ಭಾರತ ಮೂಲದ ವಿದ್ಯಾರ್ಥಿಗೆ ಚಾಕು ಇರಿತ..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ಭಾರತ ಮೂಲದ ವಿದ್ಯಾರ್ಥಿಯನ್ನು ಇರಿದು ಹತ್ಯೆಗೈದಿರುವ ಘಟನೆ ಕೆನಡಾದ ಒಂಟಾರಿಯೊದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ನಿವಾಸದಲ್ಲೇ ವಾಸವಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಮೃತ ವಿದ್ಯಾರ್ಥಿಯನ್ನು 22 ವರ್ಷದ ಗುರಾಸಿಸ್ ಸಿಂಗ್ ಎಂದು ಗುರುತಿಸಲಾಗಿದೆ. ಲ್ಯಾಂಬ್ಟನ್ ಕಾಲೇಜಿನಲ್ಲಿ ಮೊದಲನೆ ವರ್ಷದ ಬಿಸಿನೆಸ್ ಮ್ಯಾನೇಜ್ ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದ ಗುರಾಸಿಸ್ ಸಿಂಗ್ ಅನ್ನು ಆತನ ಕಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ 36 ವರ್ಷದ ಕ್ರಾಸ್ಲೀ ಹಂಟರ್ ಎಂಬ ವ್ಯಕ್ತಿ ರವಿವಾರ ಚೂರಿಯಿಂದ ಇರಿದಿದ್ದಾನೆ. ಅಡುಗೆ ಕೋಣೆಯಲ್ಲಿ ಇಬ್ಬರ ನಡುವಿನ ದೈಹಿಕ ಘರ್ಷಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಎರಡನೆ ದರ್ಜೆಯ ಹತ್ಯೆ ದೋಷಾರೋಪ ಹೊರಿಸಲಾಗಿದ್ದು, ಇಂದು ಆತನನ್ನು ಜುಡಿಷಿಯಲ್ ಅಧಿಕಾರಿಯ ಮುಂದೆ ಹಾಜರುಪಡಿಸಲಾಗುತ್ತದೆ.

Also Read  2020-21ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಕುರಿತು ಸುತ್ತೋಲೆ

 

 

error: Content is protected !!
Scroll to Top