(ನ್ಯೂಸ್ ಕಡಬ) newskadaba.com ಡಿ. 20. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B.C ಟ್ರಸ್ಟ್(ರಿ.) ವತಿಯಿಂದ ವಿಟ್ಲ ವ್ಯಾಪ್ತಿಯ 64 ಕಾರ್ಯಕ್ಷೇತ್ರದ 64 ಸೇವಪ್ರಾತಿನಿಧಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಂಡಿದ್ದು ಈ ತರಬೇತಿ ಕಾರ್ಯಗಾರವನ್ನು ಕೇಂದ್ರ ಕಚೇರಿ ಸೇವಾಪ್ರತಿ ವಿಭಾಗದ ಯೋಜನಾಧಿಕಾರಿ ಶ್ರೀ ಶಿವಪ್ರಸಾದ್ ವಿಧಿವತ್ತಾಗಿ ಉದ್ಘಾಟಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್, ಧರ್ಮಸ್ಥಳದ ಹಿನ್ನೆಲೆ ಹಾಗೂ ನಡೆದು ಬಂದ ದಾರಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಟ್ಲ ಯೋಜನಾಧಿಕಾರಿ ರಮೇಶ್ ರವರು ಪ್ರಾಸ್ತಾವಿಕ ಮಾತನ್ನಾಡಿದರು. ಕೇಂದ್ರ ಕಛೇರಿಯ ಸೇವಾ ಪ್ರತಿನಿಧಿ ವಿಭಾಗದ ಯೋಜನಾಧಿಕಾರಿಗಳು ಸೇವಾ ಪ್ರತಿನಿಧಿಗಳ ವಿವಿಧ ಕೆಲಸ ಕಾರ್ಯಗಳಿಗೆ ನೀಡಲಾಗುವ ಉತ್ತೇಜಕಗಳು ಗೌರವಧನ ದಿನ ಭತ್ಯೆ ಇತ್ಯಾದಿ ಸೇವಾ ಪ್ರತಿನಿಧಿಗಳಿರಬೇಕಾದ ಗುಣ ನಡತೆಗಳು, ಅರ್ಹತೆಗಳು ವಿದ್ಯಾಭ್ಯಾಸ ಇತ್ಯಾದಿಗಳ ಬಗ್ಗೆ ತಿಳಿಸಿದರು. ನಂತರ MIS ಯೋಜನಾಧಿಕಾರಿಗಳಾದ ಶ್ರೀಮತಿ ಶಕುಂತಲಾರವರು ಯೋಜನೆಯ ಕುರಿತು ಪ್ರಾಥಮಿಕ ದಶ ಅಂಶಗಳು ಬ್ಯಾಂಕ್ ಎಂ. ಒ ಯು ಎಂದರೇನು. ಅದರ ಪ್ರಾಮುಖ್ಯತೆ ಸಿಬಿಲ್, ಆರ.ಬಿಐ ಲೈಸೆನ್ಸ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಬಗ್ಗೆ ಸವಿವರವಾಗಿ ತಿಳಿಸಿದರು. ನಂತರ ಗುಂಪು ಲೆಕ್ಕಪರಿಶೋಧನಾ ವಿಭಾಗದ ಯೋಜನಾಧಿಕಾರಿ ಶ್ರೀ ಆನಂದರವರು ಬಡ್ಡಿ ಲೆಕ್ಕಾಚಾರ ವಿವಿಧ ರೀತಿಯ ಬಡ್ಡಿಗಳು ಇತರ ಸಂಸ್ಥೆಗಳ ಬಡ್ಡಿ ಲೆಕ್ಕಾಚಾರ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಬಡ್ಡಿದರದ ವಿಶ್ಲೇಷಣೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಕೊನೆಯದಾಗಿ ಸಿಆರ್ ಐ ಪ್ರಾಂಶುಪಾಲರಾದ ಶ್ರೀ ಸೋಮನಾಥರವರು ಮನೆ ಬೇಟಿಯ ಮಹತ್ವ, ವಿಧಾನ ಹಾಗೂ ಸಮರ್ಪಕ ಸಂವಹಣದಿಂದ ಆಗುವ ಲಾಭಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ತಾಂತ್ರಿಕ ಪ್ರಬಂಧಕರು ಶ್ರೀ ದಾದ ಫೀರ್ ಮೈಕ್ರೊಲ್ಯಾಬ್ ನಡೆಸಿಕೊಟ್ಟರು. ಕೃಷಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿ ಕಚೇರಿ ಪ್ರಬಂಧಕರಾದ ಶ್ರೀಮತಿ ವಾಣಿ ವಂದಿಸಿದರು.