ಪಾಲ್ತಾಡು: ವಿಷ್ಣುಮೂರ್ತಿ ದೈವದ ಒತ್ತೆಕೋಲ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ಒತ್ತೆಕೋಲವು ನಡೆಯಿತು.

ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಗಣಹೋಮ, ಶುದ್ದಿ ಕಲಶ, ಮಧ್ಯಾಹ್ನ ಕಲಶ ಪೂಜೆ ನಡೆಯಿತು.ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 5000 ಕ್ಕೂ ಮಿಕ್ಕಿ ಜನರು ಅನ್ನಪ್ರಸಾದ ಸ್ವೀಕರಿಸಿದರು.ಅನ್ನಸಂತರ್ಪಣೆಯ ಬಳಿಕ ಕುಳಿಚಟ್ಟು ನಡೆಯಿತು. ನಂತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಪ್ರಾತಃಕಾಲ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಹರಿಕೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಗುಳಿಗನ ಕಟ್ಟೆಯಲ್ಲಿ ಮುಳ್ಳುಗುಳಿಗನ ಕೋಲ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ರೈ ಪಾಲ್ತಾಡು, ವಿಲಾಸ್ ರೈ ಪಾಲ್ತಾಡು, ಅಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು, ಕಾರ್ಯದರ್ಶಿ ನವೀನ್ ರೈ ನಡುಮನೆ, ಕೋಶಾಧಿಕಾರಿ ವಿನೋದ್ ರೈ ಪಾಲ್ತಾಡು, ಶೀಲಾವತಿ ಎಸ್ ರೈ , ಜೀರ್ಣೋದ್ದಾರ ಸಮಿತಿ ಸದಸ್ಯರು, ದೈವದ ಪರಿಚಾರಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಪುತ್ತೂರು ಶಾಸಕರ ಬೇಟಿ
ಒತ್ತೆಕೋಲ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕಿ, ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ ಬೇಟಿ ನೀಡಿದರು.

error: Content is protected !!

Join the Group

Join WhatsApp Group