ಅಮಿತ್ ಶಾ ವಜಾಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಡಿ. 25  ಕಮಲನಗರ: ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಕಲಾಪದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ಅದನ್ನು ಖಂಡಿಸಿ ದಾಬಕಾ ವಲಯ ಮಾದಿಗ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಅಮಿತ್ ಶಾ ಅವರನ್ನು ವಜಗೊಳಿಸುವಂತೆ ಗ್ರಾಮದ ಭವಾನಿ ಮಂದಿರದಿAದ ನಾಡ ಕಚೇರಿ ಅವರಿಗೆ ಬೃಹತ್ ಪ್ರತಿಭಟನ ಮೆರವಣಿಗೆ ಮೂಲಕ ದಾಬಕ ನಾಡ ತಸಿಲ್ದಾರ್ ಅವರ ಮುಖಾಂತರ ಭಾರತ್ ಸರ್ಕಾರದ ಘನ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.


ಪ್ರತಿಭಟನೆ ಉದ್ದೇಶಿಸಿ ಸಮಾಜದ ಮುಖಂಡ ಸುಧಾಕರ್ ಕೊಳ್ಳುರ ರವರು ಮಾತನಾಡಿ ಅಮಿತ್ ಶಾ ಅವರು ಕೂಡಲೇ ಕ್ಷಮೆ ಕೇಳಬೇಕು ಮತ್ತು ಬಿಜೆಪಿ ವರಿಷ್ಠರು ಅಮಿತ್ ಶಾ ಅವರನ್ನು ಪಕ್ಷದಿಂದ ಉಚ್ಚಟನೆಗೊಳಿಸಬೇಕು ಎಂದು ಆಗ್ರಹಿಸಿದ್ದರು.
ಮಾದಿಗ ಸಮುದಾಯದ ಯುವ ಮುಖಂಡರಾದ ಆಕಾಶ್ ಶಿಂದೆ ,ಗೋಪಾಲ ಗಾಯಕವಾಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ಕಾಂಬಳೆ, ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಆನಂದ್ ಚೌಹಾಣ್, ಪ್ರಶಾಂತ್ ಹಟ್ಟೆ ,ಅಬ್ರಹಾಮ ಕಾರಂಜಿ, ಅರವಿಂದ್ ಮುಂತಾದರೂ ಉಪಸ್ಥಿತರಿದ್ದರು.

Also Read  ಕೂಳೂರು ನಾಗನಕಟ್ಟೆ ದ್ವಂಸ ಪ್ರಕರಣ ➤ ಎಂಟು ಮಂದಿ ಪೊಲೀಸ್ ವಶಕ್ಕೆ

Nk Cake House

error: Content is protected !!
Scroll to Top