(ನ್ಯೂಸ್ ಕಡಬ) newskadaba.com ಡಿ. 20: ಎನ್.ಆರ್.ಪುರದಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಯುವಕ ಮೃತಪಟ್ಟ ಘಟನೆ ಡಿ.19ರಂದು ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಕುಂದಲಿಕೆ ನಿವಾಸಿ ಸಜೇಶ್ ಮೃತ ಯುವಕ. ಯುವಕ ಎನ್. ಆರ್. ಪುರ ಬಳಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸಕ್ಕೆ ತೆರಳಿದ್ದು ಗುರುವಾರ ಮಧ್ಯಾಹ್ನ ಕೆಲಸದಿಂದ ಊಟಕ್ಕೆಂದು ತೆರಳುತಿದ್ದ. ಈ ವೇಳೆ ಎದುರಿನಿಂದ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸಜೇಶ್ ಗಂಭೀರ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.