ಚಿತ್ರಕಲಾ ಗ್ರೇಡ್ ಪರೀಕ್ಷೆ- ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢ ಶಾಲೆಗೆ ಶೇಕಡಾ 100 ಫಲಿತಾಂಶ; ಅಂಜನಾ ಜೇಮ್ಸ್ ಪ್ರಥಮ, ಲವ್ಯಶ್ರೀ ದ್ವಿತೀಯ

(ನ್ಯೂಸ್ ಕಡಬ) newskadaba.com ಕಡಬ, ಜ. 07. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ ಬಂದಿದೆ.

ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ ಪಡೆದು ಕಡಬ ತಾಲೂಕಿಗೆ ಪ್ರಥಮ, ಲವ್ಯಶ್ರೀ 475 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಶಿವಾನಿ ಡಿ ಎ 463 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ ಲೋಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಣಮ್ ಎಸ್ 472 ಅಂಕ ಪಡೆದು ಕಡಬ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ.

ಸೈಂಟ್ ಆನ್ಸ್ ಪ್ರೌಢಶಾಲೆ

ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 9ನೇ ತರಗತಿ ವಿದ್ಯಾರ್ಥಿಗಳಾದ ಸ್ಮಿತಾ ಬಿ ಎಸ್ 429, ತೇಜಸ್ವಿನಿ 423 ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಅಮೃತಾ ಪಿ ಎಸ್ 419, ಸೋನು 417, ಎ.ಕೆ.ಶಾಹಿದ್ ಯೂಸುಫ್ 410, ಯಶಸ್ ಪಿ.ಡಿ. 406 ಅಂಕಗಳನ್ನು ಪಡೆದಿರುತ್ತಾರೆ.

Also Read  ಅಂತಿಮ ನಮನಕ್ಕೆ ಬಂದ ಆರ್ ಎಸ್ಎಸ್ ಕಾರ್ಯಕರ್ತನಿಗೆ ಲಾಠಿ ಚಾರ್ಜ್ ಹಿನ್ನೆಲೆ ➤ ಎಸ್ಐ ಸೇರಿದಂತೆ ಹಲವು ಪೊಲೀಸರ ಅಮಾನತಿಗೆ ಹಿಂಜಾವೇ ಆಗ್ರಹ

ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 8ನೇ ತರಗತಿ ವಿದ್ಯಾರ್ಥಿಗಳಾದ ತೀಕ್ಷಾ ಎಸ್ 457, ಅವನಿ ಪಿ.ಬಿ 445, ಹಿತಾ ಸಿ.ಎ 439, ಕೃತಿಕಾ 438, ಧೃತಿ ರೈ 432, ತೃಷನ್ ಕೆ.ಎಸ್ 428, ಪ್ರತೀಕ್ಷಾ ಬಿ.ಜಿ 423, ಹಿತಾಶ್ರೀ ಪಿ.ಬಿ 422 ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ತನ್ಯಾ ಹೆಗ್ಡೆ 418, ಕಾರ್ತಿಕ್ ಪಿ 410, ಪ್ರವೀಟಾ ಸೋನಲ್ ಮಸ್ಕರೇನಸ್ 409 ಅಂಕಗಳನ್ನು ಪಡೆದಿರುತ್ತಾರೆ.

 

ಸೈಂಟ್ ಜೋಕಿಮ್ಸ್ ಪ್ರೌಢಶಾಲೆ

ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 9ನೇ ತರಗತಿ ವಿದ್ಯಾರ್ಥಿಗಳಾದ ಚೈತನ್ಯ ಪಿ 455 ,ವಂಶಿ ಬಿ.ಎಂ 440, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ವರ್ಷಿತಾ 419, ಅನುಶ್ರೀ ಯನ್ 412, ಜೀಕ್ಷಿತ 402 ಅಂಕಗಳನ್ನು ಪಡೆದಿರುತ್ತಾರೆ.

Also Read  ಕಡಬ: ಎಂಡೋ ಪೀಡಿತೆ ಯುವತಿ ಮೃತ್ಯು

ಲೋಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 8ನೇ ತರಗತಿಯ ವಿದ್ಯಾರ್ಥಿಗಳಾದ ಮರಿಯಮತ್ ರಾಫಿಯ 421, ಎ ಧನ್ವಿ ರೈ 420, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ, ಎ ಚೈತ್ರೇಶ್ ರೈ 410 ಸುದೀಕ್ಷಾ 403, ಪೂರ್ವಿ 402 ಅಂಕಗಳನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ನೀಡಿರುತ್ತಾರೆ. ಸಂಸ್ಥೆಯ ಸಂಚಾಲಕರಾದ ವಂದನೀಯ ರೆ. ಫಾದರ್ ಪ್ರಕಾಶ್ ಪೌಲ್ ಡಿ ಸೋಜಾ, ಸೈಂಟ್ ಆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂದನೀಯ ರೆ.ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರೀಲತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

error: Content is protected !!
Scroll to Top