ಫಿಕ್ಸಿಂಗ್‌ ಪ್ರಕರಣ: ದಕ್ಷಿಣ ಆಫ್ರಿಕಾದ 3 ಕ್ರಿಕೆಟಿಗರ ಬಂಧನ

(ನ್ಯೂಸ್ ಕಡಬ) newskadaba.com . 30. ಫಿಕ್ಸಿಂಗ್‌ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಕ್ರಿಕೆಟಿಗರನ್ನು ಬಂಧಿಸಲಾಗಿದೆ. ಈ ಹಿಂದೆ ವಿಶ್ವದ ಅಗ್ರ ಕ್ರಮಾಂಕದ ಏಕದಿನ ಬೌಲರ್‌ ಆಗಿದ್ದ, ಮಾಜಿ ವೇಗದ ಬೌಲರ್ ಲೊನ್ವಾಬೊ ತ್ಸೊಟ್ಸೊಬೆ, ವಿಕೆಟ್‌ಕೀಪರ್-ಬ್ಯಾಟರ್ ಥಾಮಿ ತ್ಸೊಲೆಕಿಲ್ ಮತ್ತು ಮಧ್ಯಮ ವೇಗಿ ಎಥಿ ಎಂಬಾಲಾಟಿ ಬಂಧಿತ ಕ್ರಿಕೆಟಿಗರು. 2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟದ ಸೆಕ್ಷನ್ 15 ರ ಅಡಿಯಲ್ಲಿ ಮೂವರ ವಿರುದ್ಧ ಆರೋಪ ಹೊರಿಸಲಾಗಿದೆ.

2015-16 ರಲ್ಲಿ ನಡೆದಿದ್ದ ದೇಶೀಯ ಟಿ20 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಮಾಡುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರ ಮೇಲೆ ನಿಷೇಧವನ್ನು ಹೇರಿತ್ತು. ತ್ಸೊಟ್ಸೊಬೆ ಅವರು ಎಲ್ಲಾ ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದವರು. ಜೂನ್ 2010 ರಲ್ಲಿ ಟ್ರಿನಿಡಾಡ್‌ ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಪದಾರ್ಪಣೆ ಮಾಡಿದ್ದು, ಒಟ್ಟು ಅವರು ಐದು ಟೆಸ್ಟ್‌ ಗಳನ್ನು ಆಡಿದರು.

Also Read  ಮೆಟ್ರೋ 2ನೇ ಹಂತದ ಕಾಮಗಾರಿ ವಿಳಂಬ           ನಿರ್ಮಾಣ ವೆಚ್ಚ ಬರೋಬ್ಬರೀ 40 ಸಾವಿರ ಕೋಟಿ ರೂ. ಏರಿಕೆ !

 

 

error: Content is protected !!
Scroll to Top