ಅಮೆರಿಕಾ: ಕಟ್ಟಡಕ್ಕೆ ಬಡಿದು ವಿಮಾನ ಪತನ: 2 ಸಾವು , 18 ಜನರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಜ.03 ಲಾಸ್ ಏಂಜಲೀಸ್‌‌: ಹೊಸ ವರ್ಷಕ್ಕೂ ಮುನ್ನವೇ ಎರಡೆರಡು ಭೀಕರ ವಿಮಾನ ಅಪಘಾತ ಕಂಡು ಇಡೀ ಜಗತ್ತೇ ಬೆಚ್ಚಿ ಬಿದ್ದಿತ್ತು. ಇದೀಗ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಣ್ಣ ವಿಮಾನವೊಂದು ಗುರುವಾರ ವಾಣಿಜ್ಯ ಕಟ್ಟಡಕ್ಕೆ ಅಪ್ಪಳಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಲಾಸ್ ಏಂಜಲೀಸ್‌ನ ಆಗ್ನೇಯಕ್ಕೆ 25 ಮೈಲಿ (40 ಕಿಲೋ ಮೀಟರ್) ದೂರದಲ್ಲಿರುವ ಫುಲ್ಲರ್ಟನ್ ಮುನ್ಸಿಪಲ್ ಏರ್‌ಪೋರ್ಟ್ ಬಳಿ ಮಧ್ಯಾಹ್ನದ ವೇಳೆಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

Also Read  ಕಡಬ: ಅಪಘಾತ ಗಾಯಾಳುವನ್ನು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಸರ್ಕಲ್ ಇನ್ಸ್‌ಪೆಕ್ಟರ್ ➤ ಉಮೇಶ್ ಉಪ್ಪಳಿಕೆಯವರ ಮಾನವೀಯ ಕಾರ್ಯಕ್ಕೆ ಪ್ರಶಂಸೆ

ಈ ಬಗ್ಗೆ ಲಾಸ್ ಏಂಜಲೀಸ್‌ನ ಪೊಲೀಸರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಇಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

Nk Cake House

error: Content is protected !!
Scroll to Top