್ದರು. ಹೀಗೆ ಖಾತೆಗೆ ಒಟ್ಟು 58,85,333ರೂ. ಹಣವನ್ನು ವರ್ಗಾಯಿಸಿದ್ದಾನೆ.

error: Content is protected !!
Scroll to Top