(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 07.ರಸ್ತೆಬದಿ ನಿಲ್ಲಿಸಲಾಗಿದ್ದ ಲಾರಿಯ ಟಯರ್ ಕದ್ದುಕೊಂಡು ಹೋದ ಘಟನೆ ಸುಳ್ಯದ ಪೆರಾಜೆಯಲ್ಲಿ ಶುಕ್ರವಾರ ನಡೆದಿದೆ.
ಈ ಲಾರಿಯಲ್ಲಿ ರಬ್ಬರ್ ಮರಗಳನ್ನು ಸಾಗಾಟ ಮಾಡಲಾಗುತ್ತಿತ್ತು. ನಾಲ್ಕು ದಿನಗಳ ಹಿಂದೆ ಲಾರಿಯನ್ನು ಪೆರಾಜೆಯ ರಸ್ತೆ ಬದಿಯಲ್ಲಿ ನಿಲ್ಲಿಸಿ ಮರ ಸಾಗಾಟಗಾರರು ತಮ್ಮ ಊರಾದ ಕೇರಳಕ್ಕೆ ತೆರಳಿದ್ದರು. ಆದರೆ ಇಂದು ಬಂದು ನೋಡುವಾಗ ಲಾರಿಯ ಒಂದು ಟಯರ್ ಕಳವಾಗಿರುವುದು ಬೆಳಕಿಗೆ ಬಂದಿದೆ.