ತೆರಿಗೆ ವಂಚಕರನ್ನು ಪತ್ತೆಹಚ್ಚಲು ಡಿಜಿ ಯಾತ್ರಾ ದತ್ತಾಂಶ ಬಳಕೆ

(ನ್ಯೂಸ್ ಕಡಬ) newskadaba.com ಡಿ.31 ನವದೆಹಲಿ: ತೆರಿಗೆ ವಂಚಕರನ್ನು ಪತ್ತೆಹಚ್ಚಲು ಡಿಜಿ ಯಾತ್ರಾ ಡೇಟಾವನ್ನು ಬಳಕೆ ಮಾಡುತ್ತಿದೆ ಎಂಬ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯನ್ನು ಆದಾಯ ತೆರಿಗೆ ಇಲಾಖೆ ಸ್ಪಷ್ಟವಾಗಿ ತಳ್ಳಿಹಾಕಿದೆ.

Nk Cake House

ವರದಿ ಬಗ್ಗೆ ಪ್ರತಿಕ್ರಿಯಿಸಿದ ಐಟಿ ಇಲಾಖೆ, ಇಂದಿನವರೆಗೆ ಆದಾಯ ತೆರಿಗೆ ಇಲಾಖೆ ಅಂತಹ ಯಾವುದೇ ಡೇಟಾ ಸಂಗ್ರಹಿಸಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದೆ.

“ತೆರಿಗೆ ವಂಚಿಸುವವರನ್ನು ಪತ್ತೆಹಚ್ಚಲು ಡಿಜಿಯಾತ್ರಾ ಡೇಟಾವನ್ನು ಬಳಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ, ಇಂದಿನವರೆಗೆ ಆದಾಯ ತೆರಿಗೆ ಇಲಾಖೆಯಿಂದ ಅಂತಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಐಟಿ ಇಲಾಖೆ ಸ್ಪಷ್ಟಪಡಿಸಿದೆ.

Also Read  ಏರ್ ಇಂಡಿಯಾ ಕಚೇರಿ ಸ್ಥಳಾಂತರ

error: Content is protected !!
Scroll to Top