ಸಿರಿಯಾ ಅಧ್ಯಕ್ಷ ಪಲಾಯನ

(ನ್ಯೂಸ್ ಕಡಬ) newskadaba.com , ಡಿ. 09. ಡೆಮಾಸ್ಕಸ್‌: ಸಿರಿಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದ್ದು, ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ (HTS) ಬಂಡುಕೋರ ಪಡೆಗಳು ನಡೆಸಿದ ದಂಗೆಯಿಂದ ಬಷರ್ ಅವರ ಈ ಕಾಲು ಶತಮಾನಗಳ ಸಮೀಪದ ಆಡಳಿತ ಬಿದ್ದು ಹೋಗಿದೆ.

ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್ ಅಲ್-ಗೊಲಾನಿ ಅವರ ಎಚ್‌ಟಿಎಸ್‌ ಸಂಘಟನೆ ಈ ಹಿಂದೆ ಅಪಾಯಕಾರಿ ಭಯೋತ್ಪಾದಕ ಗುಂಪು ಅಲ್-ಖೈದಾ ದೊಂದಿಗೆ ಗುರುತಿಸಿಕೊಂಡಿತ್ತು. ಜಿಹಾದಿಯಾಗಿದ್ದ ಅಬು ಮೊಹಮ್ಮದ್ ಅಲ್-ಗೊಲಾನಿ ಇದೀಗ ರಾಷ್ಟ್ರ ನಿರ್ಮಾಣವನ್ನು ಪ್ರತಿಪಾದಿಸುವ ನಾಯಕನಾಗಿ ರೂಪಾಂತರಗೊಂಡಿದ್ದಾರೆ.

Also Read  ಲಾಕ್‌ಡೌನ್ ಉಲ್ಲಂಘಿಸಿದವರನ್ನು ಅರೆಸ್ಟ್ ಮಾಡಿ: ಡಿಸಿಗಳಿಗೆ ಸಿಎಂ ಸೂಚನೆ

error: Content is protected !!
Scroll to Top