(ನ್ಯೂಸ್ ಕಡಬ) newskadaba.com ಡಿ. 24 ಹಾಸನ: ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಾಘತದಲ್ಲಿ ಕಾರಿನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ದೊಡ್ಡಪುರ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಹಾಸನ ನಗರದ ಹೊರವಲಯದ ದೊಡ್ಡಪುರ ಪೆಟ್ರೋಲ್ ಬಂಕ್ ಬಳಿ ನಡೆದ ಅಪಘಾತದಲ್ಲಿ ಚನ್ನರಾಯಪಟ್ಟಣ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದ ಅಭಿಷೇಕ್ (೩೨) ಹಾಗೂ ತುರುವೇಕೆರೆ ನಿವಾಸಿ ಮಂಜುನಾಥ್ (೨೮) ಇವರು ಸಾವನಪ್ಪಿದ ದುರ್ದೈವಿಗಳು.