ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವು ಮಾ.24 ರಂದು ನಡೆಯಿತು.  ಕ್ರೀಡಾಕೂಟವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ  ಶ್ರೀ. ಕೆ. ಸೀತಾರಾಮ ರೈ ಸವಣೂರು ಇವರು,  “ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಒಲವು ಓದಿನ ಕಡೆಗೆ ಮಾತ್ರವಿದ್ದು, ಕ್ರೀಡೆಯ ಕಡೆಗೆ ಕಡಿಮೆಯಾಗುತ್ತಿದೆ.  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಜೊತೆ ಜೊತೆಯಲ್ಲಿ ಸಾಗಬೇಕು,  ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೇ ಇಂದು ಕಲಿಕೆಯಲ್ಲೂ ಮುಂದಿದ್ದಾರೆ ಹಾಗೂ ಶಿಸ್ತುಬದ್ಧ ಜೀವನಕ್ಕೆ ಕ್ರೀಡೆಯು ಅವಶ್ಯಕವಾಗಿದೆ” ಎಂದು ಹೇಳಿದರು.  ಇದೇ ಸಂದರ್ಭದಲ್ಲಿ ಯುವಜನ ಒಕ್ಕೂಟದ ರಾಜ್ಯಕಾರ್ಯದರ್ಶಿಯಾದ ಶ್ರೀ ಸುರೇಶ್ ರೈ ಸೂಡಿಮುಳ್ಳು ಇವರು ಸಂಸ್ಥೆಗೆ ಕ್ರೀಡಾ ಉಪಕರಣಗಳನ್ನು ನೀಡಿದರು.   ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮಿ ಎಸ್. ರೈ  ಉಪಸ್ಥಿತರಿದ್ದರು.  ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶ್ರೀ ರಘುನಾಥ್ ಬಿ. ಯಸ್, ಹಾಗೂ ಶ್ರೀಮತಿ ಬೇಬಿರಕ್ಷಾ  ಕ್ರೀಡಾಕೂಟವನ್ನು ಸಂಘಟಿಸಿದ್ದರು.  ಕ್ರೀಡಾ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಯಾದ ಅಬ್ದುಲ್ ಇರ್ಷಾದ್ ಪಿ.  ಇವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.  ಕ್ರೀಡೋತ್ಸವದಲ್ಲಿ ಭಾಗವಹಿಸಿದ ಎಲ್ಲರನ್ನು ಕ್ರೀಡಾ ಸಂಘದ ಜೊತೆಕಾರ್ಯದರ್ಶಿ ಕುಮಾರಿ ಸಂಧ್ಯಾ ಕೆ. ದ್ವಿತೀಯ ಬಿ.ಎ. ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಗುರುರಾಜ್ ಕೆ. ಹಾಗೂ ರೀಮಾ ರೋಸ್ ಡೇಸಾ ಇವರು  ಎಲ್ಲರನ್ನೂ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!
Scroll to Top