ಪ್ರವಾಸೋದ್ಯಮ ಕೌಶಲ್ಯ ತರಬೇತಿ- ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ*

(ನ್ಯೂಸ್ ಕಡಬ) newskadaba.com ಡಿ. 19. 2024-25 ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI)  ಮೈಸೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (IHM) ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಂದ  ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Nk Cake House

ತರಭೇತಿ ವಿವರ :
1. ಫುಡ್ ಮತ್ತು ಬಿವರೇಜ್ ಸರ್ವೀಸ್ ಸ್ಟೀವರ್ಡ್ ತರಬೇತಿ: ವಿದ್ಯಾರ್ಹತೆ – ಕನಿಷ್ಟ 10ನೇ ತರಗತಿ ಪಾಸ್, ವಯಸ್ಸು – 20 ರಿಂದ 45 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಗುರಿ -100 ಹಾಗೂ ಪರಿಶಿಷ್ಟ ಪಂಗಡ – 49.

Also Read  ಕೋವಿಡ್ 19 ಹಿನ್ನಲೆ ➤ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ

2. ರೂಮ್ ಅಟೆಂಡೆಂಟ್ ತರಬೇತಿ: ವಿದ್ಯಾರ್ಹತೆ – ಕನಿಷ್ಟ 5ನೇ ತರಗತಿ ಪಾಸ್, ವಯಸ್ಸು – 20 ರಿಂದ 45 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಗುರಿ – 30 ಹಾಗೂ ಪರಿಶಿಷ್ಟ ಪಂಗಡ – 19.

3. ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ: ವಿದ್ಯಾರ್ಹತೆ – ಕನಿಷ್ಟ 12 ನೇ ತರಗತಿ ಪಾಸ್, ವಯಸ್ಸು – 20 ರಿಂದ 45 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಗುರಿ – 15 ಹಾಗೂ ಪರಿಶಿಷ್ಟ ಪಂಗಡ – 5.

4. ಮಲ್ಟಿ ಕುಶನ್ ಕುಕ್ ತರಬೇತಿ: ವಿದ್ಯಾರ್ಹತೆ – ಕನಿಷ್ಟ 8 ನೇ ತರಗತಿ ಪಾಸ್, ವಯಸ್ಸು – 20 ರಿಂದ 45 ವರ್ಷ, ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಗುರಿ – 147 ಹಾಗೂ ಪರಿಶಿಷ್ಟ ಪಂಗಡ – 89.

Also Read  ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ➤ಸಂಪತ್ ರಾಜ್ ಬಂಧನ

ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಒಂದನೇ ಮಹಡಿ, ಮಂಗಳೂರು ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣದಲ್ಲಿ ಪಡೆಯಬೇಕು.

ಹೆಚ್ಚಿನ ಮಾಹಿತಿಗೆ ಇ-ಮೇಲ್ ವಿಳಾಸ : adtourismmangalore@gmail.com (ದೂರವಾಣಿ ಸಂಖ್ಯೆ: 0824-2453926/ 9844535509) ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top