ಇನ್ಮುಂದೆ ವಿಮಾನದ ಕ್ಯಾಬಿನ್ ಒಳಗೆ 7ಕೆ.ಜಿ ಮೀರದ 1 ಬ್ಯಾಗ್ ಮಾತ್ರ ಕೊಂಡೊಯ್ಯಲು ಅವಕಾಶ

(ನ್ಯೂಸ್ ಕಡಬ) newskadaba.com ಡಿ. 25  ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಕೇವಲ 1 ಬ್ಯಾಗ್ ಮಾತ್ರ ಕ್ಯಾಬಿನ್ ಒಳಗೆ ಕೊಂಡೊಯ್ಯಬಹುದು. ಜೊತೆಗೆ ಅವರು ಕೊಂಡೊಯ್ಯುವ ಬ್ಯಾಗ್ 7 ಕೆ.ಜಿ. ಮೀರಿರಬಾರದು. ಅಲ್ಲದೆ ಬ್ಯಾಗ್ 115 ಸೆಂ.ಮೀ.ಗಿಂತ ಹೆಚ್ಚಿರಬಾರದು ಎಂದು ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೋ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಏರುತ್ತಿರುವ ಹಿನ್ನೆಲೆ ಬಿಸಿಎಎಸ್ ಮತ್ತು ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹೊಸ ಹ್ಯಾಂಡ್ ಬ್ಯಾಗೇಜ್ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಿದೆ. ಹೊಸ ಬಿಸಿಎಎಸ್ ಹ್ಯಾಂಡ್ ಬ್ಯಾಗೇಜ್ ನೀತಿಯ ಪ್ರಕಾರ ಪ್ರಯಾಣಿಕರು ಈಗ ವಿಮಾನದೊಳಗೆ ಕೇವಲ ಒಂದು ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಈ ನಿಯಮ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ ಅನ್ವಯವಾಗುತ್ತದೆ. ಇನ್ನು ಫಸ್ಟ್ ಅಥವಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು 10 ಕೆ.ಜಿ. ವರೆಗೆ ಕೊಂಡೊಯ್ಯಬಹುದು. ಈ ಹೊಸ ನಿಯಮ ಈ ವರ್ಷ ಮೇ  2ಕ್ಕಿಂತ ಮೊದಲ ಟಿಕೆಟ್ ಬುಕ್ ಮಾಡಿದವರಿಗೆ ಅನ್ವಯಿಸುವುದಿಲ್ಲ.

Also Read  ಮೋದಿಯನ್ನು ಹೊಗಲಿದ ಎನ್ಸಿ ನಾಯಕ ಒಮರ್ ಅಬ್ದುಲ್ಲಾ

Nk Cake House

ಮೇ 2ಕ್ಕಿಂತ ಮೊದಲು ಬುಕ್ ಮಾಡಿದ ಎಕಾನಮಿ ಪ್ರಯಾಣಿಕರು 8 ಕೆಜಿ, ಪ್ರೀಮಿಯಂ ಎಕಾನಮಿ ಪ್ರಯಾಣಿಕರು 10 ಕೆಜಿ ಮತ್ತು ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರು 12 ಕೆಜಿ ತೂಕದ ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

error: Content is protected !!
Scroll to Top