ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್ ಹೆದ್ದಾರಿಯ ಕರ್ನಾಟಕ ಮಾರ್ಗ ಪ್ರಯಾಣಕ್ಕೆ ಮುಕ್ತ

(ನ್ಯೂಸ್ ಕಡಬ) newskadaba.com ಬೆಂಗಳೂರು, . 10. ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ ಪ್ರೆಸ್‌ವೇ ಕಾಮಾಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ಜನತೆಗೆ ಗುಡ್ ನ್ಯೂಸ್ ನೀಡಿದೆ. 260 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಪೈಕಿ ಕರ್ನಾಟಕದ 71 ಕಿಲೋಮೀಟರ್ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.

ಮಾರ್ಗದ ಮೂಲಕ ಚೆನ್ನೈ ಹಾಗೂ ಈ ರಸ್ತೆ ಹಾದು ಹೋಗುವ ಜಿಲ್ಲೆ ಹಾಗೂ ಪಟ್ಟಣಗಳಿಗೆ ತೆರಳುವವರು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. 71 ಕಿ.ಮೀ ಪ್ರಯಾಣಕ್ಕೆ ಕೇವಲ 30 ರಿಂದ 40 ನಿಮಿಷಗಳು ಸಾಕು ಎಂದು ಕೆಲ ಪ್ರಯಾಣಿಕರು ಹೇಳುತ್ತಿದ್ದಾರೆ. 71 ಕಿಲೋಮೀಟರ್ ಕರ್ನಾಟಕ ಮಾರ್ಗದ ಕೊನೆಯಲ್ಲಿ ಮಾಲೂರು, ಬಂಗಾರಪೇಟೆ, ಬೆಥಮಂಗಲ ಕಡೆಗೆ ಎಕ್ಸಿಟ್ ನೀಡಲಾಗಿದೆ. ಹೀಗಾಗಿ ಹಲವರು ಇದೀಗ ಈ ರಸ್ತೆಯನ್ನು ಬಳಕೆ ಮಾಡುತ್ತಿದ್ದರೆ. ಪ್ರಮುಖವಾಗಿ ಟೋಲ್ ಕೂಡ ಇಲ್ಲದ ಕಾರಣ ವೀಕೆಂಡ್‌ಗಳಲ್ಲಿ ಲಾಂಗ್ ಡ್ರೈವ್‌ಗಾಗಿ ಬೆಂಗಳೂರಿಗರು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ. ರಸ್ತೆ ಹಲವು ಹಳ್ಳಿಗಳು, ಗದ್ದೆ, ಸುಂದರ ತೋಟಗಳ ನಡುವಿನಿಂದ ಹಾದು ಹೋಗುತ್ತಿದೆ.

Also Read  ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

           

 

error: Content is protected !!
Scroll to Top