ಉಡುಪಿ: ಸ್ಟಾಕ್ ಮಾರ್ಕೆಟ್ ಹೂಡಿಕೆ ನೆಪದಲ್ಲಿ 49 ಲಕ್ಷ ರೂ. ವಂಚನೆ

(ನ್ಯೂಸ್ ಕಡಬ) newskadaba.com .01: ಅಹಮದಾಬಾದ್: ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದಲ್ಲಿ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ವೃದ್ಧರೊಬ್ಬರಿಗೆ 49 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಮೂಡುಬೆಳ್ಳೆ ನಿವಾಸಿ ಫ್ರಾನ್ಸಿಸ್ ಕ್ಯಾಸ್ಟಲಿನೋ (72) ಆನ್‌ಲೈನ್ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ವಂಚನೆಗೊಳಗಾದ ವೃದ್ಧ.ವಂಚಕರು ಕ್ಯಾಸ್ಟೆಲಿನೊ ಅವರ ಮಗನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು “ಸ್ಟಾಕ್ ಮಾರ್ಕೆಟ್ ನ್ಯಾವಿಗೇಶನ್” ಹೆಸರಿನ ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾರೆ. ಗುಂಪಿನ ಸದಸ್ಯರು ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆ ಆಕರ್ಷಕ ಮಾಹಿತಿಯನ್ನು ಒದಗಿಸುವುದರೊಂದಿಗೆ, ಗಮನಾರ್ಹ ಆದಾಯ ನೀಡುವುದಾಗಿ ಭರವಸೆ ನೀಡಿದರು. ಕ್ಯಾಸ್ಟೆಲಿನೊ ಮತ್ತು ಅವನ ಮಗನ ವಿಶ್ವಾಸವನ್ನು ಗಳಿಸಿದ ವಂಚಕರು ಸ್ಟಾಕ್ ಮಾರ್ಕೆಟ್ ನಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಾರೆ.

Also Read  ಮೂರು ವರುಷದ ಪ್ರೀತಿಗೆ ಮನೆಯವರಿಂದ ಸಮ್ಮತಿ ➤ ಆದರೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವತಿ.?!!

ವಂಚಕರ ಸಲಹೆಯಂತೆ ಕ್ಯಾಸ್ಟೆಲಿನೊ ಅವರ ಖಾತೆಯಿಂದ 12 ಲಕ್ಷ ರೂ., ಅವರ ಪತ್ನಿ 10.5 ಲಕ್ಷ ರೂ., ಮತ್ತು ಅವರ ಮಗ 21.5 ಲಕ್ಷ ರೂ. ಹಣವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 2024ರ ಡಿಸೆಂಬರ್ 30 ರಂದು ವರ್ಗಾಯಿಸಿದ್ದಾರೆ. ಒಟ್ಟಾರೆಯಾಗಿ ಕ್ಯಾಸ್ಟೆಲಿನೊ ಅವರ ಕುಟುಂಬವು 49 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿರುತ್ತದೆ.

ಬಳಿಕ ದೂರುದಾರರು ರಿಟರ್ನ್ಸ್ ಅಥವಾ ಹೂಡಿಕೆ ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ವಂಚಕರು ಮತ್ತಷ್ಟು ಹಣವನ್ನು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ದೂರುದಾರರು ಹಲವು ಬಾರಿ ಹೂಡಿಕೆ ಹಣವನ್ನು ಹಿಂಪಡೆಯಲು ಯತ್ನಿಸಿದರೂ, ರಿಟರ್ನ್ಸ್ ಅಥವಾ ಅಸಲು ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಹತ್ರಾಸ್‌ ದಲಿತ ಯುವತಿಯ ಮೇಲೆ ಗ್ಯಾಂಗ್‌ರೇಪ್‌ ಪ್ರಕರಣ ➤ ಪ್ರಮುಖ ಆರೋಪಿಗೆ ಜೀವಾವಧಿ

Nk Cake House

error: Content is protected !!
Scroll to Top