ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಏಕಹಂತದ ಚುನಾವಣೆ ► ಇಂದಿನಿಂದಲೇ ನೀತಿ ಸಂಹಿತೆ ಜಾರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.27. ಮುಂಬರುವ ಮೇ ತಿಂಗಳ 12 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯು ಏಕಹಂತದಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ.

ಮಂಗಳವಾರದಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಏಕಹಂತದಲ್ಲಿ ಮತದಾನ ನಡೆಯಲಿದ್ದು, ಮೇ 18 ರಂದು ಮತ ಎಣಿಕೆ ನಡೆಯಲಿದೆ. 2 ಕೋಟಿ 51 ಲಕ್ಷ ಪುರುಷ ಮತದಾರರು ಹಾಗೂ 2 ಕೋಟಿ 44 ಲಕ್ಷ ಮಹಿಳಾ ಮತದಾರರು ಸೇರಿ ಒಟ್ಟು 4 ಕೋಟಿ 96 ಲಕ್ಷ ಮತ ಚಲಾಯಿಸಲಿದ್ದಾರೆ. 56,000 ಮತಗಟ್ಟೆಗಳಿರಲಿದ್ದು, ಈ ಬಾರಿ ಇವಿಎಂ ಜತೆ ವಿವಿ ಪ್ಯಾಟ್ (ಮತ ಖಾತರಿ ಯಂತ್ರ) ಇರಲಿದೆ ಎಂದು ರಾವತ್​ ತಿಳಿಸಿದರು. ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದರಿಂದ ಇಂದಿನಿಂದಲೇ ನೀತಿ ಸಂಹಿತ ಜಾರಿಯಾಗಿದೆ.

Also Read  ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ➤  7ನೇ ವೇತನ ಆಯೋಗ ವರದಿ ಶೀಘ್ರ ಸಲ್ಲಿಕೆಗೆ ಮನವಿ

error: Content is protected !!
Scroll to Top