ಡಿ.18ರಂದು ನಗರಪಾಲಿಕೆ ಬಜೆಟ್ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಡಿ. 13. ಮಂಗಳೂರು ಮಹಾನಗರ ಪಾಲಿಕೆಯ 2025-26 ನೇ ಸಾಲಿನ ಆಯವ್ಯಯ ತಯಾರಿಕೆ ಪ್ರಕ್ರಿಯೆ ಸಂಬಂಧಿಸಿದಂತೆ ಕರ್ನಾಟಕ ಪೌರಸಭೆಗಳ ಲೆಕ್ಕ ಪದ್ಧತಿ ಮತ್ತು ಬಜೆಟ್ ನಿಯಮಾವಳಿಗಳ ನಿಯಮದಂತೆ ಎರಡು ಸುತ್ತಿನ ಸಾರ್ವಜನಿಕ ಸಮಾಲೋಚನೆ ಸಭೆ ನಡೆಯಬೇಕಿದೆ.

ಮೊದಲನೇ ಸುತ್ತಿನ ಸಭೆ ಡಿಸೆಂಬರ್ 18ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಕಚೇರಿಯಲ್ಲಿ ಮೇಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಯವ್ಯಯ ತಯಾರಿಕೆಗೆ ಸಾರ್ವಜನಿಕ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆಗೆ ನೋಂದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರಕಾರೇತರ ಸಂಘ-ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top