ಪುತ್ತೂರು: ಕಾರು ಹೊಂಡಕ್ಕೆ ಉರುಳಿ ಬಿದ್ದು ಮೂವರು ದಾರುಣ ಮೃತ್ಯು

(ನ್ಯೂಸ್ ಕಡಬ) newskadaba.com ಡಿ. 28: ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು ಮೂವರು ಮೃತಪಟ್ಟ ಘಟನೆ ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.

ಸುಳ್ಯ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ್, ಚಿದಾನಂದ್, ರಮೇಶ್ ನಾಯ್ಕ್ ಮೃತರು ಎಂದು ತಿಳಿದು ಬಂದಿದೆ.

Nk Cake House

ಇವರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ಆಗಮಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ ಪರ್ಲಡ್ಕದಲ್ಲಿ ಈ ಅಪಘಾತ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿ ಅಪಘಾತ ನಡೆದಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನು ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯಲ್ಲೇ ಘಟನೆ ನಡೆದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ ಎಂದು ವರದಿಯಾಗಿದೆ.

Also Read  ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ...???

error: Content is protected !!
Scroll to Top