ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 04. ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು.


ಸೋಮವಾರ ನೇತ್ರಾವತಿ ಈಜಾಡಲು ಸಂಜೆ ನದಿಯಲ್ಲಿ ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ಎಂಬಲ್ಲಿಯ ಓಡಿ ಎಂಬವರ ಪುತ್ರ ಪ್ರಸಾದ್ ವಿವಾಹಿತರಾಗಿದ್ದು ಪತ್ನಿ, ಓರ್ವ ಪುತ್ರ ಇದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಶೌರ್ಯ ತುರ್ತು ಸ್ಪಂದನ ಘಟಕದ ಸಂಯೋಜಕ ಸುಲೈಮಾನ್, ಕ್ಯಾಪ್ಟನ್ ಸಂತೋಷ್ ಮಾಚಾರ್, ಜಗದೀಶ್, ಸಂಜೀವ ಮೊದಲಾದವರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ಬೋಟ್ ಬಳಸಿ ನಿರಂತರ ಎರಡು ಗಂಟೆ ಹುಡುಕಾಟ ನಡೆಸಿದ್ದು ರಾತ್ರಿ 11 ಗಂಟೆ ವೇಳೆಗೆ ನದಿ ನೀರಿನ ಆಳದಲ್ಲಿ ಮೃತದೇಹ ಪತ್ತೆಯಾಯಿತು. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ನೆಲ್ಯಾಡಿ: ಬೃಹತ್ ಆಯಿಲ್ ದಂಧೆ ಭೇದಿಸಿದ ಪೊಲೀಸರು ➤ ನಾಲ್ವರ ಬಂಧನ

error: Content is protected !!
Scroll to Top