ಸುಳ್ಯ: ಮೀಸಲು ಅರಣ್ಯದಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ; 30 ಮಂದಿ ವಶ, ಮುಚ್ಚಳಿಕೆ ಬರೆಸಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಜ.02 ಸುಳ್ಯ: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ವ್ಯಾಪ್ತಿಯ ಮೀಸಲು ಅರಣ್ಯದ ಭಾಗವಾದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮವಾಗಿ ನುಗ್ಗಿ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ 30 ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಮೂಲಗಳ ಪ್ರಕಾರ, ಮಂಗಳವಾರ ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶವಾಗಿದ್ದರು ಎಂದು ಹೇಳಲಾಗಿದೆ. ಸೂಕ್ಷ್ಮ ಮೀಸಲು ಅರಣ್ಯ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಕಚ್ಚಿದ ಹೆಬ್ಬಾವು ಜೊತೆ ಉಡುಪಿಯ ಆಸ್ಪತ್ರೆಗೆ ಬಂದು ದಾಖಲಾದ ► ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್!

Nk Cake House

error: Content is protected !!
Scroll to Top