ಫೆಂಗಲ್ ಚಂಡಮಾರುತದ ಅಬ್ಬರ: ಪುದುಚೇರಿ, ವಿಲ್ಲುಪುರಂನಲ್ಲಿ ಭಾರಿ ಮಳೆ, ಒಂಬತ್ತು ಮಂದಿ ಸಾವು

(ನ್ಯೂಸ್ ಕಡಬ) newskadaba.com ಡಿ. 02. ಚೆನ್ನೈ:  ನಿಧಾನವಾಗಿ ಚಲಿಸುತ್ತಿರುವ ‘ಫೆಂಗಲ್’ ಚಂಡಮಾರುತ ವಿಲ್ಲುಪುರಂ ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯನ್ನುಂಟು ಮಾಡಿದೆ. ಶನಿವಾರ ರಾತ್ರಿಯಿಂದ ವಿಲ್ಲುಪುರಂ, ಪುದುಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ದಾಖಲೆಯ 49 ಸೆಂ.ಮೀ ಮಳೆಯಾಗಿದೆ.

ಇದು ಪುದುಚೇರಿ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಮತ್ತು ವಿಲ್ಲುಪುರಂನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು,ಮೈಲಂನಲ್ಲಿನ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ 51 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ಅಧಿಕೃತ ಮೂಲಗಳ ಪ್ರಕಾರ, ಪುದುಚೇರಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು, ತಿರುವಣ್ಣಾಮಲೈನಲ್ಲಿ ಮೂವರು ಮತ್ತು ವೆಲ್ಲೂರು ಮತ್ತು ಚೆನ್ನೈ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ವೆಲ್ಲೂರು, ರಾಣಿಪೇಟ್, ತಿರುಪತ್ತೂರ್, ಧರ್ಮಪುರಿ ಮತ್ತು ಸೇಲಂನಲ್ಲಿ ಶಾಲೆಗಳು ಮತ್ತು ತಿರುವಣ್ಣಾಮಲೈ, ಕಡಲೂರು, ವಿಲ್ಲುಪುರಂ, ಪುದುಚೇರಿ ಮತ್ತು ಕೃಷ್ಣಗಿರಿಯಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

Also Read  ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

error: Content is protected !!
Scroll to Top