ಆದಿವಾಸಿಗಳಿಗೆ ಮೂಲಸೌಕರ್ಯ, ಆಸ್ತಿ ಪತ್ರ ಒದಗಿಸಬೇಕು: ಸಿ.ಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, . 27.  ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಸೂಕ್ತ ಮೂಲ ಸೌಕರ್ಯ, ಹಾಗೂ ಆಸ್ತಿ ಮಾರಾಟ ಪತ್ರಗಳನ್ನು ನೀಡುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸೂಚನೆ ನೀಡಿದರು.

ಸಚಿವ ಈಶ್ವರ ಬಿ ಖಂಡ್ರೆ ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು, ಆದಿವಾಸಿಗಳಿಗೆ ಸೂಕ್ತ ವಸತಿ, ಕುಡಿಯುವ ನೀರು, ನೈರ್ಮಲ್ಯ, ರಸ್ತೆ ಸಂಪರ್ಕ ಮತ್ತು ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಅರಣ್ಯದ ಅಂಚಿನಲ್ಲಿರುವ ಭೂಮಿಯನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ನಿವೇಶನ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಡಿ ಮನೆ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಅಧಿಕಾರಿಗಳು ಮೈಸೂರಿನಲ್ಲಿ 2,963 ಕುಟುಂಬಗಳಿಗೆ ನಿವೇಶನ ಇಲ್ಲದಿರುವುದು, 1,222 ಕುಟುಂಬಗಳಿಗೆ ನಿವೇಶನಗಳಿವೆ, ಆದರೆ, ಮನೆಗಳಿಲ್ಲ. ಚಾಮರಾಜನಗರದಲ್ಲಿ 5,164 ಕುಟುಂಬಗಳು ಶಾಶ್ವತ ಮನೆಗಳನ್ನು ಹೊಂದಿವೆ. 234 ಕುಟುಂಬಗಳಿಗೆ ನಿವೇಶನ ಇಲ್ಲ, 2,761 ಕುಟುಂಬಗಳು ನಿವೇಶನ ಹೊಂದಿದ್ದರೂ ಮನೆಗಳಿಲ್ಲ, ಕೊಡಗಿನಲ್ಲಿ 2,882 ಕುಟುಂಬಗಳು ಶಾಶ್ವತ ಮನೆಗಳನ್ನು ಹೊಂದಿವೆ. ಅಲ್ಲದೆ, 1,050 ಕುಟುಂಬಗಳಿಗೆ ನಿವೇಶನಗಳಿಲ್ಲ ಮತ್ತು 1,182 ಕುಟುಂಬಗಳಿಗೆ ಮನೆಗಳಿಲ್ಲ ಎಂದು ಮಾಹಿತಿ ನೀಡಿದರು.

Also Read  ಪುತ್ತೂರು ಪತ್ರಕರ್ತ ಸಂಘದ ನಾಮಫಲಕ ತುಳು ಭಾಷೆಯಲ್ಲಿರಲಿದೆ ➤ ಅಧ್ಯಕ್ಷ ಶ್ರವಣ್ ಕುಮಾರ್ ನಾಳ

error: Content is protected !!
Scroll to Top