(ನ್ಯೂಸ್ ಕಡಬ) newskadaba.com ಡಿ. 16 ಬೆಳಗಾವಿ: ಮೈಸೂರಿನ ಮುಡಾ ಹಗರಣ, ವಕ್ಫ್ ಅವ್ಯವಹಾರ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ಅವರ ವರದಿ, ನನ್ನ ಮೇಲಿನ 150 ಕೋಟಿಯ ಆರೋಪ- ಇವೆಲ್ಲವುಗಳ ಸಮಗ್ರ ಸಿಬಿಐ ತನಿಖೆಗೆ ನೀವೇ ಆದೇಶ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ವಕ್ಫ್ ಜಾಗದ ವಿಚಾರದಲ್ಲಿ ಲಕ್ಷ ಲಕ್ಷ ಕೋಟಿಯ ಅವ್ಯವಹಾರ ಆಗಿದೆ ಎಂಬ ವರದಿ ಇದ್ದು ಅದರ ಸಮಗ್ರ ತನಿಖೆಯೂ ಆಗಲಿ ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದವರು ಕೆಲಸಕ್ಕೆ ಬಾರದ ಸಂಗತಿಗಳನ್ನು ಇವತ್ತು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಾಣಂತಿಯರ ಸಾವು, ಹಸುಗೂಸುಗಳ ಮರಣ, ಉತ್ತರ ಕರ್ನಾಟಕದ ವಿಚಾರಗಳು ಸದನದಲ್ಲಿ ಚರ್ಚೆ ಆಗಬಾರದೆಂಬ ಉದ್ದೇಶ ಇದರ ಹಿಂದಿದೆ ಎಂದು ಆಕ್ಷೇಪಿಸಿದರು.