ವಿಶ್ವದ ಅತಿ ಹಿರಿಯ ಒಲಿಂಪಿಯನ್‌ ನಿಧನ

(ನ್ಯೂಸ್ ಕಡಬ) newskadaba.com ಜ.03 ಬುಡಾಪೆಸ್ಟ್‌: ಐದು ಬಾರಿಯ ಒಲಿಂಪಿಕ್ ಚಾಂಪಿಯನ್, ವಿಶ್ವದ ಹಿರಿಯ ಒಲಿಂಪಿಕ್ ಚಾಂಪಿಯನ್‌ ಎನಿಸಿದ್ದ ಹಂಗೆರಿಯ ಜಿಮ್ನಾಸ್ಟ್‌ ಆ್ಯಗ್ನೆಸ್‌ ಕೆಲೆಟಿ ಅವರು ಗುರುವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 103 ವರ್ಷ ವಯಸ್ಸಾಗಿತ್ತು. ಅವರ ನಿಧನವನ್ನು ಹಂಗೇರಿಯನ್ ಒಲಿಂಪಿಕ್ ಸಮಿತಿ ತಿಳಿಸಿದೆ. ‘ಆ್ಯಗ್ನೆಸ್‌ ಕೆಲೆಟಿ ಹಂಗೆರಿ ಕಂಡ ಮಹಾನ್ ಜಿಮ್ನಾಸ್ಟ್‌’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಚಿನ್ನದ ಪದಕ ಗೆದದ್ದು 31ನೇ ವಯಸ್ಸಿನಲ್ಲಿ. ಆಗ ಅವರ ಸಮಕಾಲೀನ ಜಿಮ್ನಾಸ್ಟ್‌ಗಳು ನಿವೃತ್ತರಾಗಿದ್ದರು. 1956ರ ಒಲಿಂಪಿಕ್ಸ್‌ನಲ್ಲಿ ಅವರು ನಾಲ್ಕು ಚಿನ್ನದ ಪದಕ್ಕೆ ಕೊರಳೊಡ್ಡಿದ್ದರು. ಆಗ ಚಿನ್ನ ಗೆದ್ದ ಅತಿ ಹಿರಿಯ ಜಿಮ್ನಾಸ್ಟ್‌ ಎಂಬ ಹಿರಿಮೆಯೂ ಅವರದಾಗಿತ್ತು. ಅವರು ಒಟ್ಟು ಒಲಿಂಪಿಕ್ಸ್‌ನಲ್ಲಿ ಐದು ಚಿನ್ನ ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ.

Also Read  ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ "ಕೊರೋನಾ" ಭೀತಿ

Nk Cake House

error: Content is protected !!
Scroll to Top