(ನ್ಯೂಸ್ ಕಡಬ) newskadaba.com ಡಿ. 24. ಅಸೌಖ್ಯದಿಂದ ಬಳಲುತ್ತಿದ್ದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಆನಡ್ಕ (ಕರಿಮಜಲು) ಗಂಗಾಧರ ಸಪಲ್ಯ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಶೌಚಾಲಯದ ಅನುಕೂಲಕ್ಕಾಗಿ ಕೊಮೋಡೋ ವೀಲ್ ಚಯರ್ ನ್ನು ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದರವರು ಮತ್ತು ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾ ಮೇಡಂ ರವರು ವಿತರಿಸಿದರು. ಈ ಸಂದರ್ಭದಲ್ಲಿ ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ ಶಾರದಾರವರು, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ, ವೆಂಕಪ್ಪ ಹಾಗೂ ಗಿರೀಶರವರು ಉಪಸ್ಥಿತರಿದ್ದರು.