‘ಬಿಎಸ್ ವೈ ವಿರುದ್ಧ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ’- ಅಶ್ವಥ್ ನಾರಾಯಣ್

(ನ್ಯೂಸ್ ಕಡಬ) newskadaba.com ನ. 29. ಬೆಂಗಳೂರು:  ಯಡಿಯೂರಪ್ಪನವರ ಮೇಲೆ ಸಚಿವ ಸಂಪುಟ ಸಭೆಯಲ್ಲಿ ತನಿಖೆ ಆಗಬೇಕು ಎಂಬ ಪ್ರಯತ್ನ ಮಾಡಿರುವುದು ಖಂಡನೀಯ. ಅಲ್ಲದೇ ತನಿಖೆ ಮಾಡಬೇಕು ಎನ್ನುವುದು ದ್ವೇಷದ ರಾಜಕಾರಣ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರ ಖಂಡನೀಯ. ದ್ವೇಷದ ರಾಜಕೀಯ ಕೈಬಿಟ್ಟು ನಿಮ್ಮ ಆಡಳಿತ ಹೇಗೆ ಉತ್ತಮ ಮಾಡುವುದು ಎಂಬ ಬಗ್ಗೆ ಯೋಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಪೆಟ್ರೋಲ್ ಡಿಸೇಲ್ ಜಿ.ಎಸ್.ಟಿ ವ್ಯಾಪ್ತಿಗೆ ತರಲು ಪ್ರಯತ್ನ

 

error: Content is protected !!
Scroll to Top