ಭಾರತಕ್ಕೆ ಎಲ್ಇಟಿ ಉಗ್ರನನ್ನು ಹಸ್ತಾಂತರಿಸಿದ ರುವಾಂಡಾ

(ನ್ಯೂಸ್ ಕಡಬ) newskadaba.com . 29. ಭಯೋತ್ಪಾದಕ ಕೃತ್ಯ ಎಸಗಲು  ಜೈಲಿನಲ್ಲೇ ಸಂಚು ರೂಪಿಸಿದ್ದ, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ್ದ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ರುವಾಂಡಾ ದೇಶ ಭಾರತಕ್ಕೆ ಹಸ್ತಾಂತರಿಸಿದ್ದು, ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್ಐಎ, ಬೆಂಗಳೂರು ಕಾರಾಗೃಹದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ಮತ್ತು ಇದಕ್ಕಾಗಿ ಯುವಕರ ನೇಮಕಾತಿ ನಡೆಸಿದ್ದ ಸಲಾನ್ನನ್ನು ಎನ್ಐಎಆರ್ಐಬಿ, ಇಂಟರ್ಪೋಲ್ ಮತ್ತು ಎನ್ಸಿಬಿ ಸಹಾಯದಿಂದ ವಶಕ್ಕೆ ಪಡೆಯಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದೆ.

Also Read  ‘ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ’

 

error: Content is protected !!
Scroll to Top