ವಾಷಿಂಗ್ ಮಿಷಿನ್‌ ಸರ್ವೀಸ್ ಹೆಸರಲ್ಲಿ ಗ್ರಾಹಕರಿಗೆ ವಂಚನೆ: ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, . 09. ವಾಷಿಂಗ್ ಮಿಷಿನ್‌ ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ವಿವೇಕಾನಂದ ಎಂಟರ್‌ಪ್ರೆಸಸ್ ಮಾಲೀಕ ಚರಣ್ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಫ್‌ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ ಮನೆಗೆ ಹೋಗುತ್ತಿದ್ದ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬ ಖದೀಮರು ನಾವೇ ಐಎಫ್‌ಬಿ ಕಂಪನಿ ಸೇವಾದಾರರು ಎಂದು ಗ್ರಾಹಕರ ಮನೆಗೆ ತರಳಿ ಯಂತ್ರದಲ್ಲಿರುವ ಅಸಲಿ ಯಂತ್ರಗಳನ್ನು ಕಳಸಿಕೊಂಡು ನಕಲಿ ಮತ್ತು ಕಳಪೆ ವಸ್ತುಗಳನ್ನು ಅದಕ್ಕೆ ಹಾಕಿ ಸಾವಿರಾರು ರೂಪಾಯಿ ಸೇವಾಶುಲ್ಕವಾಗಿ ಪಡೆದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ. ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಸಮೀಪದ ಮನೆಯೊಂದಕ್ಕೆ ಸೇವೆ ನೀಡುವ ನೆಪದಲ್ಲಿ ಬಂದಿದ್ದ ಖದೀಮರನ್ನು ವಿವೇಕಾನಂದ ಎಂಟರ್‌ಪ್ರೈಸಸ್‌ ಮಾಲೀಕ ಹಾಗೂ ಐಎಫ್‌ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರ ಚರಣ್ ಮತ್ತು ತಂಡ ದಿಢೀರ್ ದಾಳಿ ನಡೆಸಿ 5 ಮಂದಿಯ ಪೈಕಿ ಮೂವರನ್ನು ಪೊಲೀಸರಿಗೆ ಒಪ್ಪಿಸಿ ವಂಚಕರ ಬೃಹತ್ ಜಾಲ ಬೇಧಿಸಲು ಮನವಿ ಮಾಡಿದ್ದಾರೆ.

Also Read  ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್. ಅಂಗಾರ ಅಧಿಕಾರ ಸ್ವೀಕಾರ

 

error: Content is protected !!